ಸುಲ್ತಾನ್ ರಾಜು ನಿರ್ದೇಶನದ ಮಕ್ಕಳ ಚಿತ್ರ “ಬಾಲ್ಯ”ಕ್ಕೆ ಚಿತ್ರೀಕರಣ ಪೂರ್ಣ

ಮಕ್ಕಳ ಕುರಿತು ಸಾಕಷ್ಟು ಸಿನಿಮಾಗಳು ತಯಾರಾಗಿವೆ. ಆದರೆ, ಮಕ್ಕಳ ಬಗೆಗೆ ಈವರೆಗೆ ಎಲ್ಲೂ ಬಾರದ ಅಪರೂಪದ ಕಥೆಯನ್ನು ಆಧರಿಸಿ ಸುಲ್ತಾನ್ ರಾಜು ನಿರ್ದೇಶನದಲ್ಲಿ “ಬಾಲ್ಯ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಒಟ್ಟಾರೆ ಮಕ್ಕಳ ಬೆಳವಣಿಗೆ, ಭವಿಷ್ಯದ ವಿಚಾರದಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿರುತ್ತದೆ.ಈವರೆಗೆ ವಿಭಿನ್ನ ಚಿತ್ರ ಇದಾಗಿದೆ. ಮಕ್ಕಳು ಬಾಲ್ಯಾವಸ್ಥೆಯಲ್ಲಿದ್ದಾಗ ಪೋಷಕರ ಪಾತ್ರ ಎಷ್ಟು ಮುಖ್ಯವಾಗಿರುತ್ತದೆ ತಂದೆ ತಾಯಿ ತೆಗೆದುಕೊಳ್ಳುವ ತೀರ್ಮಾನಗಳು ಅವರ ಭವಿಷ್ಯವನ್ನು ಹೇಗೆ ನಿರ್ಧರಿಸುತ್ತವೆ ಅವರ ಒಟ್ಟಾರೆ ಬದುಕಿನ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ಅಂಶಗಳನ್ನು “ಬಾಲ್ಯ” ಚಿತ್ರ ಅನಾವರಣಗೊಳಿಸಲಿದೆ.

ಈ ಹಿಂದೆ ಜಗ್ಗೇಶ್ ಅಭಿನಯದ ಸುಲ್ತಾನ ಮತ್ತು ಜಗ್ಗಿ ಚಿತ್ರ ನಿರ್ದೇಶನ ಮಾಡಿದ್ದ ವಿ.ಎಂ. ರಾಜು ಸುಲ್ತಾನ್ ರಾಜು “ಬಾಲ್ಯ” ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳನ್ನು ನೀಡಿದ್ದ ರಾಜು ಈ ಸಲ ಮಕ್ಕಳ ವಿಚಾರಗಳ ಸುತ್ತಲಿನ ಸಂದೇಶವಿರುವ ಕಥಾವಸ್ತು ಆಯ್ಕೆ ಮಾಡಿಕೊಂಡಿದ್ದಾರೆ.

ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು ಯಾರೇ ಆಗಲಿ, ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು. ತಾವು ಅನುಭವಿಸಿದ ಕಷ್ಟಗಳು ಅವರು ಅನುಭವಿಸಬಾರದು ಅಂತಾ ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಟುಕೊಂಡು ಬದುಕು ಸಾಗಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವೂ ಶ್ರಮಿಸುತ್ತಾರೆ.

ಶ್ರೀ ಜಗನ್ಮಾತೆ ಎಂಟಪ್ರ್ರೈಸಸ್ ಲಾಂಛನದಲ್ಲಿ ಎನ್. ಸತ್ಯನಾರಾಯಣಾಚಾರ್ ವಿಶ್ವಕರ್ಮ “ಬಾಲ್ಯ” ವನ್ನು ನಿರ್ಮಿಸಿದ್ದಾರೆ. ಇಂದು ವಿಶ್ವನಾಥ್ ಮತ್ತು ಎ.ಟಿ. ರವೀಶ್ ಸಂಗೀತ ನಿರ್ದೇಶನ, ರಮೇಶ್ ಕೋಯಿರ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ನೀಲ್ ಕಮಲ್ ಕೆಂಗಾಪುರ ಸಾಹಿತ್ಯ ಈ ಚಿತ್ರಕ್ಕಿದೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಪೂರೈಸಿರುವ ಈ ಚಿತ್ರದಲ್ಲಿ ಶಾಲಾ ಮಕ್ಕಳು ಸೇರಿದಂತೆ, ನಾರಾಯಣಸ್ವಾಮಿ, ಬುಲ್ಲೆಟ್ ವಿನೋದ್, ಕುರಿರಂಗ, ನಿಶ್ಚಿತ, ಅಪ್ಸರ, ಶಶಿರೇಖಾ, ಗೋಲ್ಡನ್ ಗೌರಿ, ಸಿದ್ದೇಶ್ ಮಾಸ್ಟರ್ ಆರ್ಯಮನ್, ಮಾಸ್ಟರ್ ದಕ್ಷಿತ್, ಮಾಸ್ಟರ್ ಮನೀಶ್, ಮಾಸ್ಟರ್ ದತ್ತಾ, ಕುಮಾರಿ ಯೋಗಿತಾ, ಕುಮಾರಿ ದೀಕ್ಷಾ ಮೊದಲಾದವರ ತಾರಾಗಣವಿದೆ.