Coastal beauty Sonal Montero joins Rolex Komal

ರೋಲೆಕ್ಸ್ ಕೋಮಲ್ ಗೆ ಜೊತೆಯಾದ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ - CineNewsKannada.com

ರೋಲೆಕ್ಸ್ ಕೋಮಲ್ ಗೆ ಜೊತೆಯಾದ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ

‘ರೋಲೆಕ್ಸ್ ಕೋಮಲ್’ ಗೆ ಜೊತೆಯಾದ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ ಹೊಸ ಚಿತ್ರ ಸೆಟ್ಟೇರಿದೆ ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲೂ ಬ್ಯುಸಿಯಾಗುತ್ತಿದ್ದಾರೆ.

ಶ್ರೀನಿವಾಸ್ ಮಂಡ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ಕೋಮಲ್ ಬಣ್ಣ ಹಚ್ಚುತ್ತಿದ್ದಾರೆ. ಫೋಟೋಶೂಟ್ ಮೂಲಕ ಗಮನ ಸೆಳೆದ ಈ ಚಿತ್ರ ಸೆಟ್ಟೇರಿದೆ.

‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ ಜೊತೆಯಾಗಿದ್ದಾರೆ. ಚಿತ್ರದ ಕಥೆ ಕೇಳಿ ಇಂಪ್ರೆಸ್ ಆಗಿರೋ ಸೋನಾಲ್ ಕೋಮಲ್ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಬ್ಯುಸಿಯಾಗಿರೋ ಸೋನಾಲ್ ಮೊಂಟೆರೋ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ‘ರೋಲೆಕ್ಸ್ ಕೋಮಲ್’ ಚಿತ್ರತಂಡ ಸೇರಿಕೊಂಡಿದ್ದಾರೆ.ಕಂಟೆಂಟ್ ಬೇಸ್ಡ್ ಸಿನಿಮಾವಾಗಿರೋ ಈ ಚಿತ್ರ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಅವರ ಎರಡನೇ ಸಿನಿಮಾ ವೆಂಚರ್. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಬಾರಿ ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಜನವರಿ 27ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin