Shooting for Sanju Weds Geeta-2: The hero gave a luxury gift for the wedding anniversary

ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಭರದ ಚಿತ್ರೀಕರಣ: ವಿವಾಹ ವಾರ್ಷಿಕೋತ್ಸವಕ್ಕೆ ಐಷಾರಾಮಿ ಉಡುಗೊರೆ ನೀಡಿದ ನಾಯಕ - CineNewsKannada.com

ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಭರದ ಚಿತ್ರೀಕರಣ: ವಿವಾಹ ವಾರ್ಷಿಕೋತ್ಸವಕ್ಕೆ ಐಷಾರಾಮಿ ಉಡುಗೊರೆ ನೀಡಿದ ನಾಯಕ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸ್ವೀಕ್ವೆಲ್‍ಗಳ ನಿರ್ಮಾಣ ಕೆಲಸ ಒಂದರ ಒಂದರಂತೆ ನಡೆಯುತ್ತಿದೆ. ಅದು ಯಶಸ್ವಿ ಚಿತ್ರಗಳು ಎನ್ನುವುದು ಚಿತ್ರತಂಡದ ಹೆಮ್ಮೆಯ ವಿಷಯ. ಇದೀಗ ಆ ಸಾಲಿಗೆ ದಶಕದ ಹಿಂದೆ ತೆರೆಗೆ ಬಂದು ಯಶಸ್ವಿಯಾಗಿದ್ದ “ ಸಂಜು ವೆಡ್ಸ್ ಗೀತಾ” ಚಿತ್ರದ ಸೀಕ್ವೆಲ್‍ಗೆ ಫಾರ್ ಹೌಸ್‍ನಲ್ಲಿ ಭರದ ಚಿತ್ರೀಕರಣ ನಡೆದಿದೆ.

ನಟನೆ, ನಿರ್ದೇಶನದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಠ ಚಾಪು ಮೂಡಿಸಿರುವ ನಾಗಶೇಖರ್, ತಾವೇ ನಿರ್ದೇಶನ ಮಾಡಿದ್ದ ಚಿತ್ರ ಸಂಜು ವೆಡ್ಸ್ ಗೀತಾದ ಭಾಗ-2ರ ಚಿತ್ರೀಕರಣ ಕೈಗೆತ್ತಿಕೊಂಡಿದ್ದಾರೆ. ನಾಗಶೇಖರ್ ಅವರ ಪ್ರಯತ್ನಕ್ಕೆ ಅವರ ಇಂಜಿನಿಯರ್ ಕ್ಲಾಸ್ ಮೆಟ್ ಛಲವಾದಿ ಕುಮಾರ್ ಸಾಥ್ ನೀಡಿದ್ದಾರೆ.

ಅಂದಹಾಗೆ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿದ್ದ ಬಹುತೇಕ ಕಲಾವಿದರು ಭಾಗ ಎರಡರಲ್ಲಿಯೂ ಮುಂದುವರಿಸಿದ್ದಾರೆ. ನಾಯಕಿ ರಮ್ಯಾ ಬದಲಿಗೆ ಮತ್ತೊಬ್ಬ ನಟಿ ರಚಿತಾ ರಾಮ್ ಆಗಮನವಾಗಿದೆ, ಇನ್ನುಳಿದಂತೆ ಹಿರಿಯ ಕಿರಿಯ ಕಲಾವಿದರು ಸಂಜು ವೆಡ್ಸ್ ಗೀತಾಗೆ ಸಾಥ್ ನೀಡಿದ್ದಾರೆ.

ಚಿತ್ರೀಕರಣ ಎಲ್ಲಿ: ಯಾರೆಲ್ಲ ಏನಂದ್ರು:

ಕನಕಪುರ ರಸ್ತೆಯ ಫಾರಂ ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಾಯಕ, ನಾಯಕಿಗೆ ಐಶಾರಾಮಿ ಉಡುಗೊರೆ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಅವರು ನಿರ್ದೇಶಕ ನಾಗಶೇಖರ್ ಸಲಹೆ ಸೂಚನೆಯಂತೆ ಚಿತ್ರೀಕರಿಸಿಕೊಳ್ಳುತ್ತಿದ್ದರು.

ಚಿತ್ರೀಕರಣ ಸ್ಥಳಕ್ಕೆ ಮಾಧ್ಯಮದವರನ್ನು ಆಹ್ವಾನಿಸಿದ್ದ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. ಈ ವೇಳೆ ಮಾತಿಗಿಳಿದ ನಿರ್ದೇಶಕ ನಾಗಶೇಖರ್ ಚಿತ್ರೀಕರಣ ಆರಂಭವಾಗುವುದಕ್ಕೆ ತಡವಾಗಿದ್ದಕ್ಕೆ ಕಾರಣ ನಮ್ಮ ಚಿತ್ರದ ಮತ್ತೋರ್ವ ನಿರ್ಮಾಪಕ, ಒಳ್ಳೆಯ ಸ್ನೇಹಿತ ಮಾಭಿ ನಾರಾಯಣ್ ಎನ್ನುತ್ತಲೇ ಮಾಹಿತಿ ಹಂಚಿಕೊಂಡರು.

ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಭಾಗ ಎರಡು ಆಗಲು ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನ ಚಿತ್ರೀಕರಣ ನಡೆದಿದೆ. ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾದವು. ರಂಗಾಯಣ ರಘು, ಸಾಧು ಕೋಕಿಲ. ಅರುಣ್ ಸಾಗರ್ ಅವರಿಗೆ ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ ಎಂದರು

ನನ್ನ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್‍ಮೆಟ್ ಛಲವಾದಿ ಕುಮಾರ್ ಜೊತೆಗಿದ್ದಾರೆ. ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ. ಲೀಡ್ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಸಾಥ್ ನೀಡುತ್ತಿದ್ದಾರೆ. ಇದೀಗ ಮೊದಲ ಹಂತದಲ್ಲಿ 5 ದಿನ ಮಾಡಿ ಬಿಡುವು ಕೊಟ್ಟ ನಂತರ ಡಿಸೆಂಬರ್ 2 ರಿಂದ ಬೆಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ. ಆನಂತರ ಡಿಸೆಂಬರ್ 9ರಿಂದ ಸ್ವಿಟ್ಜಲ್ರ್ಯಾಂಡ್ ನಲ್ಲಿ 12 ದಿನ ಮುಗಿಸಿ, ನಂತರ ಮುಂಬಯಿ, ಹೈದರಾಬಾದ್ ಚಿತ್ರೀಕರಣ ಪೂರ್ಣ ಮಾಡುವುದಾಗಿ ಹೇಳಿದರು

ಯಾವಾಗ ಬಿಡುಗಡೆ:

ಸಂಜು ವೆಡ್ಸ್ ಗೀತಾ ಏಪ್ರಿಲ್ 1 ರಂದು ಬಿಡುಗಡೆಯಾಗಿ ಯಶಸ್ಸು ಕಂಡಿತ್ತು.ಇದೀಗ ಆ ಸೆಂಟಿಮೆಂಟ್‍ನಲ್ಲಿ ಸಂಜು ವೆಡ್ಸ್ ಗೀತಾ -2 ಚಿತ್ರವನ್ನು 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎಂದು ಹೇಳಿಕೊಂಡರು ನಿರ್ದೇಶಕ ನಾಗಶೇಖರ್.

ಇದೇ ಡಿಸೆಂಬರ್ 29 ನಮ್ಮ ನಿರ್ಮಾಪಕರಾದ ಚಲವಾದಿ ಕುಮಾರ್ ಅವರ ಹುಟ್ಟುಹಬ್ಬ. ಅಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.

ನಿರ್ಮಪಕ ಚಲವಾದಿ ಕುಮಾರ್ ಮಾತನಾಡಿ, ನಾಗಶೇಖರ್ ನಾನು ಇಂಜಿನಿಯರಿಂಗ್ ಕ್ಲಾಸ್ ಮೆಟ್ಸ್. ಸ್ಕ್ರಿಪ್ಟ್ ನಲ್ಲೂ ನಾನು ಜೊತೆ ಕುಳಿತಿದ್ದೆ. ಸಿನಿಮಾ ತುಂಬಾ ಚನ್ನಾಗಿ ಬರ್ತಾ ಇದೆ. ಇನ್ನು ಮುಂದೆಯೂ ಒಳ್ಳೆಯ ಸಿನಿಮಾ ಮಾಡುವೆ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ 14 ವರ್ಷದ ಹಿಂದೆ ಮಾಡಿದ್ವಿ. ಈಗ ಟೆಕ್ನಾಲಜಿ ಬದಲಾಗಿದೆ. ಈ ಸಿನಿಮಾನ ಇನ್ನೂ ಚೆನ್ನಾಗಿ ಮಾಡಬೇಕಿದೆ ಎಂದು ಹೇಳಿದರು.

ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ನಾವೆಲ್ಲ ಸೇರಿ ಅಷ್ಟೇ ಪ್ರೀತಿಯಿಂದ ಈ ಸಿನಿಮಾ ಮಾಡ್ತಾ ಇದ್ದೇವೆ ಕಥೆಯೂ ಮುದ್ದಾಗಿ ಬಂದಿದೆ. ನಿರ್ಮಾಪಕರ ಹುಟ್ಟುಹಬ್ಬದಂದು ಟ್ರೇಲರ್ ಬಿಡುಗಡೆ ಮಾಡುತ್ತೇವೆ ಎಂದರು.

ನಾಯಕಿ ರಚಿತಾ ರಾಮ್ ಮಾತನಾಡಿ ನನ್ನ ಪಾತ್ರದ ಹೆಸರು ಗೀತಾ, ತುಂಬಾ ಶೇಡ್ಸ್ ಇರುವಂಥ ಪಾತ್ರ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ನಾಲ್ಕು ದಿನದಿಂದ ಶೂಟ್ ನಲ್ಲಿ ಭಾಗಿಯಾಗಿದ್ದು ಒಳ್ಳೆ ಅನುಭವ ನೀಡ್ತಾ ಇದೆ. ಕಿಟ್ಟಿ ಅವರ ಜೊತೆ ಒಂದೆರಡು ಶಾಟ್ ಮಾಡಿದ್ದೇನೆ. ಒಳ್ಳೆ ಎನರ್ಜಿ ಚಿತ್ರದಲ್ಲಿದೆ ಎಂದರು.

ರಂಗಾಯಣ ರಘು ಮಾತನಾಡಿ ನನ್ನ ಪಾತ್ರದ ಬಗ್ಗೆ ಗೊತ್ತಿಲ್ಲ. ಒಳ್ಳೆಯ ನಿರ್ಮಾಪಕರು ನಮಗೆ ಸಿಕ್ಕಿದ್ದಾರೆ ಎಂದರು.

ಸಾಧುಕೊಕಿಲ ಮಾತನಾಡಿ ಇದರಲ್ಲಿ ಒಳ್ಳೆಯ ಪಾತ್ರ ಮಾಡ್ತಾ ಇದ್ದೇನೆ. ನಾಗಶೇಖರ್ ಜೊತೆ ಕೆಲಸ ಮಾಡಿದ್ದು ಯಾವಾಗಲೂ ಮರೆಯಲ್ಲ. ಸಂಜು ವೆಡ್ಸ್ ಗೀತಾ ಇಂದ ಜೊತೆಗಿದ್ದೇನೆ ಎಂದರು.

ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ ಮಾತನಾಡಿ ನಾನು ಈ ಸಿನಿಮಾಗೆ ಮ್ಯೂಸಿಕ್ ಮಾಡ್ತಾ ಇರೋದೇ ಅದೃಷ್ಟ ಎನ್ನಬಹುದು. ಚಿತ್ರದಲ್ಲಿ 5 ಹಾಡುಗಳಿದ್ದು, ಕವಿರಾಜ ಸಾಹಿತ್ಯ ಒಳ್ಳೆ ಸಾಹಿತ್ಯ ಬರೆದಿದ್ದಾರೆ ಎಂದರು.

ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin