Director Abhishek Shetty who became the hero again

ಮತ್ತೆ ನಾಯಕನಾದ ನಿರ್ದೇಶಕ ಅಭೀಷೇಕ್ ಶೆಟ್ಟಿ - CineNewsKannada.com

ಮತ್ತೆ ನಾಯಕನಾದ ನಿರ್ದೇಶಕ ಅಭೀಷೇಕ್ ಶೆಟ್ಟಿ

ನಮ್ ಗಣಿ ಬಿಕಾಂ ಚಿತ್ರದ ಮೂಲಕ ನಿರ್ದೇಶಕ ನಾಯಕನಾಗಿ ಗಮನ ಸೆಳೆದಿದ್ದ ಅಭಿಷೇಕ್ ಶೆಟ್ಟಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿ ಮತ್ತು ನಾಯಕನಾಗುತ್ತಿದ್ದಾರೆ ಅದುವೇ “ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್” ಮೂಲಕ ಎನ್ನುವುದು ಹೆಮ್ಮೆಯ ಸಂಗತಿ

ನಟ, ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರ ಹುಟ್ಟುಹಬ್ಬದ ದಿನವೇ ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್ ಫಸ್ಟ್ ರಿಲೀಸ್ ಮಾಡಿರುವ ಅಭಿಷೇಕ್ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ

ಒಬ್ಬ ನಟ ಅಭಿನಯದ ಮೇಲೆ ಮಾತ್ರ ಗಮನಹರಿಸಬೇಕು. ಆದರೆ ನಿರ್ದೇಶಕನಾದವನು ಎಲ್ಲಾ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡು ಸಾಗಬೇಕು. ಹಾಗ್ ನೋಡಿದರೆ ಏಕಕಾಲಕ್ಕೆ ನಟನೆ ಹಾಗೂ ನಿರ್ದೇಶನ ಮಾಡುವುದು ಸುಲಭದ ಮಾತಲ್ಲ. ಅಂಥಹ ಪ್ರಯತ್ನದಲ್ಲಿ ಗೆದ್ದವರು ಕೆಲವೊಂದಿಷ್ಟು ಮಂದಿ. ಆ ಸಾಲಿನಲ್ಲಿ ಯುವ ನಿರ್ದೇಶಕ ಹಾಗೂ ಅಭಿಷೇಕ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.

ಅಭಿಷೇಕ್ ಶೆಟ್ಟಿ ನಟನೆ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟವರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದ ಅವರು ಆ ನಂತರ ಗಜಾನನ ಅಂಡ್ ಗ್ಯಾಂಗ್ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡರು. ಅನೀಶ್ ಗೆ ಆರಾಮ್ ಅರವಿಂದ್ ಸ್ವಾಮಿ ಅಂತೇಳಿ ಕುಣಿಸಿರುವ ಅಭಿಷೇಕ್ ಶೆಟ್ಟಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರು ಅಭಿಷೇಕ್ ಶೆಟ್ಟಿ, ಈಗ ಹೊಸ ಚಿತ್ರ ಘೋಷಿಸಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ವಿಶೇಷ ಎಂದರೆ ಅಭಿಷೇಕ್ ಶೆಟ್ಟಿ ನಮ್ ಗಣಿ ಬಿ.ಕಾಂ ಪಾಸ್ ಸೀಕ್ವೆಲ್ ಗೆ ಮುನ್ನುಡಿ ಬರೆದಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಸೂಟ್ ಬೂಟ್ ತೊಟ್ಟು, ಕೈಯಲ್ಲಿ ಕಾಫಿ ಕಪ್ ಬನ್ ಹಿಡಿದು ದುಬಾರಿ ಕಾರಿನ ಮುಂದೆ ಸ್ಟೈಲೀಶ್ ಆಗಿ ಅಭಿ ಪೆÇೀಸ್ ಕೊಟ್ಟಿದ್ದಾರೆ.

ನಮ್ ಗಣಿ ಬಿ.ಕಾಂ ಪಾಸ್ 2 ಚಿತ್ರದ ಮೂಲಕ ಅಭಿಷೇಕ್ ಶೆಟ್ಟಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಹೀರೋ ಆಗಿ ದಿಬ್ಬಣ ಹೊರಡಲಿದ್ದಾರೆ. ಅವರ ಹೊಸ ಕನಸಿಗೆ ಬಿ ಎಸ್ ಪ್ರಶಾಂತ್ ಶೆಟ್ಟಿ ಶಕ್ತಿಯಾಗಿ ನಿಂತಿದ್ದಾರೆ. ಅದ್ವಿ ಕ್ರಿಯೇಷನ್ ನಡಿ ಪ್ರಶಾಂತ್ ಸೀಕ್ವೆಲ್ ಗೆ ಹಣ ಹಾಕುತ್ತಿದ್ದು, ಸುಮಂತ್ ಆಚಾರ್ಯ ಕ್ಯಾಮೆರಾ ಹಿಡಿಯಲಿದ್ದು, ಉಮೇಶ್ ಆರ್ ಬಿ ಕತ್ತರಿ ಕೆಲಸ, ಆನಂದ್ ರಾಜವಿಕ್ರಂ ಟ್ಯೂನ್ ಹಾಕಲಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್-2 ಸಿನಿಮಾದ ಕಥೆ ಬರವಣಿಗೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತೊಂದು ಅಪ್ ಡೇಟ್ ನೊಂದಿಗೆ ಅಭಿಷೇಕ್ ಶೆಟ್ಟಿ ನಿಮ್ಮ ಮುಂದೆ ಹಾಜರಾಗಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin