ಬೇಟೆ ಆಡೋಕೆ ನಾನೇನು ಬಕ್ರಾನಾ.. “ಶೇರ್” : ಚಿತ್ರ ಟ್ರೈಲರ್ ಬಿಡುಗಡೆ
” ಬೇಟೆ ಆಡೋಕೆ ನನ್ನನೇನು ಬಕ್ರಾ ಅಂದುಕೊಂಡೇನೋ ಬಾಡ್ಕೋ.. ನಾನ್ ಶೇರ್… ನಿನ್ನೆನೇ ಹೊಡೆದಿದ್ದೇನು.. ಇಂದೂ ಹೊಡಿತೀನಿ.. ನಾಳೆನೂ ಹೊಡೆತೀನ್… ಇದು “ಶೇರ್” ಕಣೋ..”

ಹೀಗಂತ ನಾಯಕ ಕಿರಣ್‍ರಾಜ್ ಎದುರಾಳಿಗಳಿಗಳಿಗೆ ಎಡೆಮುರಿ ಕಟ್ಟಿ ಹೊಡೆಯುವ ಆಕ್ಷನ್ ,ಥ್ರಿಲ್ಲರ್ ಸಿನಿಮಾ. ” ಶೇರ್ ” ಸಿನಿಮಾದ ಟ್ರೈಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅನಾಥಾಲಯದಲ್ಲಿ ನಡೆಯುವ ಕಥೆ ಆದರಿಸಿದ ಚಿತ್ರ “ಶೇರ್” ಮೇ 15 ರಂದು ತೆರೆಗೆ ಬರಲು ಸಜ್ಜಾಗಿದೆ.
ಈ ವೇಳೆ ಮಾತನಾಡಿದ ನಿರ್ದೇಶಕ ಪ್ರಸಿದ್ದ್, ಭರ್ಜರಿ ಗಂಡು ಚಿತ್ರಕ್ಕಿಂತ ನಟ ಕಿರಣ್ ರಾಜ್ ಅವರನ್ನು ರಗಡ್ ಆಗಿ ತೋರಿಸುವ ಉದ್ದೇಶದಿಂದ ಮಾಡಿದ ಸಿನಿಮಾ. ಕ್ರಿಸ್‍ಗೆ ಚಿತ್ರದಲ್ಲಿ ನೆಗೆಟೀವ್ ಪಾತ್ರ ಕೊಟ್ಟಿದ್ದೇನೆ. ಡಾ. ಸುದರ್ಶನ್ ಕುಟುಂಬ ನೀಡಿದ ಬೆಂಬಲದಿಂದ ಸಿನಿಮಾ ಮಾಡಿದ್ದೇವೆ. ಸಾಮಾನ್ಯ ಕಥೆಯನ್ನು ಕುತೂಹಲಭರಿತವಾಗಿ ಚಿತ್ರ ಮಾಡಲಾಗಿದೆ. ಅನಾಥ ಮಕ್ಕಳ ಜೀವನದಲ್ಲಿ ತೊಂದರೆ ಆದಾದ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆ ಫೂರ್ಣ ಪ್ರಮಾಣ ಮನರಂಜನಾತ್ಮಕ ಚಿತ್ರ ಎಂದರು

ನಟ ಕಿರಣ್‍ರಾಜ್ ಅವರ ನಟನೆ ನೋಡಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇನೆ, ಕ್ರಿಸ್ ಹೆಸರನ್ನು ಗಿಲ್ಲಿ ಎಂದು ಹೆಸರು ಮರು ನಾಮಕರಣ ಮಾಡಲಾಗಿದೆ ,ಸುರೇಖಾ, ತನಿಶಾ ಕುಪ್ಪಂಡ ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು
ನಟ ಕಿರಣ್ ರಾಜ್ ಮಾತನಾಡಿ ಅನಾಥ ಹುಡುಗರ ಸುತ್ತ ನಡೆಯುವ ಕಥೆ. ನಾನು ನಿರ್ದೇಶಕರ ನಟ, ನಿರ್ದೇಶಕರು ಹೇಳಿದದ್ದನ್ನು ತೆರೆಯ ಮೇಲೆ ತೋರಿಸುವುದು ನನ್ನ ಉದ್ದೇಶ.ಚಿತ್ರದಲ್ಲಿ ನಾಯಕ ಅಲ್ಲ. ನಾನು ಚಿತ್ರದ ಒಂದು ಭಾಗ ಎಲ್ಲರ ಸಹಕಾರವಿರಲಿ ಎಂದರು.
ನಿರ್ಮಾಪಕ ಡಾ. ಸುದರ್ಶನ್ ಸುಂದರ ರಾಜ್ ಮಾತನಾಡಿ, ವೃತ್ತಿಯಲ್ಲಿ ವಕೀಲ. ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಸೇರಿ ಮಗನಿಗಾಗಿ ಈ ಸಿನಿಮಾ ಮಾಡಿದ್ದೇವೆ. ಅವನಿಗಾಗಿ ಪ್ರೊಡಕ್ಷನ್ಸ್ ಹೌಸ್ ಪ್ರಾರಂಭ ಮಾಡಿದೆವು. ಈಗ ಮೇ 15 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರು.
ನಾಯಕಿ ಸುರೇಖಾ ಮಾತನಾಡಿ ಇದು ಎರಡನೇ ಸಿನಿಮಾ. ಈ ಮೊದಲು “ಭರ್ಜರಿ ಗಂಡು” ಸಿನಿಮಾದಲ್ಲಿ ಅಭಿನಯಿಸಿದ್ದೆ. ಇದರಲ್ಲಿ ನನಗೆ ಎರಡು ಶೇಡ್ ಪಾತ್ರವಿದೆ ಎಂದರು.
ನಟಿ ತನಿಷಾ ಕುಪ್ಪಂಡ ಮಾತನಾಡಿ, ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ಆನಂತರ “ಪೆನ್ ಡ್ರೈವ್” ಚಿತ್ರದಲ್ಲಿ ಮಾಡಿದ್ದೆ ಎಂದರು.
ನಟ ಗಿಲ್ಲಿ ಕ್ರಿಸ್ ರೋಡ್ರಿಗ್ , ಶೇರ್ ನಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು 15 ದಿನ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದೆ. ಚಿತ್ರ ನೋಡಿ ಎಂದರು
ಕಾರ್ಯಕಾರಿ ನಿರ್ಮಾಪಕ ರಾಟೆ ಕುಮಾರ್, ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ನಟ ಶೋಭನ್ ಚಿತ್ರದ ಕುರಿತಂತೆ ಮಾತನಾಡಿದರು. ವಿಜಯ್ ಗುಮ್ಮಿನೇನಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.


