Dada Saheb Phalke Award for Thimmana Mottellu
ತಿಮ್ಮನ ಮೊಟ್ಟೆಗಳು ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
14 ನೇ ದಾದ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ”ದಲ್ಲಿ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ “ತಿಮ್ಮನ ಮೊಟ್ಟೆಗಳು” ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ.
ಜ್ಯೂರಿ ವಿಶೇಷ ಪ್ರಶಸ್ತಿ ಲಭಿಸಿರುವುದು ಚಿತ್ರತಂಡದಲ್ಲಿ ಹರ್ಷಕ್ಕೆ ಕಾರಣವಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರ ತಂಡ ಪ್ರಶಸ್ತಿ ಸ್ವೀಕರಿಸಿತು.
ನಿರ್ದೇಶಕರೇ ಬರೆದ “ಕಾಡಿನ ನೆಂಟರು” ಪುಸ್ತಕ ಆಧರಿಸದ ಕಥೆ ತಿಮ್ಮನ ಮೊಟ್ಟೆಗಳು ಚಿತ್ರಕ್ಕಿದೆ. ಶ್ರೀ ಕೃಷ್ಣ ಪ್ರೊಡಕ್ಟನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣ ಚಿತ್ರಕ್ಕಿದೆ.