ವಿಜಯ್ ದೇವರಕೊಂಡ, ಸಮಂತ ನಟನೆಯ ಖುಷಿ”ಚಿತ್ರ ಸೆಪ್ಟಂಬರ್ 1 ರಂದು ತೆರೆಗೆ

ತೆಲುಗು ಚಿತ್ರರಂಗದಲ್ಲಿ ಕ್ರೇಜ್ ಹೆಚ್ಚಿಸಿರುವ ಬಹು ನಿರೀಕ್ಷಿತ ಚಿತ್ರ “ಖುಷಿ” ಚಿತ್ರ ಸೆಪ್ಟಂಬರ್ 1 ರಂದು ಬಿಡುಗಡೆಯಾಗಲು ಸಜ್ಜಾಗಿದೆ.ವಿಜಯ್ ದೇವರಕೊಂಡ ಮತ್ತು ಸಮಂತ ಜೋಡಿಯ ಚಿತ್ರ ತೆಲುಗು,ಕನ್ನಡ, ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ತೆರೆಗೆ ಬರಲಿದೆ.

ನಿರ್ದೇಶಕ ಶಿವ ನಿರ್ವಾಣ ” ಖುಷಿ” ಚಿತ್ರದ ಮೂಲಕ ಪ್ರೀತಿ, ನಗು ಮತ್ತು ಸಂತೋಷ, ಅಪರೂಪದದ ಮತ್ತು ವಿಭಿನ್ನ ಕಥೆಯ ಮೂಲಕ ಕಟ್ಟಿಕೊಡು ಮುಂದಾಗಿದ್ದಾರೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ” ಖುಷಿ ” ಚಿತ್ರದ ಟ್ರೈಲರ್ ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು.
ಹೈದರಾಬಾದ್‍ನಲ್ಲಿ “ಖುಷಿ” ಚಿತ್ರದ ಪಂಚ ಭಾಷೆಯ ಟ್ರೈಲರ್ ಬಿಡುಗಡೆ ಇತ್ತು ಅಲ್ಲಿ ಚಿತ್ರತಂಡ ಮಾಹಿತಿ ನೀಡಿತು. ಇದೇ ತಿಂಗಳ 15 ರಂದು ಹೈದರಾಬಾದ್‍ನಲ್ಲಿ ಆಡಿಯೋ ಬಿಡುಗಡೆ ಹಮ್ಮಿಕೊಳ್ಳಲಿದ್ದು ನಟಿ ಸಮಂತಾ ಸೇರಿದಂತೆ ಎಲ್ಲಾ ಗಾಯಕರು ಭಾಗಿಯಾಗಲಿದ್ದಾರೆ. ಟಿಕೆಟ್ ಉಚಿತವಾಗಿದ್ದು ಅಭಿಮಾನಿಗಳು ಎಲ್ಲರೂ ಬನ್ನಿ ಎಂದು ನಟ ವಿಜಯ್ ದೇವರ ಕೊಂಡ ಮನವಿ ಮಾಡಿದ್ದಾರೆ.
ಖುಷಿ ಚಿತ್ರದಲ್ಲಿ ಸಮಂತಾ ಅವರೊಂದಿಗೆ ಉತ್ತಮ ಕೆಮಿಸ್ಟ್ರಿ ಮೂಡಿಬಂದಿದೆ. ,ಮದುವೆಗಳ ಬಗ್ಗೆ ಸಿಹಿ ಕಹಿ ಎರಡು ನೋಡಿದ್ದೇನೆ. ಗೌತಮ್ ಮೆನನ್, ಪ.ರಂಜಿತ್, ಚೆಟ್ರಿ ಸೇರಿ ಹಲವರ ಜೊತೆ ತಮಿಳಿನಲ್ಲಿ ಕೆಲಸ ಮಾಡುವ ಆಸೆ ಇದೆ ಎಂದರು

ನಿರ್ದೇಶಕ ಶಿವ ನಿರ್ವಾಣ ಆಕ್ಣನ್ ಕಟ್ ಹೇಳಿದ್ದು ನನ್ನ ನಾಲ್ಕನೇ ಚಿತ್ರ. ಮೊದಲ ಚಿತ್ರಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಖುಷಿನಚಿತ್ರಕ್ಕೆ ಸಿಗುತ್ತಿರುವ ಪೆÇ್ರತ್ಸಾಹಕ ನೋಡಿ ಮೊದಲ ಚಿತ್ರದಲಿ ಅಭಿಮಾನಿಗಳನ್ನು ಸಂಭ್ರಮ ಮಿಸ್ ಮಾಡಿಕೊಂಡಿದ್ದೆ .ಈಗ ಫುಲ್ ಫಿಲ್ ಆಗಿದೆ ಎಂದರು.
ಚಿತ್ರಕ್ಕೆ ಶಿವ ನಿರ್ವಾಣ ಆಕ್ಷನ್ ಕಟ್ ಹೇಳಿದ್ದು ಚಿತ್ರದಲ್ಲಿ ವಿಜಯ್ ದೇವರಕೊಂಡ,ಸಮಂತ, ಜಯರಾಮ್, ಸಚಿನ್ ಖೇಡೇಕರ್ , ಮುರುಳಿ ಶರ್ಮಾ ,ಲಕ್ಷ್ಮಿ ,ಆಲಿ ಶರಣ್ಯ ರೋಹಿನಿ, ವೆನ್ನೆಲಾ ಕಿಶೋರ್, ರಾಹುಲ್ ರಾಮಕೃಷ್ಣ , ಶ್ರೀಕಾಂತ್ ಅಯಂಗಾರ್ , ಶರಣ್ಯ ಪ್ರದೀಪ್ ಸೇರಿದಂತೆ ಮತ್ತಿತರ ತಾರಾಗಣ ಚಿತ್ರದಲ್ಲಿದೆ.
ಚಿತ್ರಕ್ಕೆ ಹೇಶಮ್ ಅದ್ಬುಲ್ ವಹಾಬ್ ಸಂಗೀತ ನೀಡಿದ್ದು ಚಿತ್ರದ ಹಾಡುಗಳು ಅಭಿಮಾನಿಳನ್ನು ಮೋಡಿ ಮಾಡಿದ್ದು ಚಿತ್ರನಂದಿರಕ್ಕೆ ಪ್ರೇಕ್ಷಕರನ್ನು ಕರೆ ತರಲು ಪ್ರಮುಖ ಪಾತ್ರ ವಹಿಸಿದೆ.

ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೈತ್ರಿ ಮೂವಿ ಮೇಕರ್ ಚಿತ್ರವನ್ನು ನಿರ್ಮಾಣ ಮಾಡಿದೆ. ಸಿಇಒ ಚೆರ್ರಿ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಸೆಪ್ಟಂಬರ್ 1 ರಂದು ಬಿಡುಗಡೆಯಾಗಲಿದೆ.ಸಹಕರಿಸಿ ಎಂದು ಕೇಳಿಕೊಂಡರು
ಚಿತ್ರಕ್ಕೆ ಮುರುಳಿ , ಸಂಗೀತ ನಿರ್ದೇಶಕಹೇಶಮ್ ಅದ್ಬುಲ್ ವಹಾಬ್ ಸಂಗೀತ ಮಾತನಾಡಿದರು
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕ ನವೀನ್ ಯರ್ರಿನೇನಿ ಮಾತನಾಡಿ ಕನ್ನಡದಲ್ಲಿಯೂ ಎರಡು ಮೂರು ಕಥೆ ಕೇಳಿದ್ದೇನೆ. ಚಿತ್ರ ಮಾಡುವ ಉದ್ದೇಶವಿದೆ ಎಂದರು

ಕನ್ನಡದಲ್ಲಿ ಡಬ್ಬಿಂಗ್
ಖುಷಿ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಲಾಗುತ್ತಿದೆ. ಯಾವುದೇ ರಾಜಿ ಇಲ್ಲದೆ ಡಬ್ಬಿಂಗ್ ಮಾಡಲಾಗುವುದು. ಪ್ರೀತಿಗೆ ಭಾಷೆಯಲ್ಲಿ ಪ್ರೀತಿಯ ವಿಷಯವನ್ನು ಯಾವುದೇ ಭಾಷೆಯಲ್ಲಿ ಮಾಡಿದರೂ ಪ್ರೀತಿಸುತ್ತಾರೆ ಎಂದರು ನಟ ವಿಜಯ್ ದೇವರಕೊಂಡ.
ಸಾಮಾನ್ಯವಾಗಿ ಆಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ. ಆದರೆ ನಾವು ಪ್ರೀತಿ ಯನ್ನು ನಂಬಿ ಸಿನಿಮಾಮಾಡಲಾಗಿದೆ ಎಂದರು
ಸದ್ಯಕ್ಕೆ ಮದುವೆಯಾಗುವುದಿಲ್ಲ ಅವಕಾಶ ಸಿಕ್ಕರೆ ಹಿಂದಿ ಸಿನಿಮಾ ಮಾಡುವೆ . ಕಥೆ ಮತ್ತು ಪಾತ್ರ ಮಾಡಲಾಗುವುದು ಎಂದು ಹೇಳಿದರು.
ಮದುವೆ ಸದ್ಯಕ್ಕಿಲ್ಲ
ಕನಿಷ್ಟ 2ರಿಂದ 3ವರ್ಷ ಮದುವೆ ಸದ್ಯಕ್ಕಿಲ್ಲ. ಅದರ ಬಗ್ಗೆ ಚಿಂತಿಸಲೂ ಹೋಗುವುದಿಲ್ಲ ಸದ್ಯ ಸದ್ಯ ಚಿತ್ರಗಳ ಬಗ್ಗೆ ಗಮನ ಕೊಟ್ಟಿದ್ದೇನೆ. ಎಂದಿದ್ದಾರೆ ನಟ ವಿಜಯ್ ದೇವರಕೊಂಡ
ಮದುವೆಗಳ ಬಗ್ಗೆ ಸಿಹಿ ಕಹಿ ಎರಡು ನೋಡಿದ್ದೇನೆ. ನನ್ನ ಮದುವೆ ಬಗ್ಗೆ ನನ್ನದೇ ಆದ ಕಲ್ಪನೆ ಇದೆ ಎಂದರು. ಖುಷಿ ಚಿತ್ರದ ನಾಯಕಿಯನ್ನಾಗಿ ಸಮಂತ ಬಿಟ್ಟು ಬೇರೊಬ್ಬರು ಮನಸ್ಸಿನಲ್ಲಿ ಬರಲಿಲ್ಲ ಎನ್ನುವ ಸಂಗತಿಯನ್ನೂ ಬಯಲು ಮಾಡಿದ್ದಾರೆ

ಪ್ರೀತಿಗೆ ಜಾತಿ ಧರ್ಮವಿಲ್ಲ
ಸಾಮಾನ್ಯವಾಗಿ ಆಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ. ಆದರೆ ನಾವು ಪ್ರೀತಿ ನಂಬಿ ಫ್ಯಾನ್ ಇಂಡಿಯಾ ಸಿನಿಮಾ ಮಾಡಲಾಗಿದೆ. ಪ್ರೀತಿ ವಿಷಯದಲ್ಲಿ ಜಾತಿ, ಧರ್ಮಕ್ಕೆ ಕೆಲಸವಿಲ್ಲ ಎಂದರು ನಟ ವಿಜಯ್ ದೇವರಕೊಂಡ.
ಖುಷಿ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಲಾಗುತ್ತಿದೆ. ಯಾವುದೇ ರಾಜಿ ಇಲ್ಲದೆ ಡಬ್ಬಿಂಗ್ ಮಾಡಲಾಗುವುದು. ಪ್ರೀತಿಗೆ ಭಾಷೆಯಲ್ಲಿ ಪ್ರೀತಿಯ ವಿಷಯ ಯಾವುದೇ ಭಾಷೆಯಲ್ಲಿ ಮಾಡಿದರೂ ಪ್ರೀತಿಸುತ್ತಾರೆ. ಖಂಡಿತ ಗೆಲುವು ಸಿಗಲಿದೆ ಎಂದಿದ್ದಾರೆ