Comedian Kempegowda's "Katle" movie song released: The movie will hit the screens soon

ಹಾಸ್ಯನಟ ಕೆಂಪೇಗೌಡ ಅಭಿನಯದ “ಕಟ್ಲೆ” ಸಿನಿಮಾದ ಬಿಡುಗಡೆ : ಸದ್ಯದಲ್ಲೇ ತೆರೆಗೆ - CineNewsKannada.com

ಹಾಸ್ಯನಟ ಕೆಂಪೇಗೌಡ ಅಭಿನಯದ “ಕಟ್ಲೆ” ಸಿನಿಮಾದ ಬಿಡುಗಡೆ : ಸದ್ಯದಲ್ಲೇ ತೆರೆಗೆ

ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖಪಾತ್ರದಲ್ಲಿ ನಟಿಸಿರುವ “ಕಟ್ಲೆ” ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಇದೇ ಖುಷಿಯಲ್ಲಿ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರಲು ತಂಡ ಸಿದ್ದತೆ ಮಾಡಿಕೊಂಡಿದೆ.

ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದದಲ್ಲಿ ಮೂಡಿಬಂದಿರುವ “ಕಟ್ಲೆ” ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಯಾರೋ ನಾ ಕಾಣೆ. ಚಂದಾಗೌಳೆ ಶಾಣೆ” ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದುನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಈ ವೇಳೆ ಮಾತಿಗಿಳಿದ ನಟ ಕೆಂಪೇಗೌಡ, ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ಆಭಾರಿ. ಶ್ರೀವಿದ “ಕಟ್ಲೆ” ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದು ಹೇಳಿದರು.

ನಿರ್ದೇಶಕ ಶ್ರೀವಿದ ಮಾತನಾಡಿ, ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ಭರತ್ ಗೌಡ ನಂಬಿಕೆಯಿಟ್ಟು ಬಂಡವಾಳ ಹಾಕಿದ್ಧಾರೆ. ಸದ್ಯದಲ್ಲೇ “ಕಟ್ಲೆ” ಸೆನ್ಸಾರ್ ವೀಕ್ಷಿಸಲಿದ್ದು, ಡಿಸೆಂಬರ್ ವೇಳೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು

ನಿರ್ಮಾಪಕ ಭರತ್ ಗೌಡ ಮಾತನಾಡಿ ಶ್ರೀವಿದ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದು ಹೇಳಿದರು.

ಹಾಡು ಹುಟ್ಟಿದ ಬಗ್ಗೆ ಹಾಡು ಬರೆದಿರುವ ಚೇತನ್ ಕುಮಾರ್ ಹಾಗೂ ಸಂಗೀತ ಸಂಯೋಜಕನೆ ಕುರಿತು ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಮಾಹಿತಿ ನೀಡಿದರು.

ನಾಯಕಿಯರಾದ ಅಮೃತ ರಾಜ್, ಸಂಹಿತ, ನಟರಾದ ಉಮೇಶ್, ತಬಲ ನಾಣಿ, ಹರೀಶ್ ರಾಜ್, ಕರಿಸುಬ್ಬು ನಟಿಯರಾದ ಶೃತಿ, ನಿಸರ್ಗ ಅಪ್ಪಣ್ಣ ಮುಂತಾದವರು “ಕಟ್ಲೆ” ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin