I only make movies that raise my collarbone, I don't compromise on quality; Actor Anish Tejeshwar

ಕಾಲರ್ ಎತ್ತುವ ಸಿನಿಮಾನೇ ಮಾಡೋದು , ಗುಣಮಟ್ಟದಲ್ಲಿ ರಾಜೀ ಮಾತೇ ಇಲ್ಲ ; ನಟ ಅನೀಶ್ ತೇಜೇಶ್ವರ್ - CineNewsKannada.com

ಕಾಲರ್ ಎತ್ತುವ ಸಿನಿಮಾನೇ ಮಾಡೋದು , ಗುಣಮಟ್ಟದಲ್ಲಿ ರಾಜೀ ಮಾತೇ ಇಲ್ಲ ; ನಟ ಅನೀಶ್ ತೇಜೇಶ್ವರ್

“ಜೀವನದಲ್ಲಿ ಎಲ್ಲರೂ ಸೋತಿರುವ ಮಂದಿಯೇ ಹೆಚ್ಚು. ಸೋತಿರುವವರು ಸಿನಿಮಾ ಮಾಡಿದ್ರೆ ಹೇಗೆ ಇರುತ್ತೆ ಎನ್ನುವುದನ್ನು ತೋರಿಸುವ ಸಿನಿಮಾ “ಲವ್ ಒಟಿಪಿ”. ಸೋತ ಕಡೆಯೇ ಗೆಲ್ಲುವ ಛಲ ಇದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರವನ್ನು ನವಂಬರ್ 14 ರಂದು ತೆರೆಗೆ ತರಲಾಗುತ್ತಿದೆ..” ಎಂದರು ನಟ,ನಿರ್ದೇಶಕ ಅನೀಶ್ ತೇಜೇಶ್ವರ್

ನನ್ನ ಗರ್ಲ್ ಫ್ರೆಂಡ್ ಗಿಂತ ಸಿನಿಮಾ ಬಗ್ಗೆ ಹೆಚ್ಚು ಪೊಸೆಸೀವ್. ಹೀಗಾಗಿ “ಯಾವ ಸಿನಿಮಾ ಮಾಡಿದ್ರೂ ಕಾಲರ್ ಎತ್ತಿಕೊಳ್ಳುವ ಸಿನಿಮಾನೇ ಮಾಡೋದು ಅದರ ಫಲಿತಾಂಶ ಏನೇ ಆಗಿರಲಿ.‌ ಹೆಸರು ಇರುವ ಕಲಾವಿದರನ್ನು ಇಟ್ಟುಕೊಂಡು ಸಿನಿಮಾ‌ ಮಾಡು ಅಂತಾರೆ ಆದರೆ ನಾನು ನಂಬೋದು ಪ್ರತಿಭೆಯನ್ನು. ಪ್ರತಿಭೆಗಳಿಗೆ ಅವಕಾಶ ನೀಡಿದ್ದೇನೆ. ಗುಣಮಟ್ಟದಲ್ಲಿ ರಾಜೀ ಮಾತೇ ಇಲ್ಲ ಎಂದರು

” ಲವ್ ಒಟಿಪಿ” ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಅನೀಶ್ ತೇಜೇಶ್ವರ್ ಪಾದಾರ್ಪಣೆ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿರುವ ಲವ್ ಒಟಿಪಿ ಚಿತ್ರ ನವಂಬರ್ 14 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾಹಿತಿ ಹಂಚಿಕೊಂಡರು.

ಸ್ನೇಹಿತ ವಿಜಯ್ ರೆಡ್ಡಿ ಅವರ ಸಹಕಾರದಿಂದ‌ ಉತ್ತಮ ಚಿತ್ರ ಮಾಡಿದ್ದೇನೆ. ಚಿತ್ರದ ನೋಡಿದ ಮಂದಿ ಗುಣಮಟ್ಟದ ವಿಷಯದಲ್ಲಿ ಕಥೆ, ನಿರೂಪಣೆ ವಿಷಯದಲ್ಲಿ ಎಲ್ಲಿಯೂ ರಾಜೀ ಮಾಡಿಕೊಂಡಿಲ್ಲ. ತೆಲುಗಿನ ಹಿರಿಯ ಕಲಾವಿದ ರಾಜೀವ್ ಕನಕಾಲ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದಾರೆ. ಜೊತೆಗೆ ಹಿರಿಯ ಕಲಾವಿದರಾದ ರವಿ ಭಟ್ ,ಪ್ರಮೋದಿನಿ, ತುಳಸಿ ,ಚೇತನ್, ಸ್ವರೂಪಿಣಿ, ಜಾನ್ವಿಕಾ ನಟಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿಯಿಸಿದ್ದಾರೆ. ಚಿತ್ರ ನೋಡಿದ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎಂದರು

ನಟಿ ಜಾನ್ವಿಕಾ ಮಾತನಾಡಿ, ಕನ್ನಡದಲ್ಲಿ ಮೂರನೇ ಚಿತ್ರ. ಕನ್ನಡ ಮತ್ತು ತೆಲುಗಿನಲ್ಲಿ ನಟಿಸಿದ್ದೇನೆ. ಪ್ರಮೋದಿನಿ, ತುಳಿಸಿ, ಸೇರಿದಂತೆ ಅನಕ ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ ,ಫಿಸಿಯೋ ಥೆರಪಿಸ್ಟ್ ಪಾತ್ರ ಮಾಡಿದ್ದೇನೆ ಪಾತ್ರ ಸವಾಲಿನಿಂದ ಕೂಡಿತ್ತು ಎಂದರು.

ನಿರ್ಮಾಪಕ ವಿಜಯ್ ರೆಡ್ಡಿ ಮಾತನಾಡಿ ಅನೀಶ್ ಜೊತೆ ಸಿನಿಮಾ‌ ಮಾಡುವದ ಹಿಂದೆ ದೊಡ್ಡ ಕಥೆ ಇದೆ. 16 ವರ್ಷದಲ್ಲಿ ನಾವಿಬ್ಬರೂ ಸ್ನೇಹಿತರು, ಚಾಮುಂಡಿ ದೇವಿ ದರ್ಶನಕ್ಕೆ ಹೋದಾಗ ಕಥೆ ಕೇಳಿ ಇಷ್ಡವಾಗಿ ಸಿನಿಮಾ ಮಾಡಿದ್ದೇವೆ. ಭಾವಪ್ರೀತ ಎಂದರೆ ಭ್ರಮಾಂಡದಿಂದ ಪ್ರೀತಿಸಲ್ಪಟ್ಟವರು ಎಂದರ್ಥ ಹಾಗಾಗಿ ಸಿನಿಮಾ‌ ಸಂಸ್ಥೆ ಹೆಸರಲ್ಲಿ ಚಿತ್ರ ಮಾಡಿದ್ದೇವೆ. ಕಥೆ ಸೃಷ್ಟಿ ಆದಾಗ ಸಿನಿಮಾಗೆ ಬೇಕಾದ ಪಾತ್ರವನ್ನು ಆಯ್ಕೆ ಮಾಡಿಕೊಂಡಿದೆ ಎಂದರು

ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊಸ ಹೊಸ ಚಿತ್ರಗಳನ್ನು ಮಾಡುವ ಉದ್ದೇಶವಿದೆ ಎಂದರು.

ತೆಲುಗು ನಟ ರಾಜೀವ ಕನಕಾಲ ಮಾತನಾಡಿ , ಸೀರಿಯಲ್ ನಟಿಸುತ್ತಿದ್ದ ನನ್ನನ್ನು ನಿರ್ದೇಶಕ ರಾಜಮೌಳಿ ಅವರು ಸಿನಿಮಾಕ್ಕೆ ಕರೆ ತಂದರು. ಈಗ ಅನೀಶ್ ಕನ್ನಡಕ್ಕೆ ಕರೆತಂದಿದ್ದಾರೆ ನನ್ನ ಪಾಲಿಗೆ ಅನೀಶ್ ಅವರು ರಾಜಮೌಳಿ ಇದ್ದಂತೆ ಎಂದು‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದ ರವಿ ಭಟ್ ಮಾತನಾಡಿ, ಕಥೆ ಹೇಳುವಾಗ, ಚಿತ್ರೀಕರಣ ಮಾಡುವಾಗ ಸಿನಿಮಾ ಬಗ್ಗೆ ಇರುವ ಫ್ಯಾಶನ್ ಮತ್ತು ಕಮಿಟ್ ಮೆಂಟ್ ಇರುವ ವ್ತಕ್ತಿ. ಪೇಮೆಂಟ್ ವಿಷಯದಲ್ಲಿ ಎಲ್ಲೂ ಕೊರತೆ ಎದುರಾಗದಂತೆ ನೋಡಿಕೊಂಡಿದ್ದಾರೆ. ಕಲಾವಿದರಿಂದ ಕೆಲಸ ತೆಗೆಸುವಲ್ಲಿ ಅನೀಶ್ ನಿಷ್ಣಾತ. ಚಿತ್ರೀಕರಣದ ಸಮಯದಲ್ಲಿ ಎಂಜಾಯ್ ಮಾಡಿಕೊಂಡು ನಟನೆ ಮಾಡಿದ್ದೇವೆ.ಸಿನಿಮಾ ಬಿಡುಗಡೆಯಾದಾಗ ಅನೀಶ್ ನಟನೆಗೆ ಅಥೆಂಟಿಕೇಷನ್ ಆಗಲಿ ಎಂದರು.

ಮತ್ತೊಬ್ಬ ಕಲಾವಿದ ನಾಟ್ಯರಂಗ ಮಾತನಾಡಿ ನಿರ್ದೇಶನದ ಜೊತೆಗೆ ನಾಯಕನಾಗಿ‌ ನಟಿಸಿರುವ ಅನೀಶ್ ಅವರು ಟಾರ್ಚರ್ ಅನುಭವಿಸಿ ಉತ್ತಮ ಚಿತ್ರ ನೀಡಿದ್ದಾರೆ. ನನ್ನ ಪಾತ್ರ ನಗು ಮತ್ತು ಅಳುವಿನ ಸಂಗಮವಿದೆ. ಚಿತ್ರ‌ಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು

ಗೀತರಚನೆಕಾರ ನಾಗಾರ್ಜುನ ಶರ್ಮಾ ಸೇರಿದಂತೆ ಹಲವರು ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಡಿತು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin