Crazystar's son Vikram Ravichandran in a gangster avatar

ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್ - CineNewsKannada.com

ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್

ಕ್ರೇಜಿಸ್ಟಾರ್ ಸುಪುತ್ರನ ಎರಡನೇ ಕನಸಿಗೆ ಶೀರ್ಷಿಕೆ ಫಿಕ್ಸ್..’ಮುಧೋಳ್’ ಜೊತೆ ಬಂದ ವಿಕ್ರಮ್ ರವಿಚಂದ್ರನ್..ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾಗೆ ‘ಮುಧೋಳ್’ ಶೀರ್ಷಿಕೆ ಫಿಕ್ಸ್..ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ

ಸ್ಯಾಂಡಲ್ ವುಡ್ ಕನಸುಗಾರ ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ಮರಿ ರಣಧೀರ ವಿಕ್ರಮ್ ರವಿಚಂದ್ರನ್ ಎರಡನೇ ಕನಸಿಗೆ ಮಧೋಳ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್..ತ್ರಿವಿಕ್ರಮ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ.

ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜೆ..ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.

ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin