Dodmane's daughter-in-law Ashwini Puneeth Rajkumar who supported 'The Bhavani Files'

‘ದಿ ಭವಾನಿ ಫೈಲ್ಸ್’ಗೆ ಸಾಥ್ ಕೊಟ್ಟ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‍ಕುಮಾರ್ - CineNewsKannada.com

‘ದಿ ಭವಾನಿ ಫೈಲ್ಸ್’ಗೆ ಸಾಥ್ ಕೊಟ್ಟ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‍ಕುಮಾರ್

ನೂರು ಜನ್ಮಕ್ಕೂ, ಡಿಯರ್ ಸತ್ಯ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಾಯಕ ಆರ್ಯನ್. ಇದೀಗ ಅವರು ದಿ ಭವಾನಿ ಫೈಲ್ಸ್ ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ.

ಈ ಚಿತ್ರದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಜವಾಬ್ದಾರಿ ಹೊತ್ತುಕೊಂಡಿರುವ ಆರ್ಯನ್ ಚಿತ್ರಕ್ಕೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

ದಿ ಭವಾನಿ ಫೈಲ್ಸ್ ಸಿನಿಮಾದ ಟೈಟಲ್ ಲಾಂಚ್ ಮಾಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ. ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

14ನೇ ಶತಮಾನ `ದಿ ಭವಾನಿ ಫೈಲ್ಸ್’ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ. ಮೋಹನ್ ಮೆನನ್, ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಟ್ಯೂನ್ ಹಾಕಿದ್ದಾರೆ.

ವೈಟ್ ಹಾರ್ಸ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ದಿ ಭವಾನಿ ಫೈಲ್ಸ್ ಸಿನಿಮಾವನ್ನು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಸಾಥ್ ಕೊಡಲಿದೆ. ಕಲ್ಟ್ ಜಾನರ್ ಈ ಸಿನಿಮಾದ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin