Gopilola Film Review : The human face of ``Gopilola'' is unveiled along with Sayavaya Krishi

Gopilola Film Review: ಸಾಯವಯ ಕೃಷಿ ಜೊತೆಗೆ “ಗೋಪಿಲೋಲ”ನ ಮಾನವೀಯ ಮುಖ ಅನಾವರಣ - CineNewsKannada.com

Gopilola Film Review: ಸಾಯವಯ ಕೃಷಿ ಜೊತೆಗೆ “ಗೋಪಿಲೋಲ”ನ ಮಾನವೀಯ ಮುಖ ಅನಾವರಣ

ಚಿತ್ರ: ಗೋಪಿಲೋಲ
ನಿರ್ದೇಶನ: ಆರ್. ರವೀಂದ್ರ
ತಾರಗಣ: ಮಂಜುನಾಥ್ ಅರಸು, ನಿಮಿಷ.ಕೆ.ಚಂದ್ರ, ಎಸ್.ನಾರಾಯಣ್, ಪದ್ಮಾವಾಸಂತಿ,ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್,ಡಿಂಗ್ರಿ ನಾಗರಾಜ್, ಹನುಮಂತೇಗೌಡ, ಕೆಂಪೇಗೌಡ, ರಾಧಾ ರಾಮಚಂದ್ರ ಮತ್ತಿತರರು
ರೇಟಿಂಗ್ : * 3/5

ಕಾಲೇಜು, ಆಟ ಪಾಠ, ಮೋಜು ಮಸ್ತಿಯ ಜೊತೆ ಜೊತೆಗೆ ನೈಸರ್ಗಿಕ ಕೃಷಿ ಕುರಿತು ಬೆಳಕು ಚೆಲ್ಲುತ್ತಲೇ ಮಾನವೀಯ ಮೌಲ್ಯಗಳನ್ನು ಪ್ರಸ್ತುತ ಪಡಿಸಿರುವ ಚಿತ್ರ “ ಗೋಪಿಲೋಲ”.

ರಾಸಾಯನಿಕ ರಸಗೊಬ್ಬರ ಬಳಸದೆ ಸಾವಯವ ಕೃಷಿ ಮಹತ್ವವನ್ನು ಚಿತ್ರದ ಮೂಲಕ ಸಂದೇಶ ನೀಡುವ ಪ್ರಯತ್ನವನ್ನು ನಿರ್ದೇಶಕ ಆರ್. ರವೀಂದ್ರ ಮಾಡಿದ್ದಾರೆ. ಈ ಮೂಲಕ ಕನ್ನಡದ ಮತ್ತೊಂದು ಸದಭಿರುಚಿಯ ನೆಲೆಗಟ್ಟಿನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡಲಾಗಿದೆ.

ಬದುಕಿನ ವೈರುದ್ಯಗಳನ್ನು ಚಿತ್ರದ ಮೂಲಕ ನಿರ್ದೇಶಕರು ತೆರೆದಿಟ್ಟಿದ್ದಾರೆ. ಅದರಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಹೊಂದುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ರಾಸಾಯನಿಕ ಬಳಸದೆ ಕೃಷಿ ಮಾಡುವ ಮಾದೇಗೌಡ (ಎಸ್.ನಾರಾಯಣ್) ಮಾದರಿ ರೈತ, ಮಣ್ಣಿನ ಮಗ,ಇಂತಹ ಅಪ್ಪನಿಗೆ ಗೋಪಿ (ಮಂಜುನಾಥ್ ಅರಸು) ಉಂಡಾಡಿ ಗುಂಡ, ಸೋಂಬೇರಿ, ಕಾಲೇಜಿನನಲ್ಲಿ ಮೋಜು ಮಸ್ತಿ, ಚೆಲ್ಲಾಟಗಳಲ್ಲಿಯೇ ಬಹುಪಾಲು ಸಮಯ ವ್ಯರ್ಥ ಮಾಡಿದವ. ಈ ಕಾರಣಕ್ಕೆ ಅಪ್ಪ-ಮಗನಿಗೆ ಎಣ್ಣೆ ಸಿಗೇಕಾಯಿ ಇದ್ದಂತೆ ಆಗಾಗ ಮಗನಿಗೆ ಮಂಗಳಾರತಿ ಆಗುತ್ತದೆ. ಆದರೆ ತಾಯಿಗೆ ಮಾತ್ರ ಏನೇ ಮಾಡಿದರೂ ಅದು ಅಚ್ಚುಮೆಚ್ಚು.

ಗೋಪಿ ಸ್ತ್ರೀಲೋಲ, ಉಡಾಳನಾದರೂ ಬಡವರು, ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಅನುಕಂಪ,ಮಮಕಾರ, ಕಷ್ಟಕ್ಕೆ ಮರುಗುವ ಮಾನವೀಯ ಕಳಕಳಿ ಉಳ್ಳವ. ಇದೇ ಕಾರಣಕ್ಕೆ ಕಾಲೇಜಿನ ಸಹಪಾಠಿ ಲೀಲಾ (ನಿಮಿಷ ಕೆ,ಚಂದ್ರ) ಮಾರು ಹೋಗುತ್ತಾಳೆ. ಗೋಪಿ ಸರಿಯಲ್ಲ ಎಂದು ಸಹಪಾಠಿಗಳು ಹೇಳಿದರೂ ಕೇಳದ ಆಕೆ ಆತನನ್ನು ಆತನ ಮೇಲೆ ಪ್ರೀತಿ ಚಿಗುರೊಡೆಯುತ್ತದೆ. ಮೊದಲೆ ಹೇಳಿ ಕೇಳಿ ಗೋಪಿ, ಸ್ರೀಲೋಲ, ಅನಿರೀಕ್ಷಿತ ಘಟನೆಯಲ್ಲಿ ಆಗಬಾರದ್ದು ಆಗೇ ಹೋಗುತ್ತದೆ. ಮದುವೆಯಾಗುವಂತೆ ಗೋಪಿಯ ಹಿಂದೆ ಲೀಲಾ ಬೀಳ್ತಾಳೆ, ಆತನ ಮನೆಗೂ ಬರ್ತಾಳೆ, ಆತ , ಆಕೆಯನ್ನು ಮದುವೆ ಆಗ್ತಾನಾ ಅಥವಾ ಇಲ್ಲವೇ ಮುಂದೇನು ಎನ್ನುವುದ ಚಿತ್ರದ ಕಥನ ಕುತೂಹಲ.

ನಿರ್ದೇಶಕ ಆರ್. ರವೀಂದ್ರ, ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಮನಮುಟ್ಟುವ ರೀತಿಯಲ್ಲಿ ತೆರೆಯ ಮೇಲೆ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಸಾವಯವ ಕೃಷಿ, ಮಾನವೀಯ ಮೌಲ್ಯಗಳನ್ನು ಚಿತ್ರದ ಮೂಲಕ ಸಾರುವ ಪ್ರಯತ್ನ ಮಾಡಿದ್ದಾರೆ.

ನಾಯಕ ಮಂಜುನಾಥ್ ಅರಸು, ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಒಳ್ಳೆಯ ಕಥೆಗಳು ಸಿಕ್ಕರೆ ತಾವೊಬ್ಬ ಉತ್ತಮ ಕಲಾವಿದ ಆಗಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ನಟಿ ನಿಮಿಷ ಕೂಡ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.

ಹಿರಿಯ ಕಲಾವಿದರಾದ ಎಸ್.ನಾರಾಯಣ್, ಪದ್ಮಾವಾಸಂತಿ,ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್,ಡಿಂಗ್ರಿ ನಾಗರಾಜ್, ಹನುಮಂತೇಗೌಡ, ಕೆಂಪೇಗೌಡ, ರಾಧಾ ರಾಮಚಂದ್ರ ಮತ್ತಿತರು ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ
ಕೇಶವಚಂದ್ರ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಮಿದುನ್ ಅಸೋಕನ್ ಸಂಗೀತ, ಸೂರ್ಯಕಾಂತ್ ಎಚ್. ಚಿತ್ರಕ್ಕೆ ಪೂರಕವಾಗಿದೆ.

ಇತ್ತೀಚೆಗೆ ಒಂದೇ ಮಾದರಿಯ ಸಿನಿಮಾಗಳು ಬರುತ್ತರುವ ಕಾಲಘಟ್ಟದಲ್ಲಿ ವಿಭಿನ್ನ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin