Director-turned-actress Apoorva Gowda: "O Nanna Chetana" song released

ನಿರ್ದೇಶಕಿಯಾದ ನಟಿ ಅಪೂರ್ವ ಗೌಡ: “ಓ ನನ್ನ ಚೇತನ ಚಿತ್ರದ” ಹಾಡು ಬಿಡುಗಡೆ - CineNewsKannada.com

ನಿರ್ದೇಶಕಿಯಾದ ನಟಿ ಅಪೂರ್ವ ಗೌಡ: “ಓ ನನ್ನ ಚೇತನ ಚಿತ್ರದ” ಹಾಡು ಬಿಡುಗಡೆ

“ಓ ನನ್ನ ಚೇತನ ಚಿತ್ರದ” ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರದ ಮೂಲಕ ಕನ್ನಡಚಿತ್ರರಂಗಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿಯ ಆಗಮನವಾಗಿದೆ, ಅವರೇ ನಟಿ ಅಪೂರ್ವಗೌಡ.

ನಟಿ ಅಪೂರ್ವ ಗೌಡ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಒಂದು ಫೋನ್ ಸುತ್ತಾ ಸುತ್ತೋ ಹಳ್ಳಿ ಸೊಗಡಿನ ಸಿನಿಮಾ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಹರಿ ಸಂತು ಸಾಹಿತ್ಯವಿರೋ ಅಂಜು ಹಾಡು ಇವತ್ತು ಎ2 ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಮಾಧುರ್ಯ ಭರಿತವಾಗಿರೋ ಈ ಹಾಡಿಗೆ ಅಶ್ವಿನ್ ಶರ್ಮಾ ಧನಿಯಾಗಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್,ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ.

ಎಸ್ ಅಂಡ್ ಎಸ್ ಬ್ಯಾನರ್ ನಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್,ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಆಗಿ ಬರ್ತಿರೋ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟಟೈನ್ಮೆಂಟ್ ಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಮಾತು.

ಅಂಜು ಹಾಡೇ ಅದಕ್ಕೆ ಉದಾಹರಣೆ. ವಿಷ್ಯ ಗಂಭೀರ ಮತ್ತು ಸೂಕ್ಷ್ಮವಾಗಿದ್ದು, ಈ ಚಿತ್ರಕ್ಕೆ ಕೆಲಸ ಮಾಡಿರೋ ಎಲ್ಲಾ ಅನುಭವವುಳ್ಳ ಬ್ರ್ಯಾಂಡ್ ತಂತ್ರಜ್ಞರೇ ಕೆಲಸ ಮಾಡಿರೋದು ವಿಶೇಷ. ಹಾಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆಯೂ ದೊಡ್ಡಾಗಿದೆ. ಮೊದಲ ಹಾಡು ನೋಡಿದ್ರೆ, ಉದ್ಯಮದಲ್ಲೇ ಬೇರೆಯದ್ದೇ ರೀತಿ ಸದ್ದು ಮಾಡುವ ಮುನ್ಸೂಚನೆ ನೀಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin