Gowri Shankar-Bindu Shivaram win best actor-actress critics award

ಅತ್ಯುತ್ತಮ ನಟ-ನಟಿ ವಿಮರ್ಶಕ ಪ್ರಶಸ್ತಿ ಪಡೆದ ಗೌರಿಶಂಕರ್- ಬಿಂದು ಶಿವರಾಮ್ - CineNewsKannada.com

ಅತ್ಯುತ್ತಮ ನಟ-ನಟಿ ವಿಮರ್ಶಕ ಪ್ರಶಸ್ತಿ ಪಡೆದ ಗೌರಿಶಂಕರ್- ಬಿಂದು ಶಿವರಾಮ್

ಕೆರೆಬೇಟೆ ಚಿತ್ರದಲ್ಲಿನ ನಟನೆಗಾಗಿ 70ನೇ ಫಿಲ್ಮ್ ಫೇರ್ ಪ್ರಶಸ್ತಿಯ ಅತ್ಯುನ್ನತ ನಟ-ನಟಿ ವಿಮರ್ಶಕ ಪ್ರಶಸ್ತಿಯನ್ನು ಚಿತ್ರದ ಚಿತ್ರದ ನಾಯಕ ಗೌರಿಶಂಕರ್ ಅಭಿನಯಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾಯಕಿ ಬಿಂದು ಶಿವರಾಮ್ ಕೂಡ ಅತ್ಯುತ್ತಮ ಚೊಚ್ಚಲ ಚಿತ್ರದ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈಗಾಗಲೇ ಈ ಕೆರೆಬೇಟೆ ಚಿತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಚಿತ್ರೋತ್ಸವದಲ್ಲಿ ಭಾಗಿಯಾಗಿ ಬಹಳಷ್ಟು ಪ್ರಶಂಸೆ ಪಡೆದುಕೊಂಡಿದೆ. ಈ ಬಾರಿ ದೊರಕಿರುವ ಈ ಫಿಲಂ ಫೇರ್ ಪ್ರಶಸ್ತಿ ಜನಮನ ಸಿನಿಮಾಸ್ ನ ನಿರ್ಮಾಪಕ ಗೌರಿಶಂಕರಿಗೆ ಮತ್ತಷ್ಟು ಉತ್ತಮ ಹಾಗೂ ಸದಭಿರುಚಿಯ ಚಿತ್ರವನ್ನು ನಿರ್ಮಾಣ ಮಾಡಲು ಉತ್ಸಾಹ ಬಂದಂತಾಗಿದೆ.

ಈ ಕೆರೆಬೇಟೆ ಸಿನಿಮಾ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮಲೆನಾಡಿನ ಮೀನು ಬೇಟೆ ಸಂಸ್ಕೃತಿ ಪರಿಚಯಿಸಿತ್ತು. ರಾಜ್‍ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ , ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು.

ಈ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಗಳು ಹಾಗೂ ತಾಂತ್ರಿಕ ವರ್ಗದವರ ಕೆಲಸ ಬಹಳ ಅಷ್ಟು ಕಟ್ಟಾಗಿ ಮೂಡಿಬಂದಿತ್ತು. ಒಂದಷ್ಟು ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮ ಫಲ ಎನ್ನುವುದರ ಸಾಕ್ಷಿಯಾಗಿ ಸಿಕ್ಕಿರುವ ಈ ಫಿಲಂ ಫೇರ್ ಪ್ರಶಸ್ತಿಯೇ ಸಾಕ್ಷಿಯಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin