July "Appu Cup Season 2" : Wishes Ashwini Puneeth Rajkumar

ಜುಲೈ “ಅಪ್ಪು ಕಪ್ ಸೀಸನ್ 2” : ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್ - CineNewsKannada.com

ಜುಲೈ “ಅಪ್ಪು ಕಪ್ ಸೀಸನ್ 2” : ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ” ಅಪ್ಪು ಕಪ್ ಸೀಸನ್ 2″ ಜುಲೈ ಅಂತ್ಯದಲ್ಲಿ ನಡೆಯಲಿದೆ. ಪಂದ್ಯಾವಳಿಗೆ ಪಿಆರ್‍ಕೆ ಸಂಸ್ಥೆಯ ಒಡತಿ ಹಾಗು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ

ಆಯೋಜಕ ಚೇತನ್ ಸೂರ್ಯ ಪ್ರತಿಕ್ರಿಯೆ ನೀಡಿ ಕಳೆದ ಹನ್ನೆರಡು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಕ್ರಿಯನಾಗಿದ್ದೇನೆ. ನಾಲ್ಕು ಸಿನಿಮಾಗಳಲ್ಲಿ ನಾಯಕನಾಗೂ ನಟಿಸಿದ್ದೇನೆ. ಸಾಕಷ್ಟು ಇವೆಂಟ್ ಗಳನ್ನು ಆಯೋಜಿಸಿರುವ ಅನುಭವವಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನಲ್ಲಿ £ಸಂಸ್ಥೆಯ ಮೂಲಕ ಕಳೆದವರ್ಷ “ಅಪ್ಪು ಕಪ್”(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಆಯೋಜಿಸಲಾಗಿತ್ತು. ಬಹಳ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಥ್ ನೀಡಿರುವುದು ಮತ್ತಷ್ಟು ಶಕ್ತಿ ಬಂದಿದೆ ಎಂದಿದ್ಧಾರೆ

“ಅಪ್ಪು ಕಪ್” ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳಿದ್ದು ಒಂದೊಂದು ತಂಡದಲ್ಲಿ ಹದಿಮೂರು ಆಟಗಾರರಿರುತ್ತಾರೆ. ಹಿರಿತೆರೆ, ಕಿರುತೆರೆ ಹಾಗೂ ವಿವಿಧ ಕ್ಷೇತ್ರಗಳ ತಾರೆಯರು ಈ ತಂಡಗಳಲ್ಲಿರುತ್ತಾರೆ. ಪುನೀತ್ ಅವರಿಗೆ ಸಂಬಂಧಿಸಿದ ಹಾಗೆ ಹತ್ತು ತಂಡಗಳ ಹೆಸರುಗಳಿದೆ. ಹತ್ತು ತಂಡಗಳಿಗೂ ಮಾಲೀಕರಿರುತ್ತಾರೆ. ಈ ಬಾರಿ ಜುಲೈ 13 ರಂದು ಅದ್ದೂರಿ ಸಮಾರಂಭದ ಮೂಲಕ ಟೂರ್ನಿಗೆ ಚಾಲನೆ ನೀಡಲಾಗುವುದು. ಟೂರ್ನಿಯ ಪಂದ್ಯಗಳು ಜುಲೈ ಕೊನೆಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ

ಯಾರೆಲ್ಲಾ ಮಾಲೀಕರು, ನಾಯಕರು

• ಅರಸು ಹಂಟರ್ಸ್ ಮಾಲೀಕ- ಆನಂದ್, ನಾಯಕ -ಹರೀಶ್ ನಾಗರಾಜ್,
• ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕ- ಪರಿತೋಷ್ ಮೂರ್ತಿ, ನಾಯಕ -ರವಿ ಚೇತನ್.
• ಪವರ್ ಪೈತಾನ್ಸ್ ಮಾಲೀಕ- ಐಶ್ವರ್ಯ , ನಾಯಕ – ಸದಾಶಿವ ಶೆಣೈ
• ದೊಡ್ಮನೆ ಡ್ರಾಗನ್ಸ್ ಮಾಲೀಕ- ಮಹೇಶ್ ಗೌಡ, ನಾಯಕ – ಪ್ರಮೋದ್ ಶೆಟ್ಟಿ.
• ಜಾಕಿ ರೈಡರ್ಸ್ ಮಾಲೀಕ- ಶ್ರೀಹರ್ಷ, ನಾಯಕ – ಮನು ರವಿಚಂದ್ರನ್
• ರಾಜಕುಮಾರ ಕಿಂಗ್ಸ್ ಮಾಲೀಕ- ವಿ.ರವಿಕುಮಾರ್ ಮತ್ತು ಶಂಶುದ್ದೀನ್, ನಾಯಕ ವಿಕ್ರಮ್- ರವಿಚಂದ್ರನ್
• ಗಂಧದಗುಡಿ ವಾರಿಯರ್ಸ್ ಮಾಲೀಕ- ಡಾ-ಚೇತನ ಆರ್ ಎಸ್, ನಾಯಕ -ಭುವನ್ ಗೌಡ,
• ವೀರ ಕನ್ನಡಿಗ ಬುಲ್ಸ್ ಮಾಲೀಕ- ಮೋನೀಶ್ ಸಿ, ನಾಯಕ – ದಿಲೀಪ್ ರಾಜ್.
• ಯುವರತ್ನ ಚಾಂಪಿಯನ್ಸ್ ಮಾಲೀಕ- ಬಿ.ಎಂ.ಶ್ರೀರಾಮ್ ಕೋಲಾರ್, ನಾಯಕ – ಪ್ರವೀಣ್ ತೇಜ್,
• ಮೌರ್ಯ ವೈಟ್ ಗೋಲ್ಡ್, ಮಾಲೀಕ- ಬಾಬು ಸಿ.ಜೆ, ನಾಯಕ -ನಿರಂಜನ್ ದೇಶಪಾಂಡೆ.

ಸತತವಾಗಿ ಮೂರು ವರ್ಷಗಳ ಕಾಲ ಗೆದ್ದ ತಂಡಕ್ಕೆ ಅಪ್ಪು ಅವರ ಭಾವಚಿತ್ರವುಳ್ಳ ಬೆಳ್ಳಿಯ ಐದು ಕೆಜಿ ತೂಕದ ಟ್ರೋಫಿ ನೀಡಲಾಗುವುದು. ಈ ರೋಲಿಂಗ್ ಟ್ರೋಫಿ ಪ್ರಯೋಜಕರಾಗಿರೂ ಆಗಿರುವ ಶ್ರೀಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯ ಶರವಣ ಅವರು ಈ ಬಾರಿ ಮೊದಲ ವಿಜೇತರಿಗೆ ನೂರು ಗ್ರಾಮ್ ಚಿನ್ನ, ಎರಡನೇ ವಿಜೇತರಿಗೆ ಐವತ್ತು ಗ್ರಾಮ್ ಚಿನ್ನ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಚಿನ್ನ ನೀಡುವುದಾಗಿ ತಿಳಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin