"DD Dhikki" team wishes actor Ganesh on his birthday: Poster released

“ಡಿಡಿ ಢಿಕ್ಕಿ” ಚಿತ್ರತಂಡದಿಂದ ನಟ ಗಣೇಶ್ ಹುಟ್ಟುಹಬ್ಬಕ್ಕೆ ಶುಭಹಾರೈಕೆ: ಪೋಸ್ಟರ್ ಬಿಡುಗಡೆ - CineNewsKannada.com

“ಡಿಡಿ ಢಿಕ್ಕಿ” ಚಿತ್ರತಂಡದಿಂದ ನಟ ಗಣೇಶ್ ಹುಟ್ಟುಹಬ್ಬಕ್ಕೆ ಶುಭಹಾರೈಕೆ: ಪೋಸ್ಟರ್ ಬಿಡುಗಡೆ

ನಟಿ ರಂಜನಿ ರಾಘವನ್ ನಿರ್ದೇಶನದ “ಡಿಡಿ ಢಿಕ್ಕಿ” ಚಿತ್ರತಂಡದಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

“ನೆನಪಿರಲಿ” ಪ್ರೇಮ್ ನಾಯಕರಾಗಿ ನಟಿಸುತ್ತಿರುವ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಗಣೇಶ್ ಪುತ್ರ ವಿಹಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ಗುರು ಶಿಷ್ಯರು”, “ಲ್ಯಾಂಡ್ ಲಾರ್ಡ್” ಚಿತ್ರಗಳ ನಿರ್ದೇಶಕ ಹಾಗೂ “ಕಾಟೇರ” ಚಿತ್ರದ ಲೇಖಕ ಜಡೇಶ್ ಹಂಪಿ ಅವರ ಹಂಪಿ ಪಿಕ್ಚರ್ಸ್ ಹಾಗೂ ರಾಮಕೃಷ್ಣ ಹಾಗೂ ಆನಂದ್ ಕುಮಾರ್ ನೇತೃತ್ವದ ಸಂಸ್ಥೆ ನಿರ್ಮಾಣದ, ಕಲಾವಿದೆಯಾಗಿ ಜನಪ್ರಿಯರಾಗಿರುವ ರಂಜನಿ ರಾಘವನ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ “ಡಿ ಡಿ ಢಿಕ್ಕಿ” ಚಿತ್ರತಂಡ ಸಹ ವಿಶೇಷ ಪೆÇೀಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭಾಶಯ ತಿಳಿಸಿದೆ.

ಲೆಜೆಂಡ್ ಇಳಯರಾಜ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಸುಧಾಕರ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿರುವ “ಡಿಡಿ ಢಿಕ್ಕಿ” ಚಿತ್ರಕ್ಕೆ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Editor

One thought on ““ಡಿಡಿ ಢಿಕ್ಕಿ” ಚಿತ್ರತಂಡದಿಂದ ನಟ ಗಣೇಶ್ ಹುಟ್ಟುಹಬ್ಬಕ್ಕೆ ಶುಭಹಾರೈಕೆ: ಪೋಸ್ಟರ್ ಬಿಡುಗಡೆ

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin