Jumbo Circus" Trailer Released: Curiosity Increases

“ಜಂಬೂ ಸರ್ಕಸ್” ಚಿತ್ರದ ಟ್ರೈಲರ್ ಬಿಡುಗಡೆ : ಕುತೂಹಲ ಹೆಚ್ಚಳ - CineNewsKannada.com

“ಜಂಬೂ ಸರ್ಕಸ್” ಚಿತ್ರದ ಟ್ರೈಲರ್ ಬಿಡುಗಡೆ : ಕುತೂಹಲ ಹೆಚ್ಚಳ

ಮುದ್ದಾದ ಪ್ರೇಮ ಕಥೆ ಹೊಂದಿರುವ. ” ಜಂಬೂ ಸರ್ಕಸ್ ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಎಲ್ಲಾ ಆಂದುಕೊಂಡಂತೆ ಆದರೆ ಈ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾದ್ಯತೆ ಇದೆ.

ಮನರಂಜನೆಯನ್ನು ಪ್ರದಾನವಾಗಿಟ್ಟುಕೊಂಡು ನಿರ್ದೇಶಕ ಎಂ.ಡಿ ಶ್ರೀಧರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಎಚ್. ಸಿ ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಸಹ ನಿರ್ಮಾಪಕರಾಗಿ ನಟಿ ಸುಪ್ರೀತಾ ಶೆಟ್ಟಿ ಕೈ ಜೋಡಿಸಿದ್ದಾರೆ.

ಸಹ ನಿರ್ಮಾಪಕಿ ಸುಪ್ರೀತಾ ಶೆಟ್ಟಿ, ನಟಿ ಅಂಜಲಿ ಅನೀಶ್, ಹಾಗು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನಾ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ಬಳಿಕ ಮಾತಿಗಿಳಿದ ನಿರ್ದೇಶಕ ಎಂ.ಡಿ ಶ್ರೀಧರ್, ಖರ್ಚು ಮಾಡಿ ಪ್ರಚಾರ ಮಾಡುವ ಶಕ್ತಿ ನಿರ್ಮಾಪರಿಗೆ ಇಲ್ಲ. ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇದೇ ತಿಂಗಳ ಮೂರನೇ ವಾರ ಅಥವಾ ಕೊನೆವಾರ ಚಿತ್ರ ಬಿಡುಗಡೆ ಮಾಡಲಾಗುವುದು. ಬಿಡುಗಡೆ ಆದ ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಡುಗಡೆಯಾಗಿರುವ ಎರಡೂ ಹಾಡುಗಳನ್ನು ಕವಿರಾಜ್ ಬರೆದಿದ್ದಾರೆ. ಚೆಲ್ಲಾಟ ಚಿತ್ರದಿಂದ ಇಲ್ಲಿಯ ತನಕ ಎಲ್ಲಾ ಚಿತ್ರಗಳಿಗೆ ಅವರು ಹಾಡು ಬರೆದಿದ್ದಾರೆ. ನಾಲ್ಕು ಹಾಡುಗಳಲ್ಲಿ ಎರಡು ಹಾಡು ಕವಿರಾಜ್ ಬರೆದಿದ್ದಾರೆ ಎಂದು ಹೇಳಿದರು.

ಕಾಮಿಡಿ ಕಲಾವಿದೆ ನಯನಾ ಸೆಟ್ ನಲ್ಲಿ ಇದ್ದರೆ ಲವಲವಿಕೆ ಇರುತ್ತದೆ. ಜೊತೆಗೆ ಮತ್ತೊಬ್ಬ ಕಲಾವಿದ ಜಗ್ಗಪ್ಪ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿದ್ದಾರೆ ಎಂದು ಭವಿಷ್ಯ ನುಡಿದರು.

ಕಾರ್ಯಕಾರಿ ನಿರ್ಮಾಪಕಿ ಸುಪ್ರೀತಾ ಶೆಟ್ಟಿ, ಮಾತನಾಡಿ ಸಿನಿಮಾ ಬಗ್ಗೆ ಪ್ರೀತಿ ಇಟ್ಟಿರುವ ವ್ಯಕ್ತಿ ನಿರ್ಮಾಪಕ ಸುರೇಶ್ . ಅವರ ಜೊತೆ ನಾವು ನಿಂತಿದ್ದೇವೆ. ಚಿತ್ರೀಕರಣ ಪೂರ್ಣಗೊಳಿಸುವ ವೇಳೆಗೆ ಅಬ್ಬಾ ಅನ್ನಿಸಿದುಂಟು, ಸೀರಿಯಲ್ ಗೆ ಕಥೆ ಮಾಡುವಾಗ ಹೊಳೆದ ಕತೆ ಇದು. ಎಲ್ಲವನ್ನು ಎದುರಿಸಿ ಚಿತ್ರ ಮಾಡಿದ್ದೇವೆ. ಪ್ಯಾಮಿಲಿ ಒರಿಯಂಟೆಂಡ್ ಸಿನಿಮಾ. ನಿರ್ಮಾಪಕ‌ ಒಳ್ಳೆ ಸಿನಿಮಾ‌ ನೀಡಿ ಗೆದ್ದರೆ ಇನ್ನಷ್ಟು ಚಿತ್ರ ಮಾಡಲು ಸಹಕಾರಿ ಆಗಲಿದೆ ಎಲ್ಲರೂ ಸಹಕಾರ ನೀಡಿ ಎಂದರು.

ನಟಿ ಅಂಜಲಿ ಅನೀಶ್ ಮಾತನಾಡಿ, ಸಿನಿಮಾ ಪ್ಯಾಷನ್ ನಿಂದ ಎಂಜಾಯ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಪಾತ್ರದ ಹೆಸರು ಅಂಕಿತ, ಬಜಾರಿ, ಬಬ್ಲಿ, ಜಾಸ್ತಿ ಜಗಳ‌ ಮಾಡ್ತಾಳೆ. ಅವರಮ್ಮ ಜಗಳ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಜಗಳ ಗಂಟಿ ಆಗಿದ್ದರೂ ಅಷ್ಟೇ ಒಳ್ಳೆಯ ಹುಡುಗಿ‌.ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಸಹಕಾರವಿರಲಿ ಎಂದರು

ಚಿತ್ರ ಸಾಹಿತಿ ಕವಿರಾಜ್ , ಕನ್ನಡ ಪ್ರೇಕ್ಷಕ ಸಂದೇಶ ನೀಡಿದ್ದಾರೆ. ಮನರಂಜನೆ ಇದ್ದರೆ ಸಿನಿಮಾ‌ ಗೆಲ್ಲುತ್ತೆ ಶ್ರೀಧರ್ ಸರ್ ಅವರಲ್ಲಿ ಬೇರೆಯದೇ ರೀತಿ ಕಾಮಿಡಿ ಸೆನ್ಸ್ ಇದೆ. ಮನರಂಜನೆ ಚಿತ್ರದಲ್ಲಿದೆ ಎಲ್ಲರಿಗೂ ಇಷ್ಟವಾಗಲಿದೆ. ಶ್ರೀಧರ್ ಸರ್ ಅವರು ಪ್ಯಾಮಿಲಿ ಪ್ರೆಂಡ್ಸ್, . ಜಾಲಿ ಡೇಸ್ ಚಿತ್ರ ಮಾಡಿದ ವೇಳೆ ನಾಲ್ಕು ಪಾತ್ರದಲ್ಲಿ ಒಂದು ಪಾತ್ರ ನಮ್ಮ ಊರಿನ ಹುಡುಗನಿಗೆ ನೀಡಬೇಕು ಎಂದು ಮನವಿ ಮಾಡಿದ್ದೆ. ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಒಂದು ವಾರ ಚಿತ್ರೀಕರಣಕ್ಕೆ ಹೋಗಿರಲಿಲ್ಲ‌ ಕೊನೆಗೆ ಕಾಲ್ ಮಾಡಿ ಪ್ರವೀಣ್ ತೇಜ್ ಗೆ ಅವಕಾಶ ನೀಡಿದ್ದರು. ಇದೀಗ ಪ್ರವೀಣ್ ಚಿತ್ರಕ್ಕೆ ಸೊಲೋ ನಾಯಕ. ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣವಿದೆ , ಎಂದರು.

ನಿರ್ಮಾಪಕರು ಕೂಡ ತೀರ್ಥಹಳ್ಳಿ ಕಡೆ ಅವರು, ಎಲ್ಲರೂ ಪ್ರೀತಿಯಿಂದ ಸಿನಿಮಾ‌ ಮಾಡಿದ್ದೇವೆ.. ಸಿನಿಮಾ ಹಿಟ್ ಆಗಬೇಕು ಎಲ್ಲರೂ ಪ್ರೀತಿಯಿಂದ ಸಿನಿಮಾ ಮಾಡಿದ್ದೇವೆ ಎಂದರು

ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ , ಕಂಟೆಂಟ್ ಬರುತ್ತಿರುವುದು ಟಾರ್ಗೆಟ್ ಆಡಿಯೆನ್ಸ್ ಸಿನಿಮಾ‌ ಮಾಡ್ತಾ ಇರೋದು .ಕೆಲವು ತಂಡಗಳಲ್ಲಿ ಇರಿಸು ಮುರುಸು ಇರಿತ್ತದೆ. ಆದರೆ ಈ ತಂಡದಲ್ಲಿ ಯಾವುದೇ ಆ ರೀತಿ ಇರಲಿಲ್ಲ‌. ಎಲ್ಲವೈ ಮುಕ್ತವಾಗಿ ಹಂಚಿಕೊಳ್ಳುತ್ರಿದ್ದೆವು ಎಂದರು

ಚಿತ್ರಕ್ಕೆ ಎ.ವಿ ಕೃಷ್ಣಕುಮಾರ್ ಛಾಯಾಗ್ರಹಣವಿದ್ದು. ಅವರು ಮಾತನಾಡಿ, ಸಿನಿಮಾ ಕಷ್ಟ ಇರಬಹುದು. ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಿದ್ದಾರೆ. ರಿಷಿ,ಖುಷಿ, ಮಿಲನಾ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಪಕ ಸುರೇಶ್ ಅವರ. ಜೊತೆ ಮಾಡಿದ್ದೇವೆ. ಸಹಕಾರ ಇರಲಿ ಎಂದರು

ಕಾಮಿಡಿ ಕಲಾವಿದೆ ನಯನಾ ಮಾತನಾಡಿ, ಸಿನಿಮಾದಲ್ಲಿ ಪಾತ್ರ ನಿರ್ದೇಶಕರು ಬರೆದಿಲ್ಲ. ಹೇಗಿದೆಯೊ ಹಾಗೆ ನಟಿಸು ಅಂದಿದ್ಸಾರೆ. ತುಸು ಡ್ರೆಸ್ ಕೋಡ್ ಬದಲಾಗಿದೆ. ನಾನು ಜಾಸ್ತಿ ಮಾತನಾಡುತ್ತೇನೆ. ಕಡಿಮೆ ಮಾತನಾಡು ಎಂದು ನಿರ್ದೇಶಕರು ,ನಿರ್ಮಾಪಕರು ಸಲಹೆ ನೀಡಿದ್ದರು. ಚಿತ್ರದಲ್ಲಿ ಬತ್ತಿ ಇಡೋದು ನಾನೇ . ಚಿತ್ರಕ್ಕೆ ಸಹಕಾರ ಪ್ರೋತ್ಸಾಹ ಇರಲಿ, ಕನ್ನಡ ಸಿನಿಮಾ ಒಳ್ಳೆಯ ಚಿತ್ರ ಬರಲ್ಲ ಎನ್ನುವ ಮಾತಿದೆ‌ ಪೈಸಾ ವಸೂಲು ಚಿತ್ರವಾ ಗಲಿದೆ ಎಂದರು.

ಮತ್ತೊಬ್ಬ ಕಾಮಿಡಿ ಜಗ್ಗಪ್ಪ ಮಾತನಾಡಿ, ಚಿತ್ರದಲ್ಲಿ ಸ್ನೇಹಿತ ಪಾತ್ರ. ಒಳ್ಳೆಯ ಪಾತ್ರ ಚಿತ್ರಕ್ಕೆ ಸಹಕಾರ ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin