FOR REGISTRATION AWESOME PERFORMANCE: Milana-Prithvi's act is applauded by the audience

ಫಾರ್ ರಿಜಿಸ್ಟ್ರೇಷನ್ ಅಮೋಘ ಪ್ರದರ್ಶನ: ಮಿಲನಾ-ಪೃಥ್ವಿ ನಟನೆಗೆ ಪ್ರೇಕ್ಷಕರ ಜೈಕಾರ - CineNewsKannada.com

ಫಾರ್ ರಿಜಿಸ್ಟ್ರೇಷನ್ ಅಮೋಘ ಪ್ರದರ್ಶನ: ಮಿಲನಾ-ಪೃಥ್ವಿ ನಟನೆಗೆ ಪ್ರೇಕ್ಷಕರ ಜೈಕಾರ

ಫ್ಯಾಮಿಲಿ ಡ್ರಾಮಾ ಫಾರ್ ರಿಜಿಸ್ಟ್ರೇಷನ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮನರಂಜನೆ ನೀಡುತ್ತಲೇ ಒಂದು ಮೆಸೇಜ್ ನೀಡುವಲ್ಲಿಯೂ ಈ ಚಿತ್ರ ಯಶಸ್ವಿ ಆಗಿದೆ. ಇದೇ ಮೊದಲ ಬಾರಿಗೆ ಪೃಥ್ವಿ ಅಂಬಾರ್ ಮತ್ತು ಮಿಲನಾ ನಾಗರಾಜ್ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಫ್ರೆಶ್ ಜೋಡಿ, ಫ್ರೆಶ್ ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಫೆಬ್ರವರಿ 23ರಂದು ತೆರೆಗೆ ಬಂದಿದ್ದ ಫಾರ್ ರಿಜಿಸ್ಟ್ರೇಷನ್ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಒಂಡೆದೆ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಮೆಚ್ಚಿಕೊಳ್ಳುತ್ತಿರುವ ಚಿತ್ರದ ಟ್ರೇಲರ್ ನೋಡಿ ಸಂಸದ ತೇಜಸ್ವಿ ಸೂರ್ಯ ಇಷ್ಟಪಟ್ಟಿದ್ದು, ಸಿನಿಮಾ ನೋಡುವುದಾಗಿ ಚಿತ್ರತಂಡಕ್ಕೆ ತಿಳಿಸಿದ್ದಾರೆ.

ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ಮಹಿಳೆಯರು ನೋಡಿ ಮನಸಾರೆ ಕೊಂಡಾಡಿದ್ದಾರೆ. ಬೆಂಗಳೂರಿನ ಲೂಲೂ ಮಾಲ್ ನಲ್ಲಿ ಲೇಡೀಸ್ ಗಾಗಿ ಚಿತ್ರತಂಡ ಇತ್ತೀಚೆಗಷ್ಟೇ ಸ್ಪೆಷಲ್ ಶೋ ಆಯೋಜಿಸಿತ್ತು. ಈ ಶೋಗೆ ಭರಪೂರ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ನೋಡಿದ ಎಲ್ಲಾ ಮಹಿಳೆಯರು ನವೀನ್ ಹಾಗೂ ಇಡೀ ತಂಡದ ಪ್ರಯತ್ನಕ್ಕೆ ಚಪ್ಪಾಳೆ ತಟ್ಟಿದ್ದಾರೆ.

ಫಾರ್ ರಿಜಿಸ್ಟ್ರೇಷನ್ ಚಿತ್ರದ ಹಾರೈಸುವ ಎಂಬ ವಿಡಿಯೋ ಹಾಡು ಬಿಡುಗಡೆಯಾಗಿದೆ. ತಾಯಿ ತನ್ನ ಮಗಳನ್ನು ಮದುವೆ ಮಾಡಿಕೊಡುವ ಸುಂದರ ಕ್ಷಣಗಳ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಆರ್ ಕೆ ಹರೀಶ್ ಟ್ಯೂನ್ ಹಾಕಿದ್ದು, ವಿಜಯ್ ಪ್ರಕಾಶ್ ಕಂಠ ನೀಡಿದ್ದಾರೆ.

ಮಿಲನಾ ನಾಗರಾಜ್ ಮತ್ತು ಪೃಥ್ವಿ ಅಂಬಾರ್ ಮಾತ್ರವಲ್ಲದೇ ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರ ದೊಡ್ಡ ಬಳಗವಿದೆ. ಪಿ. ರವಿಶಂಕರ್, ತಬಲ ನಾಣಿ, ಸುಧಾ ಬೆಳವಾಡಿ, ಸಿಹಿ ಕಹಿ ಚಂದ್ರು, ರಮೇಶ್ ಭಟ್, ಎಂ.ಎಸ್. ಉಮೇಶ್, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸಿದ್ದಾರೆ. ಕಾಮಿಡಿ ಮೂಲಕ ತಬಲ ನಾಣಿ ಅವರು ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ.

ನಿರ್ದೇಶಕ ನವೀನ್ ದ್ವಾರಕನಾಥ್ ಹೊಸತನದ ಕಥೆಯೊಂದಿಗೆ ರಂಜಿಸುವ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಆರ್.ಕೆ.ಹರೀಶ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಕಲತಿ, ಅಭಿಷೇಕ್ ಜಿ ಕಾಸರಗೋಡು ಕ್ಯಾಮರಾ ವರ್ಕ್ ಮಾಡಿದ್ದಾರೆ. ನಿಶ್ಚಲ್ ಫಿಲಂಸ್ ಬ್ಯಾನರ್ನಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin