Father felt emotional Actress Harshika Poonacha

ತಂದೆ‌ ನೆನೆದು ಭಾವುಕರಾದ
ನಟಿ ಹರ್ಷಿಕಾ ಪೂಣಚ್ಚ…. - CineNewsKannada.com

ತಂದೆ‌ ನೆನೆದು ಭಾವುಕರಾದನಟಿ ಹರ್ಷಿಕಾ ಪೂಣಚ್ಚ….

ನನ್ನ ಹೀರೋ ,ನನ್ನ ತಂದೆ ಮೂರು ವರ್ಷದ ಹಿಂದೆ ನಿಧನರಾದರು ಎನ್ನುತ್ತಲೇ ನಟಿ ಹರ್ಷಿಕಾ ಪೂಣಚ್ಚ ಭಾವುಕರಾಗಿ ಗದ್ದಗರಿತರಾದ ಘಟನೆ “ಕಾಸಿನ ಸರ ” ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಾಕ್ಷಿಯಾಯಿತು.


ತಂದೆ ಕಳೆದುಕೊಂಡಿದ್ದೇನೆ ಎಂದು ವೇದಿಕೆಯಲ್ಲಿ ಹರ್ಷಿಕಾ ಕಣ್ತುಂಬಿಕೊಂಡರು.ಮಾತು ಹೊರಡದಂತಾಗಿ ಕೆಲ ಕಾಲ ಮೂಕ ವಿಸ್ಮಿತರಾಗಿ ನಿಂತು‌ಬಿಟ್ಟರು.
ಸಾವರಿಸಿಕೊಂಡು ಮಾತನಾಡಲು ಬಸಿದರೂ ಅವರ ಕಣ್ಣು ತುಂಬಿಕೊಂಡಿತ್ತು. ವೇದಿಕೆ ಮೇಲೆ ಕುಳಿತಕೊಂಡಲೂ ಕಣ್ಣಲ್ಲಿ ಜಿನುಗುತ್ತಿತ್ತು.

ವಿಜಯ್ ರಾಘವೇಂದ್ರ ಸಮಾಧಾನ:

ಮಾತನಾಡಲು ಸಾದ್ಯವಾಗದೆ ವೇದಿಕೆಯಲ್ಲಿ ಕುಳಿತ ಹರ್ಷಿಕಾಗೆ ಪಕ್ಕದಲ್ಲಿಯೇ ಇದ್ದ ನಟ ವಿಜಯ್ ರಾಘವೇಂದ್ರ ಸಮಾಧಾನ ಮಾಡಿ ಧೈರ್ಯ ತುಂಬಿದರು. ಆಲೂ ಹರ್ಷಿಕಾ ಭಾವುಕರಾಗಿದ್ದರು.

ಯಾರೂ ಜಾಗ ತುಂಬಲು ಆಗಲ್ಲ:

ನಂತರ ಮಾತಿಗಿಳಿದ ಹಿರಿಯ ನಟಿ ತಾರಾ ಅನುರಾಧ ಅವರು ಪ್ರೀತಿ ಪಾತ್ರರು ಅಗಲಿದಾಗ ನೋವು,ಕಣ್ಣಿರು ಸಹಜ, ಯಾರು ಯಾರನ್ನು ಆ ಜಾಗದಲ್ಲಿ ನೋಡಲು ಆಗಲು ಆಗಲ್ಲ, ನೀನು ನಿನ್ನ ತಂದೆ ಕಳೆದುಕೊಂಡು ಮೂರು ವರ್ಷ ಆಗಿದೆ.ನಾನು ನನ್ನ ತಾಯಿ ಕಳೆದುಕೊಂಡು ಐದು ತಿಂಗಳಾಗಿದೆ ಎಂದು ಹಿರಿಯ ನಟಿ ತಾರಾ ಅನುರಾಧ ಅವರು ಸಮಾಧಾನ‌ ಮಾಡಿದರು.

ಆರಂಭದಲ್ಲಿ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ, ಚಿತ್ರದಲ್ಲಿ ಕೃಷಿ ವಿದ್ಯಾರ್ಥಿನಿಯ ಪಾತ್ರ ಮಾಡಿದ್ದೇನೆ. ಪಾತ್ರದಲ್ಲಿ ನಟಿಸುವ ಸಮಯಲ್ಲಿ ವ್ಯವಸಾಯ ಮಾಡಿದ್ದೀಯಾ ಎಂದು ನಿರ್ದೇಶಕ ಎನ್ .ಆರ್ ನಂಜುಂಡೇಗೌಡ ಹೇಳುತ್ತಿದ್ದರು.‌ಕೊಡಗಿನಲ್ಲಿ ಕಾಫಿ ತೋಟ ತೆಗೆದುಕೊಂಡಿದ್ದೇನೆ.‌ರೈತರ ನಿಜವಾದ ಕಷ್ಟ ಹತ್ತಿರದಿಂದ‌ ಬಲ್ಲೆ ಎಂದರು .

Kasinasara film CD Release

ಮೂರು ವರ್ಷದ ಬಳಿಕ 2023 ರಲ್ಲಿ ಕಾಸಿನ‌ ಸರ ಮೊದಲ ಚಿತ್ರವಾಗಿ ತೆರೆಗೆ ಬರುತ್ತಿದೆ ಎಲ್ಲರ ಸಹಕಾರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin