ಸಿನಿಮಾಸಕ್ತರಿಗೆ ಉಚಿತ ಚಲನಚಿತ್ರ ಪ್ರಾಯೋಗಿಕ ತರಬೇತಿ
ಹೈದರಾಬಾದ್ ನ ಟೆನ್ ಟ್ರೀಸ್ ಫಿಲ್ಮ್ ಪ್ರೊಡಕ್ಷನ್ ಹೌಸ್ ನ ಸಹಯೋಗದಲ್ಲಿ ನಗರದ ಸ್ನೇಹಾಲಯಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಗಸ್ಟ್ 24 ರಿಂದ 26 ರವರಿಗೆ 3 ದಿನಗಳ ಉಚಿತ ಅಲ್ಪಾವಧಿ ಪ್ರಾಯೋಗಿಕ ಚಲನಚಿತ್ರ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಚಲನಚಿತ್ರ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವ ಬಗ್ಗೆ ಹಾಗು ಛಾಯಾಗ್ರಹಣ ಸಂಕಲನ, ಎಡಿಟಿಂಗ್ ರಿಪೋರ್ಟ್ ಕಂಟ್ಯೂನಿಟಿ ರಿಪೋರ್ಟ್ ಬರೆಯುವ ವಿಧಾನ, ಸಿನಿಮಾ ಮಾರುಕಟ್ಟೆ ಯಲ್ಲಿ ಸಿನಿಮಾ ಬಡ್ಜೆಟ್ ನಾ ಪ್ರಾಮುಖ್ಯತೆ ಹಾಗೂ ಸಿನಿಮಾ ಸೆನ್ಸಾರ್ ಪಡೆಯುವ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ
ಚಿತ್ರರಂಗದ ಖ್ಯಾತ ಕಲಾವಿದ ಮತ್ತು ತಂತ್ರಜ್ಞರಿಂದ ತರಬೇತಿ ನೀಡಲಾಗುತ್ತದೆ.ದೂರದಿಂದ ಬರುವ ಶಿಬಿರಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆ ಇದ್ದು ,ಭಾಗವಹಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಸಹ ನೀಡಲಾಗುವುದು ಎಂದು ರಾಜೀವ್ ಕೃಷ್ಣ ಗಾಂಧಿ ತಿಳಿಸಿದ್ದಾರೆ.
ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರವ ಆಸಕ್ತರು ತಮ್ಮ ಇತ್ತೀಚಿನ ಎರಡು ಭಾವಚಿತ್ರ ಮತ್ತು ಸ್ವ ವಿವರಗಳೊಂದಿಗೆ ಕಾರ್ಯದರ್ಶಿ ಸ್ನೇಹಾಲಯಂ ಚಾರಿಟಬಲ್ ಟ್ರಸ್ಟ್ ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊಬೈಲ್ ಸಂಖ್ಯೆ 9000444557 tentreesfilmproductio@gmail.com ಸಂಪರ್ಕಿಸಬಹದಾಗಿದೆ.