“ಫೈಟರ್” ಚಿತ್ರಕ್ಕೆ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ ಬೆಂಬಲ: ವಿಭಿನ್ನ ಅವತಾರದಲ್ಲಿ ವಿನೋದ್ ಪ್ರಭಾಕರ್
ಮರಿ ಟೈಗರ್ ಖ್ಯಾತಿಯ ವಿನೋದ್ ಪ್ರಭಾಕರ್ ನಟನೆಯ ಬಹು ನಿರೀಕ್ಷಿತ ಚಿತ್ರಕ್ಕೆ ಕೆ.ಎಸ್ ಸೋಮಶೇಖರ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ನೂತನ್ ಉಮೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಶುಕ್ರವಾರ ಅಕ್ಟೋಬರ್ 6ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆ ಮಾಡಿದ ನಟರಾದ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಧರ್ಮ ಕೀರ್ತಿ ರಾಜ್ ಸೇರಿದಂತೆ ಹಲವರು ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರ ಯಶಸ್ವಿಯಾಗಲಿ, ಚಿತ್ರರಂಗದಲ್ಲಿ ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡಬೇಕು. ಚಿತ್ರಕ್ಕೆ ಬಂಡವಾಳ ಹಾಕರುವ ಸೋಮಶೇಖರ್ ಅವರಿಗೆ ಒಳ್ಳೆಯದಾಗಲಿ ಇನ್ನಷ್ಟು ಚಿತ್ರ ನಿರ್ಮಾಣ ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.
ನಟ ದುನಿಯಾ ವಿಜಯ್ ಮಾತನಾಡಿ, ನಿರ್ದೇಶಕರು ನಟರ ಬಗ್ಗೆ ಯೋಚಿಸಿ ಅವರು ಕೊಟ್ಟ ದಿನಾಂಕದಲ್ಲಿ ಚಿತ್ರ ಪೂರ್ಣಗೊಳಿಸಿ, ಒಂದು ಚಿತ್ರ ಆದರೆ ನಾಯಕರಿಗೆ ಕನಿಷ್ಠ 5 ಚಿತ್ರ ಬರುವಂತೆ ಸಿನಿಮಾ ಮಾಡಿ. ನಟ ವಿನೋದ್ ಪ್ರಭಾಕರ್ ಚಿತ್ರದುದ್ದಕ್ಕೂ ದೇಹದಾದ್ಯತೆ ಕಾಪಾಡಿಕೊಳ್ಳಲು ಶ್ರಮಿಸಿದ್ದಾರೆ. ನಮ್ಮ ದೇಹದ ನೆಟ್ ಬೋಲ್ಟ್ ಯಾವುದೇ ಸರಿ ಇಲ್ಲ. ಎಲ್ಲವನ್ನೂ ಟೈಟ್ ಮಾಡಿಕೊಂಡು ಬಂದಿದ್ದೇವೆ. ನಟರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿ ಎಂದರು.
ನಾನು ಮೊದಲಿನಿಂದಲೂ ಟೈಗರ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ ಅವರ ದೇಹದಾಧ್ಯತೆ ನೋಡಿ ನಾನು ಅವರಂತೆ ಆಗಬೇಕು ಎಂದು ಪ್ರಯತ್ನ ಮಾಡಿದ್ದೆ. ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೆ. ವಿನೋದ್ ಪ್ರಭಾಕರ್ ಧ್ವನಿ ಕೇಳಿದರೆ ಅಥವಾ ಅವರು ಎದುರುಗಡೆ ಸಿಕ್ಕರೆ ಟೈಗರ್ ಪ್ರಭಾಕರ್ ಸಿಕ್ಕಂತೆಯೂ ಆಗಲಿದೆ. ಫೈಟರ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.
ನಾಯಕ ವಿನೋದ್ ಪ್ರಭಾಕರ್ ಮಾತನಾಡಿ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಒಂದೇ ಒಂದು ಫೋನ್ ಕರೆಗೆ ಬಂದು ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ದುನಿಯಾ ವಿಜಯ್ ಅವರಿಗೆ ಧನ್ಯವಾದಗಳು. ವಿಜಯ್ ಅವರು ನನ್ನ ಅಪ್ಪನ್ನು ನೋಡಿ ಬಾಡಿ ಬಿಲ್ಡ್ ಮಾಡಿದ್ದಾರೆ. ನಾನು ದುನಿಯಾ ವಿಜಯ್ ಅವರನ್ನು ನೋಡಿ ಬಾಡಿ ಬಿಲ್ಡ್ ಮಾಡಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ಮಾಪಕ ಕೆ.ಎಸ್ ಸೋಮಶೇಖರ್ ಮಾತನಾಡಿ, ನಾನು ಮೊದಲಿನಿಂದಲೂ ಟೈಗರ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರ ಪುತ್ರನಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ಚಿತ್ರದ ಮೂಲಕ ರೈತರ ಸಮಸ್ಯೆಯನ್ನು ಹೇಳಲು ಹೊರಟಿದ್ದೇವೆ ಎಲ್ಲರ ಸಹಕಾರವಿರಲಿ ಎಂದರು,
ನಿರ್ದೇಶಕ ನೂತನ್ ಉಮೇಶ್ ಮಾತನಾಡಿ, ನಿರ್ಮಾಪಕ ಸೋಮಶೇಖರ್ ಅವರು ನಾಡಿನ ರೈತರ ಪರವಾದ ಕಾಳಜಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಬೆಂಬಲ ಇರಲಿ ಎಂದರು.
ನಾಯಕಿಯರಾದ ಲೇಖಾ ಚಂದ್ರ, ಪಾವನಾ ಗೌಡ ಅವರು, ಸಿನಿಮಾದಲ್ಲಿ ನಟಿಸಿದ್ದು ಖುಷಿಯಾಗಿದೆ. ರೈತರಿಗಾಗಿ ಮಿಡಿಯುವ ಕಥೆ ಚಿತ್ರದಲ್ಲಿದೆ. ಚಿತ್ರವನ್ನು ನೋಡಿ ಹರಸಿ ಎಂದು ಕೇಳಿಕೊಂಡರು.
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ದೀಪಕ್ ಶೆಟ್ಟಿ, ಸಿದ್ಲಿಂಗು ಶ್ರೀಧರ್, ಚಿತ್ರಕ್ಕೆ ಹರಸಲು ಬಂದಿದ್ದ ಶ್ರೀನಗರ ಕಿಟ್ಟಿ, ಅನೂಶಾ ರೈ ಸೇರಿದಂತೆ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ಇದೇ ಶುಕ್ರವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ. ಚಿತ್ರಕ್ಕೆ ಬೆನ್ನೆಲುಬಾಗಿ ನಿರ್ಮಾಪಕರೂ ಆಗಿರುವ ಮುನೀಂದ್ರ ಅವರು ಸಾಥ್ ನೀಡಿ, ನಿರ್ಮಾಪಕ ಸೋಮಶೇಖರ್ ಅವರಿಗೆ ಸಹಕಾರ ನೀಡಿದ್ದಾರೆ