Dhanveer in Suspense Thriller: Poster of new movie released for birthday

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಧನ್ವೀರ್ : ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಪ್ರಕಟ - CineNewsKannada.com

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಧನ್ವೀರ್ : ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಪ್ರಕಟ

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟ ಎಂದೇ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಾಯಕ ಧಣ್ವೀರ್ ಗೌಡ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ನಟನೆಯ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ನಿರ್ಮಾಪಕರೂ ಆಗಿರುವ ಶಾಸಕ ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು ರಘುಕುಮಾರ್.ಓ ಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ

ಕರುನಾಡ ಶೋಕ್ದಾರ್ ಎಂದು ಹೆಸರುವಾಸಿ ಆಗಿರುವ ಧನ್ವೀರ್ ನಾಯಕರಾಗಿ ನಟಿಸುತ್ತಿರುವ ಐದನೇ ಚಿತ್ರ ಇದು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ರಘುಕುಮಾರ್ ಓ ಆರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ ರಘುಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ. ಈ ಚಿತ್ರಕ್ಕೆ `ಸಮೃದ್ಧಿ ಫಿಲಂಸ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಮೃದ್ಧಿ ಫಿಲಂಸ್‍ನ ಮಂಜುನಾಥ್ , ನಿರ್ದೇಶಕ ರಘುಕುಮಾರ್ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು , ರವಿಶಂಕರ್, ತಬಲನಾಣಿ, ಸಾಧುಕೋಕಿಲ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.

ನಿರ್ದೇಶಕ ರಘುಕುಮಾರ್ ಓ ಆರ್ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. “ಕೋಟಿಗೊಬ್ಬ 3” ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮತ್ತು ‘ದಿ ಬೆಲ್’ ಎಂಬ ಕಿರುಚಿತ್ರ ನಿರ್ಮಿಸಿ ನಿರ್ದೇಶಿಸಿದ್ದಾರೆ. ದಿ ಬೆಲ್ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗಿದ್ದು ಒಳ್ಳೆಯ ಪ್ರಶಂಸೆ ಗಳಿಸಿಕೊಂಡು ಕಿರು ಚಿತ್ರೋತ್ಸವದಲ್ಲಿ ಮೆಚ್ಚುಗೆ ಹಾಗು ಪ್ರಶಸ್ತಿ ಪಡೆದಿತ್ತು.

ಚಿತ್ರದ ತಾಂತ್ರಿಕವರ್ಗ ಅದ್ಭುತವಾಗಿದ್ದು ಛಾಯಾಗ್ರಾಹಕರಾಗಿ ಕಾರ್ತಿಕ್ ಎಸ್ ಹಿನ್ನೆಲೆ ಸಂಗೀತ ಜುಡಾ ಸ್ಯಾಂಡಿ, ಶಬ್ದ ವಿನ್ಯಾಸ ರಾಜನ್ ಹಾಗೂ ಸಂಕಲನ ಉಮೇಶ್ ಆರ್ ಬಿ ಮಾಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin