Jai Shree Ram song is touching Heart

ಮನಸೆಳೆಯುತ್ತಿದೆ ಜೈ ಶ್ರೀ ರಾಮ್ ಹಾಡು - CineNewsKannada.com

ಮನಸೆಳೆಯುತ್ತಿದೆ ಜೈ ಶ್ರೀ ರಾಮ್ ಹಾಡು

’ಆದಿಪುರುಷ್’ ಚಿತ್ರದ ಟ್ರೇಲರ್ ಬಿಡುಗಡೆಗೊಂಡು 100 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗೊಂಡು ಯೂ ಟ್ಯೂಬ್‌ದಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. ಇದರ ಮುಂದುವರೆದ ಭಾಗವಾಗಿ ಮೊನ್ನೆ ಮನೋಜ್‌ಮುಂತಶೀರ್ ಸಾಹಿತ್ಯಕ್ಕೆ, ಜೋಡಿ ಸಂಗೀತ ಸಂಯೋಜಕರುಗಳಾದ ಅಜಯ್-ಅತುಲ್ ಮತ್ತು 30ಕ್ಕೂ ಹೆಚ್ಚು ಗಾಯಕರುಗಳು ’ಜೈ ಶ್ರೀ ರಾಮ್’ ಗೀತೆಯನ್ನು ವೇದಿಕೆಯಲ್ಲಿ ಒಟ್ಟಿಗೆ ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ.

ಅಲ್ಲದೆ ಕನ್ನಡದಲ್ಲಿ ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ’ನೆನೆದೆವು ನಿನ್ನನ್ನು ನಾವು ಬೇಡಿದೆವು ಸಹಾಯ, ಸಂಕಟದ ಸಮಯ ಈಗ’ ಎಂಬ ಸಾಲಿನ ವಿಡಿಯೋ ಗೀತೆಯು ಹೊರಬಂದಿದ್ದು ವೈರಲ್ ಆಗುತ್ತಿದೆ. ಇದರಿಂದ ಶ್ರೀರಾಮನ ಶಕ್ತಿ, ಆಂಜನೇಯನ ಭಕ್ತಿ ಎರಡನ್ನು ನೋಡಲು ಜನರು ಕಾತುರರಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ, ’ಟಿ’ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿಸನೂನ್, ರಾವಣನಾಗಿ ಸೈಫ್‌ಆಲಿಖಾನ್ ಮತ್ತು ಸನ್ನಿಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತನಾಗೆ, ವತ್ಸಲ್‌ಸೇತ್, ಸೋನಾಲ್‌ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವ ಮೋತಿವಾಲೆಸಹಾಯ್-ಆಶಿಷ್‌ಮಾತ್ರ. ಅಂದಹಾಗೆ ಸಿನಿಮಾವು ಜೂನ್ 16ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3ಡಿ ಮಾದರಿಯಲ್ಲಿ ತೆರೆಗೆ ಬರುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin