ಡಬ್ಬಿಂಗ್ ನಲ್ಲಿ `ಎಡಗೈ ಅಪಘಾತಕ್ಕೆ ಕಾರಣ’ : ಕಾಣೆಯಾದ ನಟ ದಿಗಂತ್
ದೂದ್ ಪೇಡ ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಡಬ್ಬಿಂಗ್ ಶುರುವಾಗಿದೆ.
ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ, ಧನು ಹರ್ಷ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ. ಆದರೆ ನಾಯಕ ದಿಗಂತ್ ಫೈಲ್ ಮಿಸ್ ಆಗಿದೆ. ಹಾಗಿದ್ರೆ ದೂದ್ ಪೇಡೆ ಎಲ್ಲಿ? ಎಂಬ ವಿಡಿಯೋ ತುಣುಕನ್ನು ಚಿತ್ರತಂಡ ರಿವೀಲ್ ಮಾಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಿದ್ದಾರೆ.
ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಎಡಗೈ ಬಳಸುವವರ ಸಮಸ್ಯೆಗಳ ಬಗ್ಗೆಯೇ ತೋರಿಸಲಾಗಿದೆ. ಅವರು ದಿನನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಕುರಿತಾಗಿಯೇ ಫೋಕಸ್ ಮಾಡಲಾಗಿದೆಯಂತೆ. ಸದ್ಯ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಡಬ್ಬಿಂಗ್ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ.