ಚಿತ್ರ ವಿಮರ್ಶೆ: “ಕಾಗದ” ಮುದ್ದಾದ ಪ್ರೇಮಕಥೆಯ ಸಂದೇಶಾತ್ಮಕ ಚಿತ್ರ
ಚಿತ್ರ; ಕಾಗದ
ತಾರಾಗಣ: ಆದಿತ್ಯ,ಅಂಕಿತಾ ಜಯರಾಮ್, ನೇಹಾ ಪಾಟೀಲ್, ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠಕೊಪ್ಪಳ, ಶಿವಮಂಜು ಮತ್ತಿತರರು
ನಿರ್ದೇಶನ: ರಂಜಿತ್ ಕುಮಾರ್ ಗೌಡ
ನಿರ್ಮಾಣ: ಅರುಣ್ ಕುಮಾರ್ ಆಂಜನೇಯ
ರೇಟಿಂಗ್ : *** 3.5 / 5
ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ತಿರುಳು ಮತ್ತು ಪರಿಣಾಮ ಬೀರಬಹುದಾದ ಕಥೆಯ ಹೂರಣ ಹೊಂದಿರುವ ಚಿತ್ರಗಳು ತೆರೆಗೆ ಬರುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ” ಕಾಗದ”.
ನಿರ್ದೇಶಕ ರಂಜಿತ್ ಕುಮಾರ್‍ಗೌಡ ಮುದ್ದಾದ ಪ್ರೇಮಕಥೆಯ ಸಂದೇಶಾತ್ಮಕ ಚಿತ್ರವನ್ನು ಪ್ರೇಪಕ್ಷಕರ ಮುಂದೆ ಇಟ್ಟಿದ್ದಾರೆ. ಜಾತಿ, ಮತ ,ಧರ್ಮ ಎಂದು ಬಡಿದಾಡಿಕೊಳ್ಳುವ ಮಂದಿಗೆ ಯುವ ಪ್ರೇಮಿಗಳ ಚಿತ್ರ ಸಂದೇಶವೂ ಆಗಬಹುದಾದರೆ ಅಚ್ಚರಿ ಇಲ್ಲ.
ಜಾತಿ,ಧರ್ಮದ ನೆರಳಲ್ಲಿ ಅರಳಬಹುದಾದ ಪ್ರೇಮಕಥೆಯೊಂದು ಹೇಗೆ ಕಮರಿ ಹೋಯಿತು ಎನ್ನುವುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ಮೂಲಕ ದುರಂತ ಪ್ರೇಮಕಥೆಯನ್ನು ಜನರ ಮುಂದೆ ಇಟ್ಟಿದ್ದಾರೆ.
ಮುಸ್ಲಿಂ ಹುಡುಗಿ ಆಯೇಶಾ -ಅಂಕಿತಾ ಜಯರಾಮ್ ಹಾಗೂ ಹಿಂದೂ ಯುವಕ ಶಿವು- ಆದಿತ್ಯ ನಡುವಿನ ಪ್ರೀತಿ, ಪ್ರೇಮ, ಚಿತ್ರದ ಕಥಾನಕ.ಇದೊಂದು ದುರಂತ ಪ್ರೇಮಕಥೆ ಹೇಗೆಲ್ಲಾ ಆಯಿತು ಎನ್ನುವುದು ಕಥನ ಕುತೂಹಲ.
ಭೈರವಕೋಟೆಯಲ್ಲಿ ಹಿಂದೂ-ಮುಸ್ಲಿಂ ಎನ್ನುವ ಬೇಧ ಭಾವ ಇಲ್ಲದೆ ಊರು. ಅಲ್ಲಿನ ಎಲ್ಲಾ ಸಮುದಾಯದ ಜನರು ಸರ್ವದರ್ಮ ಸಹಿಷ್ಞುತತೆಗೆ ಒತ್ತು ನೀಡುವ ಜನ. ಊರಿನ ಯುವಕ ಶಿವು ಓದುತ್ತಿದ್ದ ಕಾಲೇಜಿಗೆ, ಹೊಸದಾಗಿ ಬಂದಿದ್ದ ಮುಸ್ಲಿಂ ಕುಟುಂಬದ ಯುವತಿ ಆಯೇಶಾ ಸೇರ್ಪಡೆಯಾಗುತ್ತಾಳೆ. ಪರಿಯಯ ಸ್ನೇಹ, ಪ್ರೀತಿ, ಚಿಗುರೊಡೆಯುತ್ತದೆ.
ಶಾಂತಿ, ನೆಮ್ಮದಿ, ಕೌಟಂಬಿಕ ವಾತಾವರಣಕ್ಕೆ ಹೆಸರಾದ ಭೈರವಕೋಟೆ, ಜಗಳ, ಹೊಡೆದಾಟ ಪ್ರಕರಣಗಳೇ ಇಲ್ಲಿ ವಿರಳ. ಅಂತಹುದರಲ್ಲಿ ಆಯೇಶಾಳ ತಂದೆ ಬಾಷಾ ಕೂಡ ಊರ ಜನರ ಜತೆ ಉತ್ತಮ ಸಂಬಂಧ ಹೊಂದಿದವರು. ಪಕ್ಕದ ಊರು ಕೆಂಪನಹಳ್ಳಿಯಲ್ಲಿ ಆಯೇಶಾಳ ಚಿಕ್ಕಮ್ಮ ಶಿಕ್ಷಕಿ. ಆಕೆ ಕೂಡ ಪ್ರೇಮ ವಿವಾಹ ಮಾಡಿಕೊಂಡವರು , ಆ ನಂತರ ಗಂಡನಿಂದ ದೂರ ಇರುವಳು
ಬಾಷಾಗೆ ಮಗಳು ಪೈಲಟ್ ಮಾಡುವ ಕನಸು. ಶಿವು ಕೂಡ ವೈದ್ಯರಾಗಿ ಜನರ ಸೇವೆ ಮಾಡುವ ಕನದು ಕಂಡವ. ಇವರ ಪ್ರೀತಿಗೆ ಜಾತಿ ಅಡ್ಡಿಯಾಗುತ್ತದೆ.ಯುವ ಪ್ರೇಮಿಗಳ ಪ್ರೇಮಿಗಳು ಇಂತಹ ಸಮಯದಲ್ಲಿ ಏನು ಮಾಡ್ತಾರೆ ಮುಂದೇನು ಆಗುತ್ತದೆ ಎನ್ನುವುದು ಚಿತ್ರದ ಕುತೂಹಲ, ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ಯುವ ಆದಿತ್ಯ ನಟನೆಯಲ್ಲಿ ಗಮನ ಸೆಳೆದಿದ್ದಾರೆ. ನಟನಾಗಿ ಭರವಸೆ ಮೂಡಿಸಿದ್ದಾರೆ. ಅದೇ ರೀತಿ ನಾಯಕಿಯಾಗಿ ಯುವ ಪ್ರತಿಭಾನ್ವಿತೆ ಹುಡುಗಿ ಅಂಕಿತಾ ಜಯರಾಮ್ ಭವಿಷ್ಯದಲ್ಲಿ ಉತ್ತಮ ನಟಿಯಾಗುವ ಎಲ್ಲಾ ಲಕ್ಷಣ ತೋರಿದ್ದಾರೆ.ನೇಹಾ ಪಾಟೀಲ್ , ಬಲ ರಾಜವಾಡಿ ಮತ್ತಿತರು ಚಿತ್ರಕ್ಕೆ ಪೂರಕವಾಗಿ ನಟಿಸಿದ್ದಾರೆ. ಸಂದೇಶಾತ್ಮಕ ಚಿತ್ರ ಇದು