Don't wait for OTT come to cinema : Rangayana Raghu

ಒಟಿಟಿಗೆ ಕಾಯ್ಬೇಡಿ ಚಿತ್ರಮಂದಿರಕ್ಕೆ ಬನ್ನಿ : ರಂಗಾಯಣ ರಘು - CineNewsKannada.com

ಒಟಿಟಿಗೆ ಕಾಯ್ಬೇಡಿ ಚಿತ್ರಮಂದಿರಕ್ಕೆ ಬನ್ನಿ : ರಂಗಾಯಣ ರಘು

ಅಭಿನಯಾಶೂರ ರಂಗಾಯಣ ರಘು ನಟನೆಯ ಶಾಖಾಹಾರಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ.

ಪಕ್ಕ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿದೆ. ಪ್ರೇಕ್ಷಕರು ಬಯಸೋದು ಇದನ್ನೇ. ಕೊಟ್ಟ ಕಾಸಿಗೆ ಒಳ್ಳೆ ಎಂಟರ್ ಟೈನ್ಮೆಂಟ್ ಸಿಗಬೇಕು. ಚಿತ್ರ ಚೆನ್ನಾಗಿರಬೇಕು. ಅದೆಲ್ಲಾ ಕ್ವಾಲಿಟಿ ಶಾಖಾಹಾರಿ ಚಿತ್ರಕ್ಕಿದೆ. ಆದರೆ ಚಿತ್ರತಂಡ ನಿರೀಕ್ಷೆ ಮಟ್ಟದಲ್ಲಿ ಪ್ರೇಕ್ಷಕಪ್ರಭು ಥಿಯೇಟರ್ ನತ್ತ ಹೆಜ್ಜೆ ಇಡುತ್ತಿಲ್ಲ

ಈ ಕುರಿತು ಮಾಹಿತಿ ಹಂಚಿಕೊಂಡ ಕಲಾವಿದ ರಂಗಾಯಣ ರಘು ಯೋಗರಾಜ್ ಭಟ್ ರಿಂದ ಶುರುವಾಗುತ್ತದೆ. ಅಶ್ವಿನಿ ಮೇಡಂ ದುನಿಯಾ ವಿಜಯ್, ಸೃಜಯನ್ ಲೋಕೇಶ್ ಅವರು, ನವೀನ್ ಅವರು.ಹೀಗೆ ನಮ್ಮ ಸಿನಿಮಾದವರು. ಹೊರಗಿನವರು ಜನ ಬಂದು ಎಲ್ಲರೂ ಚೆನ್ನಾಗಿ ಆಗಿದೆ. ಇದು ಕ್ಲಾಸ್ ಸಿನಿಮಾ ಎಂದು ನಾನು ಒಪ್ಪುವುದಿಲ್ಲ. ಒಳ್ಳೆ ಸಿನಿಮಾ ಎಂದು ಹೇಳುತ್ತೇನೆ. ಕ್ಲಾಸ್ ಮಾಸ್ ಹೋಗಿ ತುಂಬಾ ದಿನ ಆಗಿದೆ. ಒಳ್ಳೆ ಸಿನಿಮಾ. ಇಲ್ಲ ನೋಡದೇ ಇರುವ ಸಿನಿಮಾ. ದೊಡ್ಡ ದೊಡ್ಡವರ ಸಿನಿಮಾ ಎಂದಾಗ ಕೋಟಿ ಕೋಟಿ ಹಾಕುವ ನಿರ್ಮಾಪಕರು ಸಾಕಾಗುವುದಿಲ್ಲ. ಅದಕ್ಕೆ ಇದ್ದಾರೆ ಅವ್ರು ಮಾಡ್ತಾರೆ. ಆದರೆ ಸಣ್ಣ ಇರಬೇಕಲ್ಲ. ಸಣ್ಣ ಸಣ್ಣವರು ಮಾಡಿದಾಗ ಅದು ಸಮುದ್ರವಾಗುತ್ತದೆ. ನದಿ ಹರಿವೇ ಇಲ್ಲ ಅಂದರೆ ಸಮುದ್ರಕ್ಕೆ ಕಷ್ಟವಾಗುತ್ತದೆ, ಶಿವಮೊಗ್ಗದ ನದಿ ಇದು ಹರಿದುಕೊಂಡು ಹೋಗುತ್ತದೆ ಎಂದುಕೊಂಡರೆ. ಆದರೆ ಅವರು ಹೇಳಿದ್ದು ಕೇಳಿ ಬೇಜಾರ್ ಆಯ್ತು. ನಾವು ಕೊಳ್ಳೆಗಾಲಕ್ಕೆ ಹೋಗಬೇಕಾಗುತ್ತದೆ. ಗೊತ್ತಿಲ್ಲ ಏನು ಮಂತ್ರ ಮಾಡಬೇಕೋ. ಇದು ಒಳ್ಳೆ ಸಿನಿಮಾ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಒಟಿಟಿಗೆ ಬಂದ್ಮೇಲೆ ಮೆಚ್ಚಿಕೊಳ್ತಾರೆ ಗೊತ್ತಿಲ್ಲ ಎಂದರು.

ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಇಷ್ಟು ಪಬ್ಲಿಸಿಟಿ ಮಾಡಿದರು ಯಾಕೆ ಜನಕ್ಕೆ ರೀಚ್ ಮಾಡಲು ಆಗುತ್ತಿಲ್ಲ. ನಾವು ಕ್ಲಾಸ್ ಸಿನಿಮಾ ಎಂದುಕೊಂಡು ಒಂದಷ್ಟು ಸೀಮಿತ ಜನಕ್ಕೆ ನಮ್ಮದೇ ಆದ ಒಂದು ಟಾರ್ಗೆಟ್ ಆಡಿಯನ್ಸ್ ಮಾಡಿಕೊಂಡೆವು. ಅದು ರಿಲೀಸ್ ಆದ್ಮೇಲೆ ಅದು ತೆಗೆದುಕೊಂಡ ವಿಸ್ತಾರ, ಜನರಿಗೆ ರೀಚ್ ಆಗಿದ್ದು ಇರಬಹುದು. ಬಿಕೆಟಿ ಸೆಂಟರ್ ಗಳಲ್ಲಿ ಜನ ತುಂಬಿ ಎಂಜಾಯ್ ಮಾಡಿದರು. ನಾವು ಅದನ್ನು ಮುಂಚೆಯಿಂದನೇ ಟಾರ್ಗೆಟ್ ಮಾಡಿಕೊಂಡು ಬಂದಿದ್ದರೆ ಬಹುಶಃ ಈ ಸಣ್ಣ ಸಮಸ್ಯೆ ಎದುರುರಾಗ್ತಿರಲಿಲ್ಲ ಎನಿಸಿತು. ನಮ್ಮ ಸುತ್ತ ವಲಯದಲ್ಲಿ ಹೆಚ್ಚು ರೀಚ್ ಆಗಿದೆ. ಅದು ಬಿಟ್ಟು ಹೋಗಿಲ್ಲ ಎಂಬ ಕೊರಗು ಇತ್ತು. ಇದಾದ ಮೇಲೆ ಇತ್ತೀಚೆಗೆ ಬಂದ ವಿಮರ್ಷೆ ಆಗಿರಬಹುದು. ಥಿಯೇಟರ್ ಫಿಲ್ಲಿಂಗ್ ಇರಬಹುದು. ಈಗಲೂ ಶೇಕಡಾ 50 ರಿಂದ 60 ರಷ್ಟು ಆಕ್ಯೂಪೆನ್ಸಿ ಇದೆ. ನಿಮ್ಮ ಮೂಲಕ ಇನ್ನೂ ಹೆಚ್ಚು ಜನರಿಗೆ ರೀಚ್ ಆಗಬಹುದು. ನಿಮ್ಮ ಬೆಂಬಲ ಇರಬೇಕು. ನಮಗೆ ಎಲ್ಲಾ ಒಟಿಟಿ ಕಡೆಯಿಂದ ಆಫರ್ ಬಂದಿದೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ಶಾಖಾಹಾರಿ' ಕಹಾನಿ. ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್ಟ್ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್ ಇಮೇಜ್ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್ನ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು..

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೆÇಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin