ಬಿಡುಗಡೆಗೆ ಸಿದ್ದವಾದ “ಧೀರ ಸಾಮ್ರಾಟ್” ಚಿತ್ರ: ನವಂಬರ್ 17ಕ್ಕೆ ತೆರೆಗೆ
ಚಿತ್ರೀಕರಣ ಶುರು ಮಾಡಿದ ದಿನದಿಂದಲೇ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಬಂದಿರುವ “ ಧೀರ ಸಾಮ್ರಾಟ್” ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿದ್ದು ನವಂಬರ್ 17ಕ್ಕೆ ಚಿತ್ರ ರಜತ ಪರದೆಯ ಮೇಲೆ ರಾಜಾಜಿಸಲಿದೆ.
ಪ್ರತಿಭಾನ್ವಿತೆ ನಟಿ ಅಧ್ವಿತಿ ಶೆಟ್ಟಿ ಮತ್ತು ನಟ ರಾಕೇಶ್ ಬಿರಾದರ್, ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಚಿತ್ರ ಕುತೂಹಲ ಕೆರಳಿಸಿದೆ. ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು, ಏನ್ ಚಂದ ಕಾಣಿಸ್ತಾಳೆ ನಮ್ ಹುಡುಗಿ ಹಾಡು 2 ಮಿಲಿಯನ್ ನಟ್ಟ ದಾಪುಗಾಲು ಹಾಕುತ್ತಿದೆ.
ಮಾರ್ಟಿನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸಬರಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ, ವಿಶೇಷ ಏನೆಂದರೆ ಅವರ ಪ್ರೀತಿಯ ಗೆಳೆಯ , ನಿರ್ದೇಶಕ ಪವನ್ ಕುಮಾರ್ ರವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ತುಂಬಾನೇ ಬೆಂಬಲ ಮಾಡುತ್ತಿರುವುದು ಅವರಿಬ್ಬರ ಸ್ನೇಹಕ್ಕೆ ಸಾಕ್ಷಿ.
ತನ್ವಿ ಪ್ರೊಡಕ್ಷನ್ಸ್ ಹೌಸ್ ಬ್ಯಾನರ್ನ ಗುರು ಬಂಡಿ ನಿರ್ಮಾಣದ ಚಿತ್ರ. ಚಿತ್ರದ ಪೂರ್ಣ ಕೆಲಸ ಮುಗಿದಿದ್ದು, ಸೆನ್ಸಾರ್ ವರ್ಕ್ ನಡೆಯುತ್ತಿದೆ. ಚಿತ್ರ ನವೆಂಬರ್ 17ಕೆ ರಾಜ್ಯಾದ್ಯಂತ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಚಿತ್ರಕ್ಕೆ ಬೇಕಿರುವ ಎಲ್ಲಾ ರೀತಿಯ ಪ್ರಮೋಷನ್ ಸ್ಟ್ರಾಟಜಿಯನ್ನ ಮಾಡುತ್ತಿದು, ಚಿತ್ರವನ್ನ ಜನರಿಗೆ ತಲುಪಿಸುವ ಜಬರ್ದಸ್ತ್ ಯೋಜನೆಯನ್ನ ಮಾಡಿಕೊಳ್ಳುತ್ತಿದ್ದಾರೆ.
ರಾಕೇಶ್ ಬಿರಾದರ್, ಅಧ್ವಿತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ನಾಗೇಂದ್ರ ಅರಸ್, ಸಂಕಲ್ಪ ಪಾಟೀಲ್ ಬಾಲರಾಜ್ ವಾಡಿ, ರಮೇಶ್ ಭಟ್, ಶೋಭರಾಜ್, ಯತಿರಾಜ್, ಶಂಕರ್ ಭಟ್, ಮನಮೋಹನ್ ರೈ, ರವೀಂದ್ರನಾಥ್, ಜ್ಯೋತಿ ಮೂರೂರು, ಇಂಚರ, ಹರೀಶ್ ಅರಸು, ರವಿರಾಜ್, ಮುಂತಾದವರು ಬಣ್ಣ ಹಚ್ಚಿದ್ದಾರೆ.