“ಹೇ ಪ್ರಭು” ಚಿತ್ರ ಸದ್ದಿಲ್ಲದೆ ಮೊದಲ ಹಂತದ ಚಿತ್ರೀಕರಣ ಪೂರ್ಣ

ವಿನೂತನ ಶೇರ್ಷಿಕೆ ಮತ್ತು ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ 13 ನೇ ಹೊಸ ಚಿತ್ರ “ಹೇ ಪ್ರಭು “, ಸದ್ದಿಲ್ಲದೆ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ನಾಯಕಿ ಸಂಹಿತಾ ವಿನ್ಯಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

ಚಿತ್ರದ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದ ಅಧವಾ “ಪ್ರಭು” ಅಂದರೇ ನಮ್ಮ ನಾಡ ಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ . ಸದ್ಯಕ್ಕೆ ಚಿತ್ರ ತಂಡ ಶೀರ್ಷಿಕೆ ವಿನ್ಯಾಸ ಅನಾವರಣ ಗೊಳಿಸಿದೆ, ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು ಸ್ವಲ್ಪ ಕುತೂಹಲ ಹುಟ್ಟುಹಾಕಿದೆ “ಹೇ ಪ್ರಭು”,
ಇನ್ನು 5 ದಿನಗಳ ಚಿತ್ರೀಕರಣ ಮುಗಿದರೆ ಚಿತ್ರಕರಣ ಮುಕ್ತಾಯವಾಗುತ್ತದೆ ಎಂದು ತಂಡ ಹೇಳಿಕೊಂಡಿದೆ ,ಜೊತೆಜೊತೆಯಾಗಿ ಸಂಕಲನ ಕಾರ್ಯಕೂಡ ಪ್ರಗತಿಯಲ್ಲಿದ್ದು ನಿರ್ದೇಶಕರು ಮೊದಲ ಪ್ರತಿಯನ್ನು ಶೀಘ್ರದಲ್ಲಿ ತರುವುದಕ್ಕೆ ಮುಂದಾಗಿದ್ದಾರೆ .

ಪ್ರಮೋದ್ ಭಾರತೀಯ ಛಾಯಾಗ್ರಹಣ , ಡ್ಯಾನ್ನಿ ಆಂಡರ್ಸನ್ , ಸಂಗೀತ , ಚಂದನ್ ಠಿ , ಶಮೀಕ್ ಭಾರದ್ವಾಜ್ ಮತ್ತು ಲಾರೆನ್ಸ್ ಪ್ರೀತಮ್ ತಾಂತ್ರಿಕ ಕೆಲಸದಲ್ಲಿ ಕಾರ್ಯವಹಿಸುತ್ತಿದ್ದಾರೆ . ಮಹೇಶ್ ಮತ್ತು ಪ್ರವೀಣ್ ರವರ ಸಂಭಾಷಣೆ , ಅರಸು ಅಂತಾರೆ ಮತ್ತ್ತು ಮನೋಜ್ ರಾವ್ ರವರ ಸಾಹಿತ್ಯ ಚಿತ್ರಕ್ಕಿದೆ .ಕಥೆ ಚಿತ್ರಕಥೆ ವೆಂಕಟ್ ಭಾರದ್ವಾಜ್ ಅವರದು

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಸನ್ ಜೈಪಾಲ್ ರವರ ಪುತ್ರ ಡ್ಯಾನ್ನಿ ಆಂಡರ್ಸನ್ ರವರನ್ನು ಚಿತ್ರ ರಂಗಕ್ಕೆ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ವೆಂಕಟ್ ಭಾರಾದ್ವಾಜ್ ಪರಿಚಯಿಸುತ್ತಿದ್ದಾರೆ .
ತಾರಾಬಳಗದಲ್ಲಿ ಜಯ್ , ಸೂರ್ಯ ರಾಜ್ , ಲಕ್ಷ್ಮಣ್ ಶಿವಶಂಕರ್ (ಕೆಂಪಿರ್ವೇ ಖ್ಯಾತಿ), ಸಂಹಿತ ವಿನ್ಯಾಸ , ಗಜಾನನ ಹೆಗಡೆ , ನಿರಂಜನ್ ಪ್ರಸಾದ್ , ಹರಿ ಧನಂಜಯ , ಪ್ರಮೋದ್ ರಾಜ್ , ದಿಲೀಪ್ ದೇವ್ , ನೇತ್ರ ಗೋಪಾಲ್, ಸುಚಿತ್ರ ದಿನೇಶ್, ಸಾಧನ ಭಟ್ , ಮನೋಹರ್ , ಶಶಿರ್ ರಾಜು , ಹಾಗು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ .

ಶೀಘ್ರದಲ್ಲಿ ತಂಡ “ಹೇ ಪ್ರಭು ” ಮೊದಲ ನೋಟ ಬಿಡುಗಡೆ ಮಾಡಲಿದೆ .ಸದ್ಯಕ್ಕೆ ವೆಂಕಟ್ ಭಾರದ್ವಾಜ್ ಅವರ ಹೈನ ಮತ್ತು ಆಹತ ಎರಡು ಚಿತ್ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಯಾಗಲಿದೆ