From Germany to Sandalwood, the actor's "Rakki": Suspense, thriller to hit the screens on July 10

ಜರ್ಮನಿಯಿಂದ ಸ್ಯಾಂಡಲ್‍ವುಡ್ ತನಕ ನಟ “ರಕ್ಕಿ” : ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಜುಲೈ 10ರಂದು ತೆರೆಗೆ - CineNewsKannada.com

ಜರ್ಮನಿಯಿಂದ ಸ್ಯಾಂಡಲ್‍ವುಡ್ ತನಕ ನಟ “ರಕ್ಕಿ” : ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಜುಲೈ 10ರಂದು ತೆರೆಗೆ

ಕಳೆದ ಹಲವು ವರ್ಷಗಳಿಂದ ಜರ್ಮನಿಯಲ್ಲಿ ನೆಲೆಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಟುಂಬದಕ್ಕೆ ಆಪ್ತರಾಗಿರುವ ಸುರೇಶ್ ಸಾಲಿಗ್ರಾಮ ಅವರು ತಮ್ಮ ಪುತ್ರ ರಕ್ಕಿ ಸುರೇಶ್‍ಗಾಗಿ ನಿರ್ಮಾಣ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ “ರಕ್ಕಿ” ಚಿತ್ರ ಜುಲೈ 10 ರಂದು ತೆರೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಅನ್ನು ನಿರ್ಮಾಪಕಿ ಅಶ್ಚಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದರು

ನಾಯಕ ರಕ್ಕಿ ಸುರೇಶ್ ಮಾತನಾಡಿ , ಕ್ರೈಮ್ ಥ್ರಿಲ್ಲರ್ ಕಥೆ, ಆಧುನಿಕ ದಿನಮಾನದ ಕಲ್ಟ್ ಸಿನಿಮಾ, ಪುನೀತ್ ರಾಜ್ ಕುಮಾರ್ ನನಗೆ ಗಾಡ್‍ಮದರ್, ರಕ್ಕಿ ಚಿತ್ರವನ್ನು ಎಲ್ಲಾ ಸಮುದಾಯದವರು ನೋಡಬಹುದಾದ ಚಿತ್ರ. ಟಿಪಿಕಲ್ ಗ್ಯಾಂಗ್ ಸ್ಟರ್ ಪಾತ್ರ, ಜರ್ಮನಿಯಲ್ಲಿ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡು ಪರೀಕ್ಷೆ ಬರೆದಿದ್ದೆನೆ. ನಮ್ಮ ಚಿತ್ರ ಜುಲೈ 10 ರಂದು ಬಿಡುಗಡೆಯಾಗಲಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು

ನಿರ್ದೇಶಕ ವೆಂಕಟ್ ಭಾರಧ್ವಜ್ ಮಾತನಾಡಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಎರಡು ಕಥೆ ಕೇಳಿ ಥ್ರಿಲ್ ಆಗಿ ಮಾಡಿ ಅಂದ್ರು.. ಕಥೆ ಆದ ಮೇಲೆ ನಾಯಕ ರಕ್ಕಿ ಚಿತ್ರಕ್ಕೆ ತಯಾರಿ ಮಾಡಿಕೊಂಡೆವು. ಕಳೆದ ವರ್ಷ ಅಕ್ಟೋಬರ್ ಕೊನೆಯಲ್ಲಿ ಚಿತ್ರೀಕರಣ ಆರಂಭಿಸಿ ಶೀಘ್ರವಾಗಿ ಚಿತ್ರ ಪೂರ್ಣಗೊಳಿಸಿ ಚಿತ್ರ ಬಿಡುಗಡೆ ಹಂತಕ್ಕೆ ತಂದಿದ್ದೇವೆ, ಚಿತ್ರಕ್ಕೆ ನಾಯಕಿಯರನ್ನು ಆಯ್ಕೆ ಮಾಡುವುದು ಕಷ್ಟ ಆಯಿತು.ತಡವಾದರೂ ಉತ್ತಮ ನಾಯಕಿಯರು ಸಿಕ್ಕಿದ್ದಾರೆ. ಕಲಾವಿದರಾದ ಸಂಪತ್ ಮೈತ್ರೈಯಾ, ಬಿ ಸರೇಶ್ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ, ಜುಲೈ 10 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದರು

ನಿರ್ಮಾಪಕ ಸುರೇಶ್ ಸಾಲಿಗ್ರಾಮ ಮಾತನಾಡಿ ಚಿತ್ರಕ್ಕಾಗಿ ಮಗ ತುಂಬಾ ಶ್ರಮಪಟ್ಟಿದ್ದಾನೆ. ಕುಟುಂಬದ ಸಹಿತ ಬನ್ನಿ ಇನ್ನಷ್ಡು ಚಿತ್ರ ಮಾಡುವ ಉದ್ದೇಶವಿದೆ. ಮೂಲತಃ ಸಾಲಿಗ್ರಾಮದವನು. ಐಟಿ ಉದ್ಯೋಗಿ. ಇಪ್ಪತ್ತು ವರ್ಷಗಳಿಂದ ಜರ್ಮನ್ ನಲ್ಲೇ ವಾಸಿಸುತ್ತಿದ್ದೇನೆ. ತಂದೆ ರಾಜಶೇಖರ್ ಅವರು ಡಾ.ರಾಜಕುಮಾರ್ ಅಭಿನಯದ “ಹೊಸಬೆಳಕು” ಚಿತ್ರ ನಿರ್ಮಾಣ ಮಾಡಿದ್ದರು. ಈಗ “ರಕ್ಕಿ” ಚಿತ್ರ ನಿರ್ಮಾಣ ಮಾಡಿದ್ದೇನೆ. ನನ್ನ ಮಗ “ರಕ್ಕಿ” ನಾಯಕನಾಗಿ ನಟಿಸಿದ್ದಾನೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಒಂದೊಳ್ಳ ಕಥೆ ಮಾಡಿದ್ದಾರೆ. ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜಕುಮಾರ್ ಸಹಕಾರ ಚಿತ್ರಕ್ಕೆ ಅಪಾರ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ಇಡೀ “ರಕ್ಕಿ” ಚಿತ್ರತಂಡಕ್ಕೆ ಧನ್ಯವಾದ ಎಂದರು

ನಾಯಕಿ ಪಲ್ಲವಿ ಮಂಜುನಾಥ್ ಮಾತನಾಡಿ ಒಂದೂವರೆ ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರತಂಡಕ್ಕೆ ಲಕ್ಕಿ ಚಾರ್ಮ್, ನಿರ್ದೇಶಕ ವೆಂಕಟ್ ಭಾರದ್ವಾಜ್ ಪಾಸಿಟಿವ್ ಪ್ರಚಾರ ಪಡೆಯುತ್ತಿದ್ದಾರೆ. ಚಿತ್ರದಲ್ಲಿ ಪಾತ್ರದ ಸಿರಿ ನನ್ನ ಪಾತ್ರ ಹೆಸರು ಎಂದು ಹೇಳಿದರು.

ನಾಯಕಿ ಆಶಿಕಾ ಸೋಮಶೇಖರ್ ಮಾತನಾಡಿ ರಕ್ಕಿ ಚಿತ್ರ ಜುಲೈ 10 ರಂದು ತೆರೆಗೆ ಬರಲು ಸಜ್ಜಾಗಿದೆ ಎಲ್ಲರ ಸಹಕಾರ ಬೆಂಬಲ ಬೇಕು.. ಚಿತ್ರದಲ್ಲಿ ಸುಮ ಎನ್ನುವ ರಾಜಕಾರಣಿ ಪಾತ್ರ ಎಂದರು

ಹಿರಿಯ ಕಲಾವಿದ ಬಿ ಸುರೇಶ್ ಮಾತನಾಡಿ ಸಿನಿಮಾ ಜನರಿಗೆ ತಲುಪಿಸುವ ಕೆಲಸ ಮಾದ್ಯಮವರ ಬೆಂಬಲ ಅಗತ್ಯ. ನಿರ್ದೇಶಕ ವೆಂಕಟ್ ಭಾರಧ್ವಜ್ 2018 ರಲ್ಲಿ ರೌಡಿ ಪಾತ್ರಕ್ಕೆ ಕೇಳಿದ್ದರು. ಅದು ಆಗಲಿಲ್ಲ, ರಕ್ಕಿ ಚಿತ್ರದಲ್ಲಿ ತಮಾಷೆಯ ಡಾನ್ ಪಾತ್ರ. ಸಿನಿಮಾ ನೋಡಿ ಹರಿಸಿ, ಹಲವಾರು ಸವಾಲುಗಳ ನಡುವೆ ಕನ್ನಡ ಚಿತ್ರರಂಗದ ಸಮುದ್ರದಲ್ಲಿ ಈಜುತ್ತುದೆ. ಐದು ಭಾಷೆಯ ಜೊತೆಗೆ ಗೆರೆ ಮುಟ್ಟಿಸುವ ಸುವ ಕೆಲಸ ಮಾಡಬೇಕಾಗಿದೆ ಎಂದರು

ಸಂಗೀತ ನಿರ್ದೇಶಕ ಲೋಕಿ ತವಸ್ಯ ಹಾಡು ಒಂದಕ್ಕಿಂತ ಒಂದು ಚೆನ್ನಾಗಿ ಬಂದಿದೆ ಎಂದರು. ಹರ್ಷ್ ಅರ್ಜುನ್ , ಬಾಲರಾಜವಾಡಿ, ಹರಿಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin