Teaser of Raya Darshan album song released
ರಾಯರ ದರ್ಶನ ಆಲ್ಬಂ ಹಾಡಿನ ಟೀಸರ್ ಬಿಡುಗಡೆ
ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ ಮಾಡಲಾಗಿದೆ. ರಾಯರ ವರ್ಧಂತಿಯಂತೆ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ

ಮಂತ್ರಾಲಯದ ಯತಿಗಳಾದ ಶ್ರೀ ಶ್ರೀ ಶ್ರೀ ಸುಬದೇಂದ್ರ ತೀರ್ಥರು ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು. ಈ ನವರಸ ನಾಯಕ ಜಗ್ಗೇಶ್, ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ , ಲಕ್ಷ್ಮೀ ಗಣೇಶ ಹಾಗೂ ಸುಗುಣಾ ರಘು, ರಘು ಭಟ್ ಉಪಸ್ಥಿತರಿದ್ದರು.
ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಗುರುಗಳು, ಒಂದು ಚಿತ್ರವನ್ನ ನೋಡಿ ಚನ್ನಾಗಿಲ್ಲ ಎನ್ನುವುದು ಸುಲಭ. ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಅದೇ ರೀತಿ ಶ್ರಮವಹಿಸಿ ಆಲ್ಬಂ ಸಾಂಗ್ ಮಾಡುತ್ತಿದ್ದಾರೆ. ಒಳ್ಳೆಯದಾಗಲಿ ಆದಷ್ಟು ಬೇಗ ಸಾಂಗ್ ರಿಲೀಸ್ ಆಗಲಿ ಎಂದು ಆಶಿರ್ವದಿಸಿದರು.
ರಘು ಭಟ್ ನಿರ್ದೇಶನ ಮಾಡುತ್ತಿದ್ದು ಸುಗಯಣ ರಘು ಭಟ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಿ.ಆರ್. ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದ್ದು ನಾಗಾರ್ಜುನ ಶರ್ಮ ಸಾಹಿತ್ಯವಿದೆ

