Great performance of "Bagheera" across the state: Actor Prabhas Appreciates
ರಾಜ್ಯಾದ್ಯಂತ “ಬಘೀರ” ನ ಭರ್ಜರಿ ಪ್ರದರ್ಶನ: ನಟ ಪ್ರಭಾಸ್ ಮೆಚ್ಚುಗೆ
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಡಾ.ಸೂರಿ ನಿರ್ದೇಶನದಲ್ಲಿ ಶ್ರೀಮುರಳಿ ನಾಯಕರಾಗಿ ನಟಿಸಿರುವ ಹಾಗೂ ಕೆ.ಜಿ.ಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಥೆ ಬರೆದಿರುವ “ಬಘೀರ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ದೀಪಾವಳಿ ಹಾಗೂ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ 180 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಜನರು ತೋರುತ್ತಿರುವ ಪ್ರೀತಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.
ಇತ್ತೀಚಿಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಭಾಸ್ “ಬಘೀರ” ಚಿತ್ರ ವೀಕ್ಷಿಸಿದ್ದಾರೆ. ಶ್ರೀಮುರಳಿ ಅಭಿನಯ, ಪ್ರಶಾಂತ್ ನೀಲ್ ಅವರ ಕಥೆ, ಡಾ.ಸೂರಿ ನಿರ್ದೇಶನ, ಹೊಂಬಾಳೆ ಫಿಲಂಸ್ ನ ಅದ್ದೂರಿ ನಿರ್ಮಾಣ ಹಾಗೂ ಇಡೀ ಚಿತ್ರತಂಡದ ಕಾರ್ಯವೈಖರಿ ಉತ್ತಮವಾಗಿದೆ ಎಂದು ಮೆಚ್ಚುಗೆ ಮಾತುಗಳಾಡಿದ್ದಾರೆ.