ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ
ಅಭಿನಯದ ತಾಯ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ನಟಿ ಹರ್ಷಿಕಾ ಪೂಣಚ್ಚ ಒಂದರ ಹಿಂದೆ ಒಂದರಂತೆ ಹೊಸ ವರ್ಷದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿಯೂ ಚ್ಯೂಸಿಯಾಗಿದ್ದಾರೆ. ಇದುವರೆಗೆ ಮಾಡಿದ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಕಾಸಿನಸರ, ತಾಯ್ತ, ಇನ್ನೂ ಹೆಸರಿಡ ವಿನುಬಳಂಜ ನಿರ್ದೇಶನದ ಚಿತ್ರಗಳೂ ಸೇರಿವೆ.
ಬಹುಮುಖ ಪ್ರತಿಭೆಯ ನಟಿ ಹರ್ಷಿಕಾ ಪೂಣಚ್ಚ ಅಭಿನಯದ “ತಾಯ್ತ” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕೊಡಗಿನ ಕುವರಿ ಹರ್ಷಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಲಯ ಕೋಕಿಲಾ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ತಾಯ್ತ. ಶೇಕ್ ಶಾಹೀದ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರದಲ್ಲಿ ನಟಿ ಹರ್ಷಿಕಾ ತಮ್ಮ ಲುಕ್ ನಿಂದ ಗಮನ ಸೆಳೆಯುತ್ತಿದ್ದಾರೆ.
ಚಿತ್ರಕ್ಕೆ ಲಕ್ಷ್ಮಿ ಕೃಷ್ಣ ಕಾಸ್ಟೂಮ್ ಡಿಸೈನ್ ಮಾಡಿದ್ದು ಹರ್ಷಿಕಾ ಮಿಂಚುತ್ತಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಜೊತೆಗೆ ಯಾವುದೇ ದಿರಿಸಿ ಧರಿಸಿದರೂ ಅದಕ್ಕೊಂದು ಕಳೆ ತಂದುಕೊಡಲಿದ್ದಾರೆ ಹರ್ಷಿಕಾ ಪೂಣಚ್ಚ.ತಾಯ್ತ ಚಿತ್ರದ ಫಸ್ಟ್ ಲುಕ್ ಭರವಸೆ ಮೂಡಿಸಿದ್ದು ಹೊಸ ವರ್ಷದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಇದರ ಜೊತೆಗೆ ಎನ್ ಆರ್ ನಂಜುಂಡೇಗೌಡ ನಿರ್ದೇಶನದ ಕಾಸಿನ ಸರ ಚಿತ್ರದಲ್ಲಿ ಹಷೀಕಾ ನಟಿಸುತ್ತಿದ್ದು ಪಕ್ಕಾ ಹಳ್ಳಿ ಹುಡುಗಿಯಾಗಿ ಡಿ ಗ್ಲಾಮರ್ ಲುಕ್‍ನಲ್ಲಿ ಮಿಂಚಿದ್ದಾರೆ.
ವಿಜಯ್ ರಾಘವೇಂದ್ರ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಸೇರಿದಂತೆ ಬಹು ತಾರಾಗಣ ಚಿತ್ರದಲ್ಲಿದೆ.ಕಾಸಿನಸರ ಹರ್ಷಿಕಾ ವೃತ್ತಿ ಬದುಕಿನಲ್ಲಿ ಮಹತ್ವದ ಚಿತ್ರವಾಗಲಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.
ಈ ನಡುವೆ ಕಾಂತಾರ ಚಿತ್ರದ ಸ್ವರಾಜ್ ಶೆಟ್ಟಿ ಅಭಿನಯದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಚ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ವಿನುಬಳಂಜ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಈ ಚಿತ್ರದಲ್ಲಿ ಟ್ರಾವಲ್ ಏಜೆಂಟ್ ಸುರೇಖಾ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅತ್ಯುತ್ತಮ ಪಾತ್ರ ಸಿಕ್ಕಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ ನಟಿ ಹರ್ಷಿಕಾ ಪೂಣಚ್ಚ.