“ದೇವಿ ಮಹಾತ್ಮೆ” ಚಿತ್ರಕ್ಕೆ ಕಮಲಶಿಲೆಯಲ್ಲಿ ಮುಹೂರ್ತ

ಮರ್ಯಾದೆ ಪ್ರಶ್ನೆ ಸಿನಿಮಾ ನಂತರ ನಿರ್ದೇಶಖ ನಾಗರಾಜ್ ಸೋಮಯಾಜಿ ಹೊಸ ಪ್ರಯತ್ನ ದೇವಿ ಮಹಾತ್ಮೆ. ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.

ದೇವಿ ಮಹಾತ್ಮೆ ಚಿತ್ರದ ನಿರ್ಮಾಪಕ ಗಾಂಧಿರಾಜನ್, ಅನುವಂಶಿಕ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರರು, ನಿರ್ದೇಶಕ ನಾಗರಾಜ್ ಸೋಮಯಾಜಿ, ಚಿತ್ರದ ಛಾಯಾಗ್ರಾಹಕರಾದ ಎಸ್ ಕೆ ರಾವ್ ಭಾಗಿಯಾಗಿದ್ದರು.

ದೇವಿ ಮಹಾತ್ಮೆ ಚಿತ್ರಕ್ಕೆ ಒಂದೊಳ್ಳೆ ತಂಡ ರೆಡಿಯಾಗಿದೆ. ನಾಗರಾಜ ಸೋಮಯಾಜಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಸಾಥ್ ಕೊಟ್ಟಿದ್ದಾರೆ.

ಚಿತ್ರಕ್ಕೆ ಎಸ್.ಕೆ ರಾವ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಕಾಮಿಡಿ ಥ್ರಿಲ್ಲರ್ ಕಂಟೆಂಟ್ ಹೊಂದಿರುವ ದೇವಿ ಮಹಾತ್ಮೆ ಸಿನಿಮಾ ಚಿತ್ರೀಕರಣ ಆರಂಭವಾಗಿದೆ, ಕುಂದಾಪುರದ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದ್ದು, ಅತಿ ಹೆಚ್ಚು ತಾರಾಬಳಗ ಚಿತ್ರದಲ್ಲಿ ಕೆಲಸ ಮಾಡಲಿದೆ.

Related Posts

Shankarabharana Movie Review : ಖಾಸಗೀ ಬಸ್ ಮತ್ತು ಅದರ ಸುತ್ತ ಸಾಗುವ ಕುತೂಹಲಕಾರಿ ಕಥನ ‘ಶಂಕರಾಭರಣ’

ಚಿತ್ರ : ಶಂಕರಾಭರಣನಿರ್ದೇಶನ : ಸುಮಂತ್ ಭಟ್ಅವಧಿ : 152 ನಿಮಿಷತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ಕೃತಿ ಶೆಟ್ಟಿ, ತನ್ವಿ ರಾವ್, ಸಂಪತ್ ರಾಜ್, ಅನೀಲ್ ಕುಮಾರ್ ಚೌಹ್ಹಾಣ್, ಅರ್ಜುನ್ ಕಜೆ, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಮತ್ತಿತರರುರೇಟಿಂಗ್…

ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಆರಂಭ

ಸದಭಿರುಚಿಯ ಹಾಗೂ ಮನಮುಟ್ಟುವ ಚಿತ್ರಗಳ ನಿರ್ದೇಶಕರೆಂದೇ ಖ್ಯಾತರಾಗಿರುವ ಕಲಾಸಾಮ್ರಾಟ್ ಡಾ.ಎಸ್. ನಾರಾಯಣ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಲತಾ ಜಯಪ್ರಕಾಶ್ ಆರಂಭ ಫಲಕ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581