Daali Dhananjaya is a wonderful actor, he will become a star in Telugu - Megastar Chiranjeevi's prediction

ಡಾಲಿ ಧನಂಜಯ ಅದ್ಬುತ ನಟ, ತೆಲುಗಿನಲ್ಲಿ ಸ್ಟಾರ್ ಆಗ್ತಾರೆ- ಮೆಘಾಸ್ಟಾರ್ ಚಿರಂಜೀವಿ ಭವಿಷ್ಯ - CineNewsKannada.com

ಡಾಲಿ ಧನಂಜಯ ಅದ್ಬುತ ನಟ, ತೆಲುಗಿನಲ್ಲಿ ಸ್ಟಾರ್ ಆಗ್ತಾರೆ- ಮೆಘಾಸ್ಟಾರ್ ಚಿರಂಜೀವಿ ಭವಿಷ್ಯ

ಪಾತ್ರ ಯಾವುದೇ ಇರಲಿ ಅದನ್ನು ನೀರು ಕುಡಿದಷ್ಟು ಸಲೀಸಾಗಿ ನಿರ್ವಹಿಸಬಲ್ಲ ಚಾಕಚಕ್ಯತೆ ಇರುವ ಮಣ್ಣಿನ ಅಪ್ಪಟ ಕಲಾವಿದ ಡಾಲಿ ಧನಂಜಯ ಕನ್ನಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದೀಗ ಪರಭಾಷೆಯಲ್ಲಿಯೂ ಛಾಪು ಮೂಡಿ ಮಾಡುತ್ತಿದ್ದು ಮೆಘಾಸ್ಟಾರ್ ಚಿರಂಜೀವಿ, ಧನಂಜಯ ಅವರ ನಟನೆ ಕಂಡು ಬೆರಗಾಗಿ ಭವಿಷ್ಯ ನುಡಿದಿದ್ದಾರೆ.

#Daali Dhanajaya

ಡಾಲಿ ಧನಂಜಯ ಮತ್ತು ಸತ್ಯದೇವ್ ಜೋಡಿಯ “ ಜೀಬ್ರಾ” ಚಿತ್ರ ಇದೇ 22ರಂದು ಕನ್ನಡದ ಜೊತೆಗೆ ತೆಲುಗಿನಲ್ಲಿ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಹೈದರಾಬದ್ ನಲ್ಲಿ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಮೆಘಾ ಸ್ಟಾರ್ ಚಿರಂಜೀವಿ ಅವರು , ಡಾಲಿ ಧನಂಜಯ ಅವರ ನಟನೆಗೆ ಮಾರು ಹೋಗಿದ್ದಾರೆ.

ಅಷ್ಟೇ ಅಲ್ಲ, ಡಾಲಿ ಧನಂಜಯ್ ಕನ್ನಡದಲ್ಲಿ ಅದ್ಭುತ ನಟ ಧನಂಜಯ್. ತೆಲುಗಿನಲ್ಲಿ ಸ್ಟಾರ್ ಆಗ್ತಾರೆ. ಜೊತೆಗೆ “ಜೀಬ್ರಾ” ಚಿತ್ರ ಕೂಡ ಸೂಪರ್ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಚಿರಂಜೀವಿ ಅವರ ಪ್ರಶಂಸೆಗೆ ವಿನೀತರಾಗಿ ಪ್ರತಿಕ್ರಿಯೆ ನೀಡಿದ ಡಾಲಿ ಧನಂಜಯ, ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ ಅಂತಾ ಸಿಪಾಯಿ ಸಿನಿಮಾ ಹಾಡು ಹೇಳಿ ಚಿರಂಜೀವಿಗೆ ನಮಸ್ಕಾರ ಮಾಡಿ ಕೃತಜ್ಞತೆ ಸಲ್ಲಿಸಿದರು. ಜೀಬ್ರಾ ಚಿತ್ರವನ್ನು ಕನ್ನಡಕ್ಕೆ ತುಂಬಾ ಚೆನ್ನಾಗಿ ಡಬ್ ಮಾಡಲಾಗಿದೆ. “ಡೇರ್ ಡೆವಿಲ್ ಮುಸ್ತಫಾ” ಸಿನಿಮಾ ತಂಡ ಡಬ್ ಮಾಡಿದೆ. ನವೆಂಬರ್ 22ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ನಿಮ್ಮ ಬೆಂಬಲವಿರಲಿ ಎಂದರು.

‘ಜೀಬ್ರಾ’ ಕ್ರೈಂ ಥ್ರಿಲ್ಲರ್ ಸಿನಿಮಾ. ನೈಜ ಘಟನೆಗಳಿಂದ ಪ್ರೇರಣೆಗೊಂಡು ಕತೆ ಹೆಣೆಯಲಾಗಿದೆ. ಬ್ಯಾಂಕ್ ಫ್ರಾಡ್ ಸುತ್ತಾ ಚಿತ್ರದ ಕತೆ ಸುತ್ತಲಿದೆ. ಈಶ್ವರ್ ಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಸತ್ಯದೇವ್ ಹೀರೊ ಆಗಿ ನಟಿಸಿದ್ದಾರೆ. ಆದಿ ಎಂಬ ಖಡಕ್ ರೋಲ್‍ನಲ್ಲಿ ಧನಂಜಯ್ ಅಬ್ಬರಿಸಿದ್ದಾರೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದೆ.

ಧನಂಜಯ್ ಅಭಿನಯದ 26ನೇ ಸಿನಿಮಾ ಜೀಬ್ರಾಗೆ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರಿಯಾ ಭವಾನಿ ಶಂಕರ್ ಹಾಗೂ ಜೆನ್ನಿಫರ್ ಪಿಕ್ಕಿನಾಟೊ ಪ್ರಮುಖ ಪಾತ್ರದಲ್ಲಿಯೇ ಇದ್ದಾರೆ. ಸತ್ಯ ಅಕಾಲ್ ಮತ್ತು ಸುನಿಲ್ ಚಿತ್ರದ ಇತರರು ತಾರಾಬಳಗದಲ್ಲಿದ್ದಾರೆ.

ಎಸ್. ಎನ್. ರೆಡ್ಡಿ, ಎಸ್. ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಸತ್ಯ ಪೆÇನ್ಮಾರ್ ಛಾಯಾಗ್ರಹಣ ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin