"Elra Kaleliyatte Kaala" movie to release on April 24th

ಏಪ್ರಿಲ್ 24ಕ್ಕೆ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಬಿಡುಗಡೆ - CineNewsKannada.com

ಏಪ್ರಿಲ್ 24ಕ್ಕೆ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಬಿಡುಗಡೆ

ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ ಗೋವಿಂದರಾಜು ನಿರ್ಮಿಸಿರುವ ಹಾಗೂ ಚಂದನ್ ಶೆಟ್ಟಿ ಹಾಗು ಅರ್ಚನಾ ಕೊಟ್ಟಿಗೆ ನಾಯಕ-ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏಪ್ರಿಲ್ 24 ರಂದು ತೆರೆಗೆ ಬರಲು ಸಜ್ಜಾಗಿದೆ

ನಿರ್ದೇಶಕ ಸುಜಯ್ ಶಾಸ್ತ್ರಿ ಮಾತನಾಡಿ ಏಪ್ರಿಲ್ 17ಕ್ಕೆ ಬಿಡುಗಡೆಯಾಗಬೇಕಾಗಿದ್ದ ಚಿತ್ರ ಕಾರಣಾಂತರದಿಂದ ಒಂದು ವಾರ ತಡವಾಗಿ ಏಪ್ರಿಲ್ 24 ರಂದು ಬಿಡುಗಡೆಯಾಗುತ್ತಿದೆ ಎಂದರು

ನಾಯಕ ಚಂದನ್ ಶೆಟ್ಟಿ ಮಾತನಾಡಿ ಆರಾಧ್ಯ ದೈವ ವರನಟ ಡಾ.ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿರುವುದು ಬಹಳ ಖುಷಿಯಾಗಿದೆ ಎಂದು ಹೇಳಿದರು

ನಟಿ ತಾರಾ ಅನುರಾಧ ಮಾತನಾಡಿ, ಸುಜಯ್ ಶಾಸ್ತ್ರಿ ಹಾಗೂ ರಾಜ್ ಗುರು ಹೊಸಕೋಟೆ ರಂಗಭೂಮಿಯಿಂದ ಪರಿಚಿತರು. ಚಂದನ್ ಶೆಟ್ಟಿ ಹಾಗೂ ತಂದೆ – ತಾಯಿ ಕೂಡ ಪರಿಚಯ. ಇನ್ನೂ, ಅರ್ಚನಾ ಕೊಟ್ಟಿಗೆ ಇಷ್ಟ ಪಡುವ ನಾಯಕಿ. ಒಂದೊಳ್ಳೆ ತಂಡ ಸೇರಿ ಉತ್ತಮ ಚಿತ್ರ ಮಾಡಿದ್ದಾರೆ ಎಂದರು

ನಿರ್ಮಾಪಕ ಗೋವಿಂದರಾಜು ಮಾತನಾಡಿ ಚಂದನ್ ಫಿಲಂಸ್ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾಯಕಿ ಅರ್ಚನಾ ಕೊಟ್ಟಿಗೆ ಸಹ ಎಲ್ಲರಿಗೂ ಧನ್ಯವಾದ ಹೇಳಿದರು.

ನಟರಾದ ರಜನಿಕಾಂತ್, ಅನಂತ ಪದ್ಮನಾಭ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ವಿತರಣೆಯ ಬಗ್ಗೆ ಚಂದನ್ ಫಿಲಂಸ್ ನ ಕುನಾಲ್ ಮಾತನಾಡಿದರು. ನಿರ್ಮಾಪಕರ ಸ್ನೇಹಿತರಾದ ಶ್ರೀನಿವಾಸ್, ಶಂಕರ್ ಅವರು ಚಿತ್ರಕ್ಕೆ ಯಶಸ್ಸನ್ನು ಕೋರಿದರು. ಉಷಾ ಗೋವಿಂದರಾಜು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರವೀಣ್ – ಪ್ರದೀಪ್ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣವಿರುವ ಚಿತ್ರಕ್ಕೆ ರಾಜ್ ಗುರು ಹೊಸಕೋಟೆ ಕಥೆ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin