The film "Prabhutva" which crossed the barrier, will be released across the state on November 22

ಅಡೆ ತಡೆ ದಾಟಿದ “ಪ್ರಭುತ್ವ” ಚಿತ್ರ ನವಂಬರ್ 22ಕ್ಕೆ ರಾಜ್ಯಾದ್ಯಂತ ಬಿಡುಗಡೆ - CineNewsKannada.com

ಅಡೆ ತಡೆ ದಾಟಿದ “ಪ್ರಭುತ್ವ” ಚಿತ್ರ ನವಂಬರ್ 22ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಉತ್ತಮ ಕಂಟೆಂಟ್‍ವುಳ್ಳ “ಪ್ರಭುತ್ವ” ಚಿತ್ರ ಬಿಡುಗಡೆಯಾಗಬೇಕಾಗಿತ್ತು. ಅದ್ಯಾಕೋ ಏನೂ ಎದುರಾದ ಅಡೆ ತಡೆದಾಟಿ ಬರಲು ಬರಲು ಹಲವು ವರ್ಷಗಳನ್ನೇ ತೆಗೆದುಕೊಂಡಿತು.ಇದೀಗ ಅಂತಿಮವಾಗಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ., ಇದೇ 22 ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ

ಮತದಾನದ ಮಹತ್ವ ತಿಳಿಸುವ ” “ಪ್ರಭುತ್ವ” ಚಿತ್ರದಲ್ಲಿ ಚೇತನ್ ಚಂದ್ರ ನಾಯಕರಾಗಿ ನಟಿಸಿದ್ದಾರೆ. ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ. ಮೇಘಡಹಳ್ಳಿ ಶಿವಕುಮಾರ್ ಕಥೆ ಬರೆದಿದ್ದಾರೆ.

ನಾಯಕ ಚೇತನ್ ಚಂದ್ರ ಮಾತನಾಡಿ ಹನ್ನೆರಡನೇ ಸಿನಿಮಾ. ಬಹಳ ದಿನಗಳ ನಂತರ ನಿಮ್ಮ ಮುಂದೆ ಬರುತ್ತಿದ್ದೇನೆ. ಮೇಘಡಹಳ್ಳಿ ಶಿವಕುಮಾರ್ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು

ಕಥೆ ಬರೆದಿರುವ ಮೇಘಡಹಳ್ಳಿ ಶಿವಕುಮಾರ್ ಮಾತನಾಡಿ ಪ್ರತಿಯೊಬ್ಬ ಮತದಾರರು ಚಿತ್ರ ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನ ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವದ ಬಗ್ಗೆ ತಿಳಿಸುವ ಚಿತ್ರವಿದು.ಮಗ ರವಿರಾಜ್ ಎಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ನವೆಂಬರ್ 22 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ದೀಪಕ್ ಗಂಗಾಧರ್ ವಿತರಣೆ ಮಾಡುತ್ತಿದ್ದಾರೆ ಎಂದರು

ನಿರ್ಮಾಪಕ ರವಿರಾಜ್ ಎಸ್ ಕುಮಾರ್ ಮಾತನಾಡಿ ಚಿತ್ರತಂಡದ ಸಹಕಾರದಿಂದ “ಪ್ರಭುತ್ವ” ಚೆನ್ನಾಗಿ ಮೂಡಿಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಎಂದು ತಿಳಿಸಿದರು.

ವಿತರಕ ದೀಪಕ್ ಗಂಗಾಧರ್ ಮಾತನಾಡಿ ಚಿತ್ರ ತುಂಬಾ ಚೆನ್ನಾಗಿದೆ. 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು

ಚಿತ್ರದಲ್ಲಿ ಅಭಿನಯಿಸಿರುವ ಆದಿ ಲೋಕೇಶ್, ವಿಜಯ್ ಚೆಂಡೂರ್, ಡ್ಯಾನಿ, ಸಂದೀಪ್,ಚಿತ್ರಕಥೆ, ಸಂಭಾಷಣೆ ಜೊತೆಗೆ ಸಹ-ನಿರ್ದೇಶನ ಮಾಡಿರುವ ವಿನಯ್ ಮೂರ್ತಿ, ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಮುಂತಾದವರು “ಪ್ರಭುತ್ವ” ಚಿತ್ರದ ಕುರಿತು ಮಾತನಾಡಿದರು.

ಪಾವನ ಚಿತ್ರದ ನಾಯಕಿಯಾಗಿ ನಟಿಸಿದ್ದು, ಖ್ಯಾತ ನಟ ನಾಸರ್,ಶರತ್ ಲೋಹಿತಾಶ್ವ,ಅಂಬಿಕಾ,ರೂಪಾದೇವಿ, ರಾಜೇಶ್ ನಟರಂಗ, ಅವಿನಾಶ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin