Dwarkeesh's younger son Giri is busy in Tamil movies Yolo, Made in India

ತಮಿಳಿನ ಯೋಲೋ, ಮೇಡ್ ಇನ್ ಇಂಡಿಯಾ ಸಿನಿಮಾಗಳಲ್ಲಿ ದ್ವಾರಕೀಶ್ ಕಿರಿ ಮಗ ಗಿರಿ ಬ್ಯುಸಿ - CineNewsKannada.com

ತಮಿಳಿನ ಯೋಲೋ, ಮೇಡ್ ಇನ್ ಇಂಡಿಯಾ ಸಿನಿಮಾಗಳಲ್ಲಿ ದ್ವಾರಕೀಶ್ ಕಿರಿ ಮಗ ಗಿರಿ ಬ್ಯುಸಿ

ಕನ್ನಡದ ಕಂಡ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಕಿರಿ ಮಗ ಗಿರಿ ದ್ವಾರಕೀಶ್ ಸದ್ಯ ತಮಿಳಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಪೈಕಿ ಅವರ ಮುಂಬರುವ ತಮಿಳಿನ ಯೋಲೋ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.

ರೋಮ್ ಕಾಮ್ ಜಾನರ್‍ನ ಈ ಸಿನಿಮಾದಲ್ಲಿ ಹಾಸ್ಯಮಯ ಪೊಲೀಸ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಮಹೇಶ್ ಸೆಲ್ವರಾಜ್ ನಿರ್ಮಾಣ ಮಾಡಿರುವ ಸಿನಿಮಾ ಸಿ.ಎಸ್. ಸಾಮ್ ನಿರ್ದೇಶನ ಮಾಡಿದ್ದಾರೆ. ಸೂರಜ್ ನಲ್ಲುಸ್ವಾಮಿ ಛಾಯಾಗ್ರಹಣವಿರುವ ಚಿತ್ರ ಫ್ಯಾಂಟಸಿ ಮಿಶ್ರಿತ ಕಥೆಯೊಂದಿಗೆ ಸಾಗಲಿದೆ. ಇನ್ನೇನು ಶೀಘ್ರದಲ್ಲಿ ಪ್ರೇಕ್ಷಕರನ್ನೂ ರಂಜಿಸಲಿದೆ.

ಡಿಸ್ನಿ ಫ್ಲಸ್ ಹಾಟ್‍ಸ್ಟಾರ್‍ನಲ್ಲಿ ಜನಪ್ರಿಯ ತಮಿಳು ವೆಬ್ ಸರಣಿ “ಹಾರ್ಟ್‍ಬೀಟ್”ನಲ್ಲಿ ಡಾ. ರಾಮನಾಥನ್ ಅಲಿಯಾಸ್ ಪಾತ್ರದಲ್ಲಿ ನಟಿಸಿದ್ದ ಗಿರಿ, ಆ ಪಾತ್ರದ ಮೂಲಕವೇ ಮೆಚ್ಚುಗೆ ಪಡೆದುಕೊಂಡಿದ್ದರು. ಕಾಮಿಡಿ ಪಂಚ್, ಪಾತ್ರ ಮೂಡಿ ಬಂದ ರೀತಿಗೆ ನೋಡುಗರಿಂದ ಕಾಂಪ್ಲಿಮೆಂಟ್ ಸಿಕ್ಕಿದ್ದವು. ತಮಿಳಿನಲ್ಲಿ ಹಿಟ್ ಆದ ಈ ಸರಣಿ ಇದೀಗ ತೆಲುಗಿನಲ್ಲಿಯೂ ಡಬ್ ಆಗಿ ಇನ್ನೇನು ಶೀಘ್ರದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

ಯೋಲೋ ಸಿನಿಮಾದ ಜೊತೆಗೆ, ವೈರಾ ಪ್ರಕಾಶ್ ನಿರ್ಮಾಣದ ಮತ್ತು ಎಸ್.ಪಿ. ಪೆÇನ್ ಶಂಕರ್ ನಿರ್ದೇಶನದ ತಮಿಳು ಚಿತ್ರ “ಮೇಡ್ ಇನ್ ಇಂಡಿಯಾ” ಚಿತ್ರದಲ್ಲಿಯೂ ಗಿರಿ ನಟಿಸುತ್ತಿದ್ದಾರೆ. ಭಾರತದ ಪ್ರಮುಖ ನಗರಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಚಿತ್ರೀಕರಣಗೊಳ್ಳುತ್ತಿದೆ. “ಮೇಡ್ ಇನ್ ಇಂಡಿಯಾ” ಕೇವಲ ಲೊಕೇಷನ್‍ಗಳ ಮೂಲಕ ಮಾತ್ರವಲ್ಲದೆ, ಸಂಗೀತದಿಂದಲೂ ನೋಡುಗರಿಗೆ ರಸದೌತಣ ನೀಡಲಿದೆ. ಖ್ಯಾತ ಸಂಗೀತ ನಿರ್ದೇಶಕ ರಾಜ್ ವರ್ಮ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಮೋಟಿವೇಷನಲ್ ಭಾಷಣಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಗಿರಿ, “ಇಂತಹ ವೈವಿಧ್ಯಮಯ ಚಿತ್ರಗಳ ಭಾಗವಾಗಲು ನನಗೆ ಖುಷಿ ಎನಿಸುತ್ತದೆ. ಪ್ರತಿಯೊಂದು ಪಾತ್ರವೂ ಪ್ರೇಕ್ಷಕರೊಂದಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಪ್ರೇಕ್ಷಕರ ಬೆಂಬಲ ಮತ್ತು ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಈ ಪ್ರಾಜೆಕ್ಟ್‍ಗಳ ಯಶಸ್ಸನ್ನು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin