Muhurat for the film “Diglupura” about witchcraft

ಮಾಟ ಮಂತ್ರದ ಸುತ್ತ “ ದಿಗ್ಲುಪುರ” ಚಿತ್ರಕ್ಕೆ ಮಹೂರ್ತ - CineNewsKannada.com

ಮಾಟ ಮಂತ್ರದ ಸುತ್ತ “ ದಿಗ್ಲುಪುರ” ಚಿತ್ರಕ್ಕೆ ಮಹೂರ್ತ

ಮಾಟ ಮಂತ್ರದ ಕುರಿತ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತೀರಾ ವಿರಳ.ದಶಕಗಳ ಹಿಂದೆ ಬಂದ ಏಟು ಎದಿರೇಟು, ಇತ್ತೀಚಿನ ಕಟಕ ಅದ್ಭುತವಾದ ಮಾಟ ಮಂತ್ರದ ಕಾನ್ಸೆಪ್ಟ್ ಒಳಗೊಂಡ ಚಿತ್ರಗಳಾಗಿದ್ದವು. ಬಹಳ ದಿನಗಳ ನಂತರ ಅಂಥದೇ ಎಳೆ ಇರುವ ಚಿತ್ರ ಸೆಟ್ಟೇರಿದೆ. ಅದರ ಹೆಸರು ದಿಗ್ಲುಪುರ.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮುಹೂರ್ತ ದೃಶ್ಯಕ್ಕೆ ಕ್ಲಾಪ್ ಮಾಡಿದರು. ದ ಡೆಡ್ ವಾಕ್ ಇನ್ ಸ್ಕೇರಿ ವಿಲೇಜ್ ಎಂಬ ಅಡಿಬರಹ ಇರುವ ಚಿತ್ರಕ್ಕೆ ಮನೋಜ್ಞ ಮನ್ವಂತರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಮೇಶ್ ಪಂಡಿತ್, ಲಯ ಕೋಕಿಲ, ಫರ್ದಿನ್ ಅಹ್ಮದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ನಿರ್ದೇಶಕ ಮನೋಜ್ಞ ಮನ್ವಂತರ ಮಾತನಾಡಿ ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಿದರೆ ಗೆಲುವು ಖಂಡಿತ. ದಿಗ್ಲುಪುರ ಒಂದು ಸ್ಕೇರಿ ವಿಲೇಜ್. ಕಲ್ಟ್ ಹಾರರ್ ಸಬ್ಜೆಕ್ಟ್. ಮೊದಲ ಬಾರಿಗೆ ಜೆಮ್ ಸ್ಕೇರ್ ಕಾನ್ಸೆಪ್ಟ್ ಬಳಸುತ್ತಿದ್ದೇವೆ. 80ರ ದಶಕದಲ್ಲಿ ದಿಗ್ಲುಪುರ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಾನು ಹೆಚ್ಚು, ನೀನು ಹೆಚ್ಚು ಅಂತ ಬದುಕುತ್ತಿರುವ ಬ್ಲಾಕ್ ಮ್ಯಾಜಿಷಿಯನ್ಸ್ ತಮ್ಮ ಮಂತ್ರಶಕ್ತಿಯಿಂದ ತಮ್ಮನ್ನು ವಿರೋಧಿಸುವ ಜನರನ್ನು ಕೊಲ್ಲೋ ಪ್ರಯತ್ನ ಮಾಡುತ್ತಾರೆ. ಅಲ್ಲಿಗೆ ಹೋದ ಮಂದಿ ನಿಗೂಢವಾಗಿ ಸಾವನ್ನಪ್ಪುತ್ತಾರೆ.

ಐದು ಜನ ನಾಯಕರು ಧೈರ್ಯಮಾಡಿ ಅಲ್ಲಿಗೆ ಹೋಗಿ ಅದರ ಹಿಂದಿರೋ ರಹಸ್ಯ ಬಯಲಿಗೆಳೆದು ಜಯಿಸಿ ಹೊರಬರುತ್ತಾರೆ. ಅದರೆ ಅಲ್ಲಿಂದ ಬಂದ ಮೇಲೆ ಅವರೂ ಸಹ ಸಾವನ್ನಪ್ಪುತ್ತಾರೆ. ಇದಕ್ಕೆಲ್ಲ ಕಾರಣವೇನು ಎನ್ನುವುದೇ ದಿಗ್ಲುಪುರ ಚಿತ್ರದ ಎಳೆ.4 ಹಂತಗಳಲ್ಲಿ 60. ದಿನ ರಾಮನಗರ, ಚನ್ನಪಟ್ಟಣ, ತೈಲೂರು, ಮುತ್ತತ್ತಿ, ತಲಕಾಡು ಸುತ್ತಮುತ್ತ ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದು ಮಾಹಿತಿ ಹಂಚಿಕೊಂಡರು

ಹಿರಿಯನಟ ರಮೇಶ್ ಪಂಡಿತ್, ಲಯ ಕೋಕಿಲ ಆ ಊರಿನ ಇಬ್ಬರು ಪ್ರಬಲ ಮಂತ್ರವಾದಿಗಳಾಗಿ ಕಾಣಿಸಿಕೊಳ್ಳುತ್ತಿದ್ದು ತಮ್ಮ ಪಾತ್ರದ ಬಗ್ಗೆ ವಿವರ ನೀಡಿದರು ಸುಹಾಸ್, ಪ್ರಮೋದ್, ಲತಾ ನಾಗರಾಜ್, ಮಹೇಶ್, ಯಶವಂತ್, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪ್ರಸಾದ್ ನಾಯಕ್ ಅವರ ಛಾಯಾಗ್ರಹಣ, ವೆಂಕಿ ಯುವಿಡಿ ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin