Four Britishers were shot dead ``Shanubhogara Magalu

ನಾಲ್ವರು ಬ್ರಿಟಿಷರನ್ನು ಗುಂಡಿಟ್ಟು ಕೊಂದ “ಶಾನುಭೋಗರ ಮಗಳು” - CineNewsKannada.com

ನಾಲ್ವರು ಬ್ರಿಟಿಷರನ್ನು ಗುಂಡಿಟ್ಟು ಕೊಂದ “ಶಾನುಭೋಗರ ಮಗಳು”

“ಶಾನುಭೋಗರ ಮಗಳು” ಚಿತ್ರದ ಚಿತ್ರೀಕರಣ ಶ್ರೀರಂಗ ಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಲಾಗಿದೆ. “ಶಾನುಭೋಗರ ಮಗಳು ಪಾತ್ರ ನಿರ್ವಹಿಸುತ್ತಿರುವ ನಟಿ ರಾಗಿಣಿ ಪ್ರಜ್ವಲ್ ನಾಲ್ಕಾರು ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯ ಸೆರೆಹಿಡಿಯಲಾಗಿದೆ.

ಭುವನ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ “ಶಾನುಭೋಗರ ಮಗಳು” ಚಿತ್ರ ಸ್ವತಂತ್ರ ಪೂರ್ವ ಕಾದಂಬರಿ ಆಧಾರಿತ ಚಿತ್ರವಾಗಿದೆ. ಲೇಖಕಿ ಭಾಗ್ಯ ಕೆ ಮೂರ್ತಿ ಆಧಾರಿತ ಚಿತ್ರದಲ್ಲಿ ಬ್ರಿಟಿಷರು, ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರುಗಳೊಂದಿಗಿನ ಸನ್ನಿವೇಶಗಳು ಹೆಚ್ಚಿವೆ.

ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ಅಭಿನಯಿಸುತ್ತಿದ್ದು, ರಮೇಶ್‍ಭಟ್, ಸುಧಾಬೆಳವಾಡಿ, ಪದ್ಮಾ ವಾಸಂತಿ, ವಾಣಿಶ್ರೀ, ಭಾಗ್ಯಶ್ರೀ, ಕುಮಾರಿ ಅನನ್ಯ, ಟಿ.ಎನ್. ಶ್ರೀನಿವಾಸ ಮೂರ್ತಿ, ನಿರಂಜನ ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ.

ಸಂಗೀತ ನಿರ್ದೇಶನ ಡಾ. ಶಮಿತಾ ಮಲ್ನಾಡ್, ಚಿತ್ರಕತೆ-ಸಂಭಾಷಣೆ: ಬಿ.ಎ. ಮಧು, ಛಾಯಾಗ್ರಹಣ ಜೈ ಆನಂದ್, ಸಂಕಲನ: ಕೆಂಪರಾಜ್, ನಿರ್ಮಾಣ ನಿರ್ವಹಣೆ: ಕರುಣ್ ಮಯೂರ್, ಸಹ ನಿರ್ದೇಶನ: ರಘು ಕುಮಾರ್, ನಾಗರಾಜ ರಾವ್ ಹಾಸನ್ ಹಾಗೂ ಸುನೀಲ್ ಅವರದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin