Golden Queen Amulya" returns to colorful life with "Pikaboo"

ಬಣ್ಣದ ಬದುಕಿಗೆ “ಪೀಕಬೂ” ಮೂಲಕ ಮರಳಿ ಬಂದ “ಗೋಲ್ಡನ್ ಕ್ವೀನ್ ಅಮೂಲ್ಯ” - CineNewsKannada.com

ಬಣ್ಣದ ಬದುಕಿಗೆ “ಪೀಕಬೂ” ಮೂಲಕ ಮರಳಿ ಬಂದ “ಗೋಲ್ಡನ್ ಕ್ವೀನ್ ಅಮೂಲ್ಯ”

ಕನ್ನಡ ಚಿತ್ರರಂಗದಲ್ಲಿ “ಚೆಲುವಿನ ಚಿತ್ತಾರ” ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮುದ್ದುಮುಖದ ಹುಡುಗಿ ಅಮೂಲ್ಯ ಆ ನಂತರ ಅನೇಕ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಮದುವೆಯಾದ ನಂತರ ಚಿತರಂಗದಿಂದ ದೂರವಾಗಿದ್ದ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತೊಮ್ಮೆ ಬಣ್ಣದ ಬದುಕಿಗೆ ಬಲಗಾಲಿಟ್ಟಿದ್ದಾರೆ

ಬರೋಬ್ಬರಿ 8 ವರ್ಷದ ಬಳಿಕ ಕನ್ನಡ ಚಿತ್ರರಂಗದಲ್ಲಿ ಮಿಂಚಲು ನಟಿ ಅಮೂಲ್ಯ ಮುಂದಾಗಿದ್ದಾರೆ, ನಟ ಗೋಲ್ಡನ್ ಸ್ಟಾರ್ ಗಣೇಶ್ – ಅಮೂಲ್ಯ ಜೋಡಿಯ ಯಶಸ್ವಿ ಚಿತ್ರ “ಶ್ರಾವಣಿ ಸುಬ್ರಮಣ್ಯ” ಚಿತ್ರ ನಿರ್ದೇಶನ ಮಾಡಿದ್ದ ಮಂಜು ಸ್ವರಾಜ್, ಈ ಬಾರಿಯೂ ನಟಿ ಅಮೂಲ್ಯ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ಧಾರೆ.

ನಟಿ ಅಮೂಲ್ಯ ಚಿತ್ರರಂಗಕ್ಕೆ ಮರು ಪ್ರವೇಶ ಮಾಡುತ್ತಿರುವುದು “ಪೀಕಬೂ” ಎನ್ನುವ ಸಿನಿಮ ಮೂಲಕ, ಈ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ನಟಿ ಅಮೂಲ್ಯ ಅವರಿಗೆ ಹುಟ್ಟುಹಬ್ಬದ ಶುಭಕೋರುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಸ್ವಾಗತ ನೀಡಲಾಗಿದೆ

ಕನ್ನಡ ಸಿನಿಮಾರಂಗದ ಗೋಲ್ಡನ್‍ಕ್ವೀನ್ ಅಂತಾನೆ ಹೆಸರು ಪಡೆದುಕೊಂಡ ನಟಿ ಅಮೂಲ್ಯ ಚಿತ್ರರಂಗದಲ್ಲಿ ಬ್ಯುಸಿ ಆಗಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಮತ್ತೆ ಸಿನಿಮಾ ಯಾವಾಗ ಮಾಡ್ತಾರೆ ಅನ್ನೋ ಪ್ರಶ್ನೆ ಆಗಾಗ ಕೇಳಿ ಬರ್ತಾನೇ ಇತ್ತು ..ಒಳ್ಳೆ ಸ್ಕ್ರಿಪ್ಟ್‍ಗಾಗಿ ಕಾದಿದ್ದ ಅಮೂಲ್ಯ ಸದ್ಯ ಒಂದೊಳ್ಳೆ ಸಬ್ಜೆಕ್ಟ್‍ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದ್ದಾರೆ..

ಎಂಟು ವರ್ಷದ ನಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳು ಸಿದ್ದವಾಗಿರೋ ಅಮೂಲ್ಯ ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಅವರ ಹೊಸ ಕಥೆಗೆ ಸಹಿ ಹಾಕಿದ್ದಾರೆ. ಅಮೂಲ್ಯ ಅವರ ಹುಟ್ಟುಹಬ್ಬದಂದೇ ಸಿನಿಮಾ ಅನೌನ್ಸ್ ಆಗಿದ್ದು ಸಣ್ಣದಾದ ಟೀಸರ್ ಮೂಲಕ ಅಮೂಲ್ಯ ಅವರ ರೀ ಎಂಟ್ರಿಗೆ ಸಿನಿಮಾತಂಡ ಸ್ವಾಗತ ಕೊಟ್ಟಿದೆ

ಟೀಸರ್ ನೋಡ್ತಿದ್ರೆ ಅಮೂಲ್ಯ ಕೂಡ ತಮ್ಮ ಕಮ್ ಬ್ಯಾP ಗಾಗಿ ಸಖತ್ತಾಗಿ ರೆಡಿಯಾಗಿದ್ದಾರೆ ಅನ್ನೋದು ಖಚಿತವಾಗಿದೆ. ಈ ಟೀಸರ್ ಡ್ಯಾನ್ಸ್ ಮೂಮೆಂಟ್ ಅನ್ನು ವಿ ನಾಗೇಂದ್ರ ಕೊರಿಯೋಗ್ರಾಫ್ ಮಾಡಿದ್ದು ಫನ್ನಿ ಎನ್ನಿಸೋ ಮ್ಯೂಸಿಕ್ ಗೆ ಅಮೂಲ್ಯ ಸಿನಿಮಾ ಕ್ಯಾರೆಕ್ಟರ್ ಸ್ಟೈಲ್ ನಲ್ಲಿ ಸಿಂಗಲ್ ಟೇಕ್ ನಲ್ಲಿಯೇ ಸ್ಟೆಪ್ಸ್ ಹಾಕಿದ್ದಾರೆ..

ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿರೋ ಈ ಸಿನಿಮಾಗೆ “”ಪೀಕಬೂ” ಎಂಡು ಹೆಸರಿಡಲಾಗಿದೆ.. ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದವಾಗಿದೆ.. ಒಂದೊಳ್ಳೆ ಮೆಸೆಜ್ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಈ ಸಿನಿಮಾದಲ್ಲಿ ಇರಲಿದೆ..ಸದ್ಯ ಸಿನಿಮಾಗೆ ಹೀರೋಯಿನ್ ಎಂಟ್ರಿಗಾಗಿ ಟೀಸರ್ ರಿಲೀಸ್ ಮಾಡಿರೋ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ

ಸಿನಿಮಾದಲ್ಲಿ ನಾಯಕಿಯಾಗಿ ಅಮೂಲ್ಯ ಅಭಿನಯ ಮಾಡ್ತಿದ್ದು ನಾಯಕ ಯಾರು ಅನ್ನೋದನ್ನ ಇನ್ನು ಸಿನಿಮಾ ಟೀಂ ರಿವಿಲ್ ಮಾಡಿಲ್ಲ ಮಂಜು ಸ್ವರಾಜ್ ಆಕ್ಷನ್ ಕಟ್ ಚಿತ್ರಕ್ಕೆ ಇರಲಿದ್ದು, ಚಿತ್ರಕ್ಕೆ ಸುರೇಶ್ ಬಾಬು ಸಿನಿಮಾಟೋಗ್ರಾಫರ್ . ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಕೆಂಚಾಂಬಾ ಫಿಲಂಸ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಗೋಲ್ಡನ್ ಕ್ವೀನ್ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಕಾತುರ ಹೆಚ್ಚಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin