“ಡಬಲ್ ಇಸ್ಮಾರ್ಟ್” ಚಿತ್ರದ ಟ್ರೈಲರ್ ಬಿಡುಗಡೆ : ರಾಮ್ ಪೋತಿನೇನಿ ಎದುರು ಸಂಜಯ್ ದತ್
ಟಾಲಿವುಡ್ ಬಹುನಿರೀಕ್ಷಿತ ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಡಬಲ್ ಇಸ್ಮಾರ್ಟ್. ಟೀಸರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡಿದ್ದ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಭರಪೂರ ಆಕ್ಷನ್, ಲವ್, ಮದರ್ ಸೆಂಟಿಮೆಂಟ್ ಮಿಕ್ಸ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. 2 ನಿಮಿಷ 43 ಸೆಕೆಂಡ್ ಇರುವ ಡಬಲ್ ಇಸ್ಮಾರ್ಟ್ ಟ್ರೇಲರ್ ನಲ್ಲಿ ನಾಯಕ ರಾಮ್ ಪೋತಿನೇನಿ ಅಬ್ಬರಿಸಿದ್ದಾರೆ. ರಾಮ್ ಎದುರು ಖಡಕ್ ಖಳನಾಯಕನಾಗಿ ಸಂಜಯ್ ದತ್ ಬಿಗ್ ಬುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪವರ್ ಪ್ಯಾಕ್ಡ್ ಡಬಲ್ ಇಸ್ಮಾರ್ಟ್ ಸಿನಿಮಾದಲ್ಲಿ ನಾಯಕಿ ಕಾವ್ಯಾ ಥಾಪರ್ ಸಖತ್ ಗ್ಲಾಮರ್ ಅವತಾರದಲ್ಲಿ ನಟಿಸಿದ್ದಾರೆ. ಅಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗ್ನನಾಥ್ ನಿರ್ದೇಶನದ ಈ ಚಿತ್ರ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. “ಡಬಲ್ ಇಸ್ಮಾರ್ಟ್” ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಆಗಸ್ಟ್ 15ರಂದು ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ.
ವಿಶೇಷ ಎಂದರೆ ಇದು 2019ರಲ್ಲಿ ಬಿಡುಗಡೆಯಾದ `ಇಸ್ಮಾರ್ಟ್ ಶಂಕರ್’ ಚಿತ್ರದ ಸೀಕ್ವೆಲ್. ಮೊದಲ ಭಾಗದಲ್ಲಿ ರಾಮ್ ಪೋತಿನೇನಿ ಜತೆಗೆ ಕನ್ನಡತಿ ನಭಾ ನಟೇಶ್ ಮತ್ತು ಬೆಂಗಳೂರು ಮೂಲದ ನಿಧಿ ಅಗರ್‍ವಾಲ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಕಮಾಲ್ ಮಾಡಿತ್ತು.
ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 “ಡಬಲ್ ಇಸ್ಮಾರ್ಟ್” ಸಿನಿಮಾ ಬರುತ್ತಿದೆ. ಹೀಗಾಗಿ ಕುತೂಹಲ ಮೂಡಿಸಿದೆ. ಇದರಲ್ಲಿ ರಾಮ್ ರಾಮ್ ಪೋತಿನೇನಿ ಕಾವ್ಯಾ ಥಾಪರ್, ಸಂಜಯ್ ದತ್ ಜತೆಗೆ ಸಯ್ಯಾಜಿ ಶಿಂದೆ, ಬನಿ ಜೆ., ಅಲಿ, ಮಕರಂದ ದೇಶ್‍ಪಾಂಡೆ ಮತ್ತಿತರರು ನಟಿಸಿದ್ದಾರೆ. ಮಣಿಶರ್ಮಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಸ್ಯಾಮ್ ಕೆ. ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಕ್ಯಾಮೆರಾ ಹಿಡಿದಿದ್ದಾರೆ.