“ ಸಸ್ಪೆನ್ಸ್ ಥ್ರಿಲ್ಲರ್” ಚಿತ್ರ “ವೃತ್ತ” ಟೀಸರ್ ಬಿಡುಗಡೆ: ನಟ ನೀನಾಸಂ ಸತೀಶ್ ಬೆಂಬಲ

ಪ್ರತಿದಿನ ಹೊಸ ಸಿನಿಮಾ ಸೆಟ್ಟೇರುತ್ತಿವೆ. ಸಿನಿಪ್ರೇಮಿಗಳ ಗಮನ ಸೆಳೆದಿರುವ “ವೃತ್ತ” ಸರ್ಕಲ್‍ನಲ್ಲಿ ನಡೆಯುವ ಕಥೆ ಇರಬೇಕು ಅನ್ನುವುದು ಮೊದಲಿಗೆ ಅನ್ನಿಸಿದರೂ ಕಾನ್ಸೆಪ್ಟ್ ಬೇರೆಯದೇ ರೀತಿಯಾಗಿದೆ. ನಟ ನಿನಾಸಂ ಸತೀಶ್ ಸಾಥ್ ಸಿಕ್ಕಿದೆ.

ನಟ ನೀನಾಸಂ ಸತೀಶ್ ಚಿತ್ರದ ಟ್ರೇಲರ್ ನೋಡಿ ತಮ್ಮದೇ ಬ್ಯಾನರ್ ಅಡಿಯಲ್ಲಿ ಪ್ರಸೆಂಟ್ ಮಾಡೋದಕ್ಕೆ ಸತೀಶ್ ನಿರ್ಧಾರ ಮಾಡಿ ಟೀಸರ್ ಲಾಂಚ್‍ಗೆ ಬಂದು ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.ವೃತ್ತ ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ ಲಿಖಿಕ್ ಕುಮಾರ್ ಎಸ್ ಕನ್ನಡ ಸಿನಿಮಾರಂಗಕ್ಕೆ ನಿರ್ದೇಶಕನಾಗಿ ಕಾಲಿಡುತ್ತಿದ್ದಾರೆ.

ಲಕ್ಷ್ಯ ಆಟ್ರ್ಸ್ ಬ್ಯಾನರ್ ಅಡಿಯಲ್ಲಿ ಟಿ.ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ.ನಾಯಕನ ಒಬ್ಬನ ಸುತ್ತಲೇ ಕಥೆ ಕೇಂದ್ರೀಕೃತವಾಗಿರುತ್ತಂತೆ. ಸಿನಿಮಾಗೆ ಯೋಗೀಶ್ ಗೌಡ ಚಿತ್ರಕಥೆ ಬರೆದಿದ್ದಾರೆ ಸುರೇಶ್ ಆರ್ಮುಗಂ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಗೌತಮ್ ಕೃಷ್ಣ ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್ ಎಸ್ ಸಂಗೀತ ಚಿತ್ರಕ್ಕಿದೆ.ಬಹುತೇಕ ಹೊಸಬರೇ ಕೂಡಿ ಮಾಡಿರೋ ಚಿತ್ರ ಇದಾಗಿದೆ.
ಚಿತ್ರದ ತಾರಾಗಣದಲ್ಲಿ ನಾಯಕನಾಗಿ ಮಾಹಿರ್ ಮೊಹಿದ್ದೀನ್, ಚೈತ್ರಾ ಜೆ ಆಚಾರ್ , ಹರಿಣಿ ಸುಂದರರಾಜನ್ ಅಭಿನಯ ಮಾಡಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ಳುತ್ತಿರುವಮಾಹಿರ್ ಸಾಕಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ .ಟೀಸರ್ ನಲ್ಲಿ ಮಾಹಿರ್ ಅಭಿನಯ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಮಾಹಿರ್ ಅದ್ಭುತ ಕಲಾವಿದನಾಗಿ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಎಲ್ಲಾ ಭರವಸೆಗಳು ಕಾಣಿಸುತ್ತಿದೆ…

ನಾಯಕ ಮಾಹೀರ್ ಮಾತನಾಡಿ ‘ನಟನೆ ನನ್ನ ಬಹು ದಿನದ ಕನಸು. ನಾಟಕಗಳ ಮೂಲಕ ನನಸು ಮಾಡಿಕೊಳ್ಳುತ್ತಿದ್ದೆ. ಈಗ ವೃತ್ತ ಸಿನಿಮಾ ಮೂಲಕ ದೊಡ್ಡ ಪರದೆಗೆ ಬರುತ್ತಿರೋದು ಮತ್ತಷ್ಟು ಖುಷಿಕೊಟ್ಟಿದೆ’ ಎಂದರು..
ನಿರ್ದೇಶಕ ಲಿಖಿತ್ ಮಾತನಾಡಿ, ‘ಹೊಸ ಸಿನಿಮಾಗೆ ನಟ ನೀನಾಸಂ ಸತೀಶ್ ಬೆಂಬಲ ಸಿಕ್ಕಿರುವುದು ಖುಷಿಕೊಟ್ಟಿದೆ. ಕಿರು ಚಿತ್ರಗಳನ್ನ ಮಾಡುತ್ತಾ ಇದ್ದ ತಂಡ ಇವತ್ತು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿಗಿದ್ದೇವೆ’ ಎಂದರು.

ನಟ ನೀನಾಸಂ ಸತೀಶ್ ಮಾತನಾಡಿ ಸಿನಿಮಾ ನೋಡಿ ಖುಷಿಯಾಗಿರೋ ಸತೀಶ್ ಹೊಸಬರ ಸಿನಿಮಾ ಎನ್ನುವ ಕಾರಣಕ್ಕೆ ಬಂದಿಲ್ಲ ಸಿನಿಮಾ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಬೆಂಬಲಿಸುತ್ತಿದ್ದೇನೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಟ್ರೇಲರ್ ಲಾಂಚ್ ಮಾಡಿ ಇದೇ ವರ್ಷಾಂತ್ಯದಲ್ಲಿ ತೆರೆಗೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
