ಟೆಕ್ಕಿಗಳು ಬಳಸುವ ಪದ ಈಗ ಸಿನಿಮಾದ ಶೀರ್ಷಿಕೆ: ’switch {case n
ವಿದ್ಯಾವಂತ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ’switch {case n ಚಿತ್ರದ ಟ್ರೇಲರ್ ಹಾಗೂ ರ‍್ಯಾಪ್ ಸಾಂಗ್ ಬಿಡುಗಡೆ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ತಂಡದಲ್ಲಿ ಬಹುತೇಕ ಇಂಜಿನಿಯರ್‌ಗಳು ಕೆಲಸ ಮಾಡಿರುವುದು ವಿಶೇಷ. ಚೇತನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಒಂದಷ್ಟು ಘಟನೆಗಳು ಇವರ ಜೀವನದಲ್ಲಿ ನಡೆದಿರುವುದು. ಮಿಕ್ಕಂತೆ ನೋಡಿದ್ದು, ಕೇಳಿದ್ದನ್ನು ಮನರಂಜನೆ ಮೂಲಕ ತೋರಿಸಲಾಗಿದೆ. ಕೊಂಡಾಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬೇಬಿ.ಎಸ್.ಶೆಟ್ಟಿ-ಕೆಮಂತ್.ಪಿ.ರೆಡ್ಡಿ-ಸುಧಾಂಶು ಶಂಕರ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಮಹೇಶ್ ಡೋಂತಿರೆಡ್ಡಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಉದ್ಯೋಗಿಗಳು ಒಂದು ಕಂಪೆನಿಯಿಂದ ಮತ್ತೋಂದು ಕಂಪೆನಿಗೆ ಹೋಗುವ ಸಂದರ್ಭದಲ್ಲಿ ಟೈಟಲ್ ಪದವನ್ನು ಬಳಸುತ್ತಾರೆ.
ಕಂಪೆನಿಯಲ್ಲಿ ನಡೆಯುವ ಮಾನವೀಯ ಸಂಬಂಧಗಳು, ವ್ಯವಸ್ಥೆ, ರಾಜಕೀಯ. ಯಾರು ಸರಿಯಾಗಿರುವುದಿಲ್ಲ. ಎಲ್ಲರು ತಪ್ಪು ಮಾಡುತ್ತಾರೆ. ಅದನ್ನು ಮಾಡುವವರಿಗೆ ಏನಾದರೂ ಕಾರಣ ಇರುತ್ತದೆ. ಹೀಗೆ ಕಥಾನಾಯಕ ಸಿದ್ದಾರ್ಥ್ ಜೀವನದಲ್ಲಿ, ಇವೆಲ್ಲವು ಬಂದಾಗ ಅವನ ಬದುಕು ಏನಾಗುತ್ತದೆ. ಸಿನಿಮಾವು ಐಟಿ ಮಂದಿಗೆ ಕನೆಕ್ಟ್ ಆಗುತ್ತದೆ. ಬೇರೆಯವರಿಗೆ ಇಂತಹ ಹುಡುಗನ ಪಯಣ ಹೇಗಿರುತ್ತದೆ ಎಂಬುದು ತಿಳಿಯುತ್ತದೆ. ಒಂದೊಂದು ಸಣ್ಣ ಪಾತ್ರವು ಸನ್ನಿವೇಶಕ್ಕೆ ಮಹತ್ವ ಕೊಡುತ್ತದೆ.
’ಇಷ್ಟಕಾಮ್ಯ’ ಖ್ಯಾತಿಯ ವಿಜಯ್ ಸೂರ್ಯ ನಾಯಕ. ಶ್ವೇತಾ ವಿಜಯ್‌ಕುಮಾರ್ ನಾಯಕಿ. ಉಳಿದಂತೆ ಬಲರಾಜವಾಡಿ, ಸಂತೋಷ್ ಕಾರ್ಕಿ, ಪೃಥ್ವಿರಾಜ್, ಕಾರ್ತಿಕ್ ವೈಭವ್, ವಿಜಯ್ ಸಿದ್ದರಾಜು ಮುಂತಾದವರು ನಟಿಸಿದ್ದಾರೆ.
ಭೃತ್ತ್ವ ಶ್ಯಾಲೆಬ್ ಸಂಗೀತದ ಒಂದು ಹಾಡಿಗೆ ಚಂದನ್‌ಶೆಟ್ಟಿ-ದೀಪಕ್‌ದೊಡ್ಡೇರ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಪ್ರಶಾಂತ್ ಗಿರಿಯಪ್ಪ ಅವರದಾಗಿದೆ. ಕಥೆಗೆ ಪೂರಕವಾಗುವಂತೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ರಿಯಲ್ ಆಗಿ ಚಿತ್ರೀಕರಿಸಲಾಗಿದೆ. ಸದ್ಯ ಕಲರ್ ಗ್ರೇಡಿಂಗ್‌ದಲ್ಲಿ ಸಿನಿಮಾ ಬ್ಯುಸಿ ಇದೆ.