Jawaari song release from the movie Raktaksha: Rohit who stepped out as Arrest Me Baby

`ರಕ್ತಾಕ್ಷ’ ಸಿನಿಮಾದ ಜವಾರಿ ಹಾಡು ಬಿಡುಗಡೆ : ಅರೆಸ್ಟ್ ಮಿ ಬೇಬಿ ಎಂದು ಹೆಜ್ಜೆ ಹಾಕಿದ ರೋಹಿತ್ - CineNewsKannada.com

`ರಕ್ತಾಕ್ಷ’ ಸಿನಿಮಾದ ಜವಾರಿ ಹಾಡು ಬಿಡುಗಡೆ : ಅರೆಸ್ಟ್ ಮಿ ಬೇಬಿ ಎಂದು ಹೆಜ್ಜೆ ಹಾಕಿದ ರೋಹಿತ್

ಜವಾರಿ ಹುಡ್ಗನ ಜಬರ್ದಸ್ತ್ ಜವಾರಿ ಸಾಂಗ್ ರಿಲೀಸ್ ಆಗಿದೆ. ಅರೆಸ್ಟ್ ಮಿ ಬೇಬಿ ಎನ್ನುತ್ತಾ ಉತ್ತರ ಕರ್ನಾಟಕದ ಪ್ರತಿಭೆ ರೋಹಿತ್ ರಕ್ತಾಕ್ಷ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಡ್ತಿರುವ ರೋಹಿತ್ ನಿರ್ಮಾಪಕನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಕ್ಷನ್ ಟೀಸರ್ ಮೂಲಕ ಜಬರ್ದಸ್ತ್ ಆಕ್ಷನ್ ಪ್ರದರ್ಶಿಸಿದ್ದ ಈ ಹುಡ್ಗ ಈ ಜವಾರಿ ಹಾಡಿನ ಮೂಲಕ ಕಿಕ್ ಏರಿಸಿದ್ದಾರೆ.

ರೋಹಿತ್ ಕುಣಿದಿರುವ ಅರೆಸ್ಟ್ ಮೀ ಬೇಬಿ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಕ್ಯಾಚಿ ಮ್ಯಾಚಿ ಪದ ಪೆÇಣಿಸಿದ್ದು, ಸುಪ್ರಿಯಾ ರಾಮ್ ಜೊತೆ ಕಂಠ ಕುಣಿಸುವುದರ ಜೊತೆಗೆ ಡೋಸ್ಮೋಡ್ ಸಂಗೀತ ಒದಗಿಸಿದ್ದಾರೆ. ಪಕ್ಕ ಉತ್ತರ ಕರ್ನಾಟಕದ ಸ್ಟೈಲ್ ನಲ್ಲಿ ಮೂಡಿಬಂದಿರುವ ಸಿಂಗಿಂಗ್ ಮಸ್ತಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಕ್ತಾಕ್ಷ' ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪೆÇ್ರಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ. ವಾಸುದೇವ ಎಸ್.ಎನ್ `ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ರೋಹಿತ್ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ, ಸಂಗೀತವನ್ನು ಧೀರೇಂದ್ರ ಡಾಸ್ ನೀಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಗುರುದೇವ್ ನಾಗರಾಜ, ರಾಮಣ್ಣ, ವಿಲಾಸ್, ಪ್ರಭು, ವಿಶ್ವ, ಭದ್ರಿ, ನಾರಾಯಣ, ಬಸವರಾಜ ಆದಾಪುರ್, ಭರತ್ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. `ರಕ್ತಾಕ್ಷ’ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ವಸಿಷ್ಠ ಸಿಂಹ ಹಾಡಿದ್ದು ಹಾಡು ಬಿಡುಗಡೆ ಆಗಿ ಒಳ್ಳೆಯ ಪ್ರತಿಕ್ರಿಯೆ ಧಕ್ಕಿಸಿಕೊಂಡಿದೆ.

ಜನೋಪಕಾರಿ ಕೆಲಸದಲ್ಲಿ ರೋಹಿತ್

ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಹಾಗೂ ನಿರ್ಮಾಪಕನಾಗಿ ಮೊದಲ ಹೆಜ್ಜೆ ಇಟ್ಟಿರುವ ರೋಹಿತ್ ಸಾಮಾಜಿಕ ಕೆಲಸಕ್ಕಿಳಿದ್ದಾರೆ. ಆಗಸ್ಟ್ 15ರಂದು ರೋಹಿತ್ ತಮ್ಮ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದವರೇ ಆದ ರೋಹಿತ್ ಮಸ್ಕಿ, ಲಿಂಗಸಗೂರು, ಸಿಂಧನೂರು ಜನತೆಯೊಂದಿಗೆ ಜನ್ಮದಿನ ಆಚರಿಸಿಕೊಳ್ಳುವುದರ ಜೊತೆಗೆ ಅಲ್ಲಿನ ವಿವಿಧ ವರ್ಗದ ಜನರಿಗೆ ಕೈಲಾದ ಸಹಾಯ ಮಾಡುವುದರ ಜೊತೆಗೆ ಅದೇ ಭಾಗದ ಅನಾಥಶ್ರಮಗಳಿಗೆ ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ.

ಅಂದಹಾಗೇ ರೋಹಿತ್ ಇದೇ ಮೊದಲ ಬಾರಿಗೆ ಸಾಮಾಜಿಕ ಸೇವೆಗಿಳಿದಿಲ್ಲ. ಹೀರೋ ಆಗಿ ಹೊಸ ಪಯಣ ಆರಂಭಿಸುವುದಕ್ಕೂ ಮುನ್ನ ಅಂದರೆ 2014ರಿಂದಲೂ ಜನೋಪಕಾರಿ ಕೆಲಸ ಮಾಡುತ್ತಿದ್ದು ಅಕ್ಷಯಪಾತ್ರಾ, ಅದಮ್ಯಚೇತನ, ಯೂನಿಸೆಫ್ ಗೆ ಡೋನರ್ ಕೂಡ. ಹೀರೋ ಆದ ಮೇಲೆಯೂ ಜನೋಪಕಾರಿ ಕೆಲಸಗಳನ್ನು ಮುಂದುರೆಸಿಕೊಂಡು ಬರುತ್ತಿದ್ದಾರೆ.

ಉತ್ತರ ಕರ್ನಾಟಕದ ಮಸ್ಕಿ ಊರಿನಲ್ಲಿರುವ ಅನಾಥಶ್ರಮಕ್ಕೆ ಅಪ್ಪು ಅವರ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದೀಗ ತಮ್ಮದೇ ಸಾಯಿ ಪೆÇ್ರಡಕ್ಷನ್ ನಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin