ಚಿತ್ರ ವಿಮರ್ಶೆ: ಭಾವನಾತ್ಮಕ ಪ್ರೇಮಕಥೆಯ ಹೂರಣ ಹೊಂದಿರುವ ಚಿತ್ರ ” ಜಿಗರ್”

ಚಿತ್ರ ; ಜಿಗರ್
ತಾರಾಗಣ: ಪ್ರವೀಣ್ ತೇಜ್, ವಿಜಯಶ್ರೀ, ವಿನಯಾ ಪ್ರಸಾದ್ ,ಯಶ್ ಶೆಟ್ಟಿ, ಬಾಲರಾಜವಾಡಿ,ಭವ್ಯ ಪೂಜಾರಿ ಮತ್ತಿತರರು
ನಿರ್ದೇಶನ: ಸೂರಿ ಕುಂದರ್
ನಿರ್ಮಾಣ; ಪೂಜಾ ವಸಂತ್ ಕುಮಾರ್
ರೇಟಿಂಗ್ : *** 3.5 / 5

ಅಮ್ಮ-ಮಗನ ಬಾಂಧವ್ಯ, ಸೆಂಟಿಮೆಂಟ್ ಹೂರಣಕ್ಕೆ ಕರಾವಳಿ ತೀರ ಪ್ರದೇಶದಕಥೆ, ಜೊತೆಗೊಂದಿಷ್ಟು ಬಿಸಿರಕ್ತದ ಹುಡುಗನ ರೋಶ, ಆವೇಶಗಳನ್ನು ಹದಗೊಳಿಸಿ ತೆರೆಗೆ ತಂದಿರುವ ಚಿತ್ರ ” ಜಿಗರ್”.
ಕರಾವಳಿ ತೀರ ಪ್ರದೇಶದ ಚಟುವಟಿಕೆ, ಅಲ್ಲಿನ ಗುತ್ತಿಗೆ, ಸ್ನೇಹ, ಪ್ರೀತಿ, ರೋಷ ,ಆವೇಶಗಳನ್ನು ಹದಗೊಳಿಸಿ ನಿರ್ದೇಶಕ ಸೂರಿ ಕುಂದರ್ ಚಿತ್ರವನ್ನು ತೆರೆಗೆ ತರುವ ಮೂಲಕ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಪಕ್ಕಾ ಲೋಕಲ್ ಹುಡುಗನ ಕಥೆಯ ತಿರುಳು ಹೊಂದಿರುವ ಚಿತ್ರ ಇದು.
ಉಡುಪಿ,ಕರಾವಳಿ ಭಾಗದ ಕಥೆಯನ್ನು ಚಿತ್ರರೂಪಕ್ಕೆ ತರಲು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರು ಅಲ್ಲಿ ನಡೆಯುವ ಮಸಲತ್ತು, ಸೇರಿದಂತೆ ವಿವಿಧ ವಿಷಯಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಜೊತೆಗೆ ಭಾವನಾತ್ಮಕ ಪ್ರೇಮಕಥೆಯನ್ನೂ ಚಿತ್ರದ ಮೂಲಕ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
ಜೀವಾ – ಪ್ರವೀಣ್ ತೇಜ್ , ಮುಂಗೋಪಿ ಸ್ವಭಾವದವ, ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ಬುದ್ದಿ ಕಲಿಸುವ ಜಾಯಮಾನದವ.ಮಾಡುವ ಕೆಲಸ ಬಿಟ್ಟು ಹೊಡೆದಾಡ ಬಡಿದಾಟ ರಗಳೆ ತಾಯಿಗೆ ಆಗಿ ಬರುವುದಿಲ್ಲ. ಇಂತಹ ಸಮಯದಲ್ಲಿ ಊರಿನ ಹುಡುಗಿ ರಕ್ಷಾ (ವಿಜಯಶ್ರೀ) ಗೆ ಸೌಂದರ್ಯಕ್ಕೆ ಮೊದಲ ನೋಟದಲ್ಲಿಯೇ ಮಾರು ಹೋಗುತ್ತಾನೆ. ಆಕೆಗೂ ಈತನ ಮೇಲೆ ಪ್ರೀತಿ ಇದ್ದರೂ ಅದನ್ನು ತೋರಿಸಿಕೊಳ್ಳದೆ ನಾಟಕವಾಡುರುವಾಕೆ.
ಮೊದಲೇ ಹೇಳಿಕೇಳಿ ಜೀವಾ ಮುಂಗೋಪದ ಹುಡುಗ, ಇಂತಹ ಹುಡುಗನನ್ನು ಕಂಡ ರಕ್ಷಾ ಪ್ರೀತಿ ಇದ್ದರೂ ಅದನ್ನು ತೋರಿಸಿಕೊಳ್ಳದೆ ಹಿಂಜರಿಯುತ್ತಾಳೆ. ಜೊತೆಗೆ ಸ್ನೇಹಿತರ ಬಳಗ. ಈತನ ಮುಂಗೋಪವೇ ಆತನನ್ನು ಮಾಡದ ತಪ್ಪಿಗೆ ಸಿಲುಕುವಂತೆ ಮಾಡುತ್ತೆ.ಜೈಲು ಪಾಲಾದ ಜೀವನಿಗೆ ಆಶ್ರಯವಾಗಿ ಊರಿನ ಗುತ್ತಿಗೆದಾರ ನಿಲ್ಲುತ್ತಾರೆ. ಜೈಲಿನಿಂದ ಜಾಮೀನು ಕೊಟ್ಟು ಬಿಡಿಸಿಕೊಂಡು ಬರುತ್ತಾರೆ.

ಇದೇ ಕೃತಜ್ಞತೆಗೆ ಹಲವು ವರ್ಷದಿಂದ ಸಿಗದೇ ಹೋದ ಗುತ್ತಿಗೆಯನ್ನು ದಕ್ಕಿಸಿಕೊಡುತ್ತಾನೆ. ಊರ ಮುಖಂಡ ಭಂಡಾರಿಗೆ ಜೀವಾನ ಮೇಲೆ ಮತ್ತಷ್ಟು ಪ್ರತಿ, ಗೌರವ ಹೆಚ್ಚುವಂತಾಗುತ್ತದೆ ಇತ್ತ ಜೀವಾ ಜೈಲು ಪಾಲಾದ ತಕ್ಷಣ ಮನೆಯವರು ಪ್ರೀತಿಸಿದ ಹುಡುಗಿಗೆ ಬೇರೊಂದು ಮದುವೆ ಮಾಡಲು ಸಿದ್ದತೆ ಮಾಡಿಕೊಂಡಿರುತ್ತಾರೆ.ಈ ವಿಷಯ ತಿಳಿದ ಜೀವಾ ಮುಂದೇನು ಮಾಡುತ್ತಾನೆ ಎನ್ನುವುದು ಕಥನ ಕುತೂಹಲದ ಸಂಗತಿ.
ನಿರ್ದೇಶಕ ಸೂರಿ ಕುಂದರ್, ಜೀವನದಲ್ಲಿ ಒಮ್ಮೆ ಆಯ್ಕೆ ತಪ್ಪಾದರೆ, ಮುಂದೆ ತಪ್ಪುಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ ಎನ್ನುವುದನ್ನು ನಿರೂಪಿಸಿದ್ದಾರೆ.
ನಾಯಕ ಪ್ರವೀಣ್ ತೇಜ್, ನಾಯಕಿ ವಿಜಯಶ್ರೀ, ಹಿರಿಯ ಕಲಾವಿದೆ ವಿನಯ ಪ್ರಸಾದ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಲರಾವಾಡಿ, ನಟ ಯಶ್ ಶೆಟ್ಟಿ ಮತ್ತಿತರರು ಗಮನ ಸೆಳೆದಿದ್ದಾರೆ
ಛಾಯಾಗ್ರಾಹಕ ಶಿವಸೇನಾ ಕರಾವಳಿ ಸೌಂದರ್ಯವನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ, ರಿತ್ವಿಕ್ ಮುರಳಿಧರ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ, ನಿರ್ಮಾಪಕಿ ಪೂಜಾ ವಸಂತಕುಮಾರ್ ಉತ್ತಮ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ