'Jaasti Preeti' Trailer Released: A film that grabbed attention

‘ಜಾಸ್ತಿ ಪ್ರೀತಿ’ ಚಿತ್ರದ ಟ್ರೈಲರ್ ಬಿಡುಗಡೆ : ಗಮನ ಸೆಳೆದ ಚಿತ್ರ - CineNewsKannada.com

‘ಜಾಸ್ತಿ ಪ್ರೀತಿ’ ಚಿತ್ರದ ಟ್ರೈಲರ್ ಬಿಡುಗಡೆ : ಗಮನ ಸೆಳೆದ ಚಿತ್ರ

ಪೂರ್ಣ ಶ್ರೀ ಎಂಟರ್‍ಪ್ರೈಸಸ್ ಮುಖಾಂತರ ಸಿದ್ದಗೊಂಡಿರುವ ‘ಜಾಸ್ತಿ ಪ್ರೀತಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ‘ಮಿಡಿದ ಹೃದಯಗಳ ಮೌನರಾಗ’ ಎಂಬ ಅಡಿಬರಹವಿದೆ.

ಉದ್ಯಮಿ ಶಿವರಾಂ ಕೊಡತಿ ಬಂಡವಾಳ ಹೂಡಿರುವುದು ಹೊಸ ಅನುಭವ. ಎಸ್‍ಆರ್‍ಕೆ ಕೃಷ್ಣಪ್ಪ ಸರ್ಜಾಪುರ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಅರುಣ್ ಮಾನವ್

ಈ ವೇಳೆ ಅರುಣ್ ಮಾನವ್ ಮಾತನಾಡಿ, ಪ್ರೀತಿಯ ಅವ್ಯಕ್ತಭಾವ ಜಾಸ್ತಿಪ್ರೀತಿಯಾಗಿದೆ. ಸಿನಿಮಾ ಹುಟ್ಟಲು ಫೇಸ್‍ಬುಕ್ ಪೇಜ್ ಕಾರಣವಾಗಿದೆ. ಹೀಗೆ ಒಮ್ಮೆ ಎಫ್‍ಬಿ ನೋಡುವಾಗ ಒಂದು ಹುಡುಗಿಯ ಫೆÇೀಟೋ ನೋಡಿ ಕರುಳು ಚುರ್ ಅನಿಸಿತು. ಅದರ ಏಳೆಯನ್ನು ತೆಗೆದುಕೊಂಡು ಕಾಲ್ಪನಿಕ ಚಿತ್ರಕಥೆಯನ್ನು ಬರೆಯಲಾಯಿತು. ಎಲ್ಲಿಯೂ ನೋಡದೆ ಇರತಕ್ಕಂತ ಪ್ರೀತಿಯನ್ನು ಇದರಲ್ಲಿ ನೋಡಬಹುದು. ಒಳ್ಳೆ ಮರವಾಗಬಲ್ಲ ಜಾಸ್ತಿಪ್ರೀತಿ ಆಗಿದೆ. ಯಾವುದೇ ವ್ಯಕ್ತಿಗೆ ಸಂಬಂದಪಟ್ಟಿರುವುದಿಲ್ಲ. ಬಂದಿರುವ ಕಥೆಗಳು ಇಲ್ಲ ಎನ್ನುವ ಸ್ಪಷ್ಟನೆ ನಿಡಿದರು.

ಯಾವ ದೃಶ್ಯ ಹಿಂದಿನ ಚಿತ್ರದಲ್ಲಿ ನೋಡಿದಂತೆ ಭಾಸವಾಗುವುದಿಲ್ಲ. ವಿಭಿನ್ನ ನಿರೂಪಣೆ ಹೊಂದಿದ್ದು, ಪ್ರಾರಂಭದಿಂದ ಕೊನೆತನಕ ಊಹಿಸಲು ಕಷ್ಟವಾಗುತ್ತದೆ. ಪ್ರೀತಿ ತೋರ್ಪಡಿಸಲಿಕ್ಕೆ ಆಗುವುದಿಲ್ಲವೋ, ಆಗ ಸೋತು ಹೋಗುತ್ತಾನೆ. ಅದನ್ನು ಇಲ್ಲಿ ಕಾಣಬಹುದು. ಬೆಂಗಳೂರು, ಬಂಗಾರಪೇಟೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ಬೇಗನೆ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ. ಮಾಧ್ಯಮದ ಸಹಕಾರ ಅಗತ್ಯ ಎಂದರು

ಸಾಹಿತಿ, ಕವಿ, ಚಿಂತಕ, ವಿಮರ್ಶಕ ಎಲ್.ಎನ್.ಮುಕುಂದರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನ್ನಡ ಸಿನಿಮಾ ಬೇರೆ ಬೇರೆ ರೀತಿಯಲ್ಲಿ ಬೆಳೆದಿದೆ. ಅನೇಕ ಚಿತ್ರಗಳು ಜಗತ್ತಿನ ಸಿನಿಮಾಗಳ ಎದುರು ಸವಾಲು ಒಡ್ಡುವಂತ ಕೆಲಸ ಮಾಡುತ್ತಿದೆ. ಅದೇ ಸಾಲಿನಲ್ಲಿ ಜಾಸ್ತಿ ಪ್ರೀತಿ ಸೇರುತ್ತದೆ. ಸಿನಿಮಾ ಎಂಬುದು ಉದ್ಯಮವಾಗಿದೆ. ನೂರಾರು ಜನರ ಪ್ರತಿಭೆ ಮತ್ತು ಪರಿಶ್ರಮ ಒಳಗೊಂಡಿದೆ. ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಅಲ್ಲಿನ ಪ್ರಸಿದ್ದ ಕವಿಗಳು ಸಾಹಿತ್ಯ ರಚಿಸುತ್ತಾರೆ. ನಮ್ಮಲ್ಲಿ ಕಡಿಮೆ ಇದ್ದಾರೆ. ಕುಮಾರವ್ಯಾಸ ಹೆಸರಿನಲ್ಲಿ ಚಿತ್ರಪ್ರಶಸ್ತಿ ನೀಡಬೇಕು. ಅರುಣ್‍ಗೆ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದರು.

ನಾಯಕ ಧರ್ಮಕೀರ್ತಿರಾಜ್ ಮಾತನಾಡಿ, ಇಂಟೆನ್ಸ್ ಲವ್‍ಸ್ಟೋರಿ ಏಳೆ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾಗೆ ಏನು ಕಮ್ಮಿ ಮಾಡಿಲ್ಲ. ಎಲ್ಲರೂ ಫ್ಯಾಶನ್‍ನಿಂದ ಮಾಡಿದ್ದಾರೆ. ಇಂದು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಯಾರು ಸಿನಿಮಾ ನೋಡಲು ಬರುತ್ತಿಲ್ಲ. ಆದರೂ ನಿರ್ಮಾಪಕರು ಧೈರ್ಯ ಮಾಡಿ, ನಂಬಿಕೆಯಿಂದ ಹಣ ಹೂಡಿದ್ದಾರೆ. ಒಳ್ಳೆ ಅಂಶಗಳು ಇರುವುದರಿಂದ ಚಿತ್ರ ನೋಡಲು ಬರುತ್ತಾರೆಂಬ ವಿಶ್ವಾಸವಿದೆ. ನನ್ನ ಅಭಿನಯದ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ನನಗೂ ಒಂದೆ ಕಡೆ ಬ್ರೇಕ್ ಸಿಗಬೇಕಂಬ ಹಂಬಲವಿದೆ. ಇದರಿಂದ ಸಿಗಬಹುದು. ಅದಕ್ಕಾಗಿ ಕಾಯ್ತಾ ಇದ್ದೇನೆ ಎಂದರು

ಕೃಷಿ ತಪಂಡ ನಾಯಕಿ. ಮತ್ತೊಂದು ಜೋಡಿಗಳಾಗಿ ಮುರಳಿರಾಮ್-ಶೋಭರಾಣಿ. ಇವರೊಂದಿಗೆ ಬ್ಯಾಂಕ್‍ಜನಾರ್ಧನ್, ಸುಚೇಂದ್ರಪ್ರಸಾದ್, ಮೈಸೂರು ರಮಾನಂದ್, ಎಂ.ಎನ್.ಲಕ್ಷೀದೇವಿ, ಮಧುಮಂದಗೆರೆ ಮುಂತಾದವರು ನಟಿಸಿದ್ದಾರೆ. ವಿನೀತ್ ರಾಜ್ ಮೆನನ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸತೀಶ್.ಸಿ.ಎಸ್-ಬಿ.ಆರ್.ಮಲ್ಲಿಕಾರ್ಜುನ್, ಸಂಕಲನ ವೆಂಕಟೇಶ್.ಯುಡಿವಿ, ನೃತ್ಯ ಗೋವಿಂದ್.ವಿ.ಮಾಲೂರು, ಸಾಹಸ ಕುಂಗು ಫೂ ಚಂದ್ರು ಅವರದಾಗಿದೆ. ಜೇಂಕಾರ್ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin