``Crown of Blood Baahubali'' is all set to stream in a new chapter

ಹೊಸ ಅಧ್ಯಾಯದಲ್ಲಿ “ಕ್ರೌನ್ ಆಫ್ ಬ್ಲಡ್ ಬಾಹುಬಲಿ” - CineNewsKannada.com

ಹೊಸ ಅಧ್ಯಾಯದಲ್ಲಿ “ಕ್ರೌನ್ ಆಫ್ ಬ್ಲಡ್ ಬಾಹುಬಲಿ”

ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಮತ್ತೊಮ್ಮೆ ಬಾಹುಬಲಿ ಚಿತ್ರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಈ ಬಾರಿ ಬರುತ್ತಿರುವ ಚಿತ್ರ ಅನಿಮೇಟೆಡ್. ಹೀಗಾಗಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮತ್ತು ನಿರೀಕ್ಷೆ ದುಪ್ಪಟ್ಟಾಗಿದೆ, ಹೊಸ ಅವತಾರದಲ್ಲಿ ನಟರಾದ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಇನ್ನಿತರೆ ಕಲಾವಿದರನ್ನು ತೆರೆಯ ಮೇಲೆ ನೋಡಿ ಆನಂದಿಸಲು ದಿನಗಳಣನೆ ಆರಂಭವಾಗಿದೆ

ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ‘ಬಾಹುಬಲಿ’ ಪಾರ್ಟ್-1,2 ಚಿತ್ರಬಿಡುಗಡೆಗೊಂಡು ವಿಶ್ವದಾದ್ಯಂತ ಸದ್ದು ಮಾಡಿ ಗಲ್ಲಾಪೆಟ್ಟಿಗೆ ದೋಚಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರುಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಿದವು. ಕಥೆಯಲ್ಲಿ ಬಾಹುಬಲಿಯಾಗಿ ಪ್ರಭಾಸ್ ಮತ್ತು ಭಲ್ಲಾಳ ದೇವನಾಗಿ ರಾಣಾದಗ್ಗುಭಾಟಿ ಅಭಿನಯಿಸಿದ್ದರು.

ಇಬ್ಬರ ಜೀವನದ ಅನೇಕ ತಿಳಿಯದ ತಿರುವುಗಳು, ಮಾಹಿತಿಗಳನ್ನು ಚಿತ್ರದಲ್ಲಿ ತೋರಿಸಲಿಕ್ಕೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಎಲ್ಲವನ್ನು ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‍ದಲ್ಲಿ ಹೇಳಲು ಯೋಜನೆ ಸಿದ್ದಗೊಂಡಿದೆ.

ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವಕ್ರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‍ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುತ್ತಾರೆ. ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ. ಅನಿಮೇಟೆಡ್‍ದಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ದ, ಹೀರೋಗಿರಿ, ವಿಶ್ವಾಸ, ಧೈರ್ಯ ಎಲ್ಲ ಅಂಶಗಳು ಸೇರಿಕೊಂಡಿದೆ.

ಕೇವಲ ಮಕ್ಕಳು ಮಾತ್ರವಲ್ಲದೆ ಇನ್ನು ವಿಶಾಲವಾದ ಪ್ರೇಕ್ಷಕ ವರ್ಗಕ್ಕೆ ಭಾರತೀಯ ಅನಿಮೇಶನ್ ಅನ್ನು ಮರು ರೂಪಿಸಿರುವುದು ವಿಶೇಷ. ಇಂತಹ ಪವರ್ ಪ್ಯಾಕ್ಡ್ ಆಕ್ಷನ್ ಸೀರೀಸ್ ಕನ್ನಡ ಸೇರಿದಂತೆ, ಎಲ್ಲಾ ಭಾಷೆಗಳಲ್ಲಿ ಮೇ 17 ರಿಂದ ಡಿಸ್ನಿ ಫ್ಲಸ್ ಹಾಟ್‍ಸ್ಟಾರ್ದಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ. ಅಭಿಮಾನಿಗಳ ಕಾತುರ ಹೆಚ್ಚಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin