ಶೂಟಿಂಗ್‍ಗೆ ಹೋಗಿ ಬರ್ತೇವೆ ಅಷ್ಟೇ: ಪ್ರೀತಿ, ಕಮಿಟ್‍ಮೆಂಟ್ ಇಲ್ಲ: ಹಿರಿಯ ನಟ ಅಶೋಕ್
ನಾಟಕ ನಿಂತು ಹೋದ ಮೇಲೆ ಸಿನಿಮಾ ಒಂದೇ ಮನರಂಜನೆಯಾಗಿತ್ತು. ಹೀಗಾಗಿ ನಟರು, ನಿರ್ದೇಶಕರು, ನಿರ್ಮಾಪಕರು ಪ್ರೀತಿಯಿಂದ ಕೆಲಸ ಮಾಡುತ್ತಿದ್ದರು., ಈಗ ಶೂಟಿಂಗ್‍ಗೆ ಹೋಗ್ತೇವೆ ಬರ್ತೇವೆ ಅಷ್ಟೇ. ಯಾರಿಗೂ ಕಮಿಟ್‍ಮೆಂಟ್ ಇಲ್ಲ.
1974ರಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂದು ಸಿನಿಮಾ ಒಂದೇ ಎಲ್ಲರ ಮನರಂಜನೆಯ ತಾಣ. ಹೀಗಾಗಿ ಎಲ್ಲರೂ ಪ್ರೀತಿ,ವಿಶ್ವಾಸದಿಂದ ಕೆಲಸ ಮಾಡುತ್ತಿದ್ದವು. ಈಗ ಅದನ್ನು ಹುಡುಕಬೇಕಾಗಿದೆ ಅಂದು-ಇಂದಿನ ಅನುಭವವನ್ನು ಬಿಚ್ಚಿಟ್ಟರು ಹಿರಿಯ ನಟ ಅಶೋಕ್.
ಸಿಂಧು ಶ್ರೀನಿವಾಸಮೂರ್ತಿ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಪಿಆರ್‍ಕೆ ಪ್ರೊಡಕ್ಷನ್ ನಿರ್ಮಾಣದ ಅಚಾರ್ ಅಂಡ್ ಕೋ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿರುವ ಅಶೋಕ್ ಅವರು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವಿಷಯ ಹಂಚಿಕೊಂಡರು.
ಚಿತ್ರರಂಗದ ಬಗೆಗಿನ ಕಮಿಟ್‍ಮೆಂಟ್ ಯಾರಿಂದ ಬರಬೇಕು.ಹೇಗೆ ಬರಬೇಕು ಎನ್ನುವುದೂ ಗೊತ್ತಿಲ್ಲ. ಈಗಂತೂ ಡಬ್ಬಿಂಗ್ ಬರುತ್ತಿರುವ ಹಿನ್ನೆಲೆಯಲ್ಲಿ ಯಾರು ಯಾವ ಭಾಷೆ ಸಿನಿಮಾ ಕೂಡ ನೋಡಬಹುದು, ಗುಣಮಟ್ಟ ಮತ್ತು ಅದ್ದೂರಿ ಮೇಕಿಂಗ್ ಎಲ್ಲಿದೆಯೋ ಆ ಸಿನಿಮಾ ನೋಡ್ತಾರೆ.
ಕನ್ನಡ ಸೇರಿದಂತೆ ಹೀಗಿರುವಾಗ ಪ್ರಾದೇಶಿಕ ಭಾಷೆಗಳು ಉಳಿಯುತ್ತಾವಾ ಎನ್ನುವ ಆತಂಕ ಸೃಷ್ಠಿಯಾಗಿದೆ. ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸಲು ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ಏಕರೂಪ ಪ್ರವೇಶದರ ನಿಗಧಿ ಮಾಡಬೇಕು ಎನ್ನುವ ಆಗ್ರಹ ಅವರದು.
ಕನ್ನಡ ಚಿತ್ರದ ಉಳಿವಿಗಾಗಿ ರಾಜ್ಯ ಸರ್ಕಾರ ಮತ್ತು ಚಿತ್ರರಂಗ ಒಗ್ಗೂಡಿ ಕೆಲಸ ಮಾಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಎದುರಾಗಿದೆ. ಮಲ್ಟಿಫ್ಲೆಕ್ಸ್ ಮಾಲೀಕರೆಲ್ಲಾ ಪರ ಭಾಷಿಕರು ತಮ್ಮ ಸಮಸ್ಯೆ ಕೇಳುವ ಗೋಜಿಗೆ ಹೋಗುವುದಿಲ್ಲ. ಎನ್ನುವುದೇ ದುರದುಷ್ಟಕರ.
ಆದರೂ ಕನ್ನಡ ಚಿತ್ರರಂಗ ಮತ್ತೆ ವಿಜೃಂಬಣೆಯಿಂದ ಮತ್ತೆ ಮೆರೆಯಬೇಕಾದ ಕಾಲಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು ಹಿರಿಯ ನಟ ಅಶೋಕ್.
ಆಚಾರ್ ಅಂಡ್ ಕೋ ಚಿತ್ರದಲ್ಲಿ ಕೆಲಸ ಮಾಡುವ ಆರಂಭದಲ್ಲಿ ಎಲ್ಲಾ ಹೊಸ ಹುಡುಗರು ಇವರ ಜೊತೆ ಹೇಗೆ ಕೆಲಸ ಮಾಡುವುದು ಎಂದು ಮೊದ ಮೊದಲು ಅನ್ನಿಸಿತ್ತು. ಆದರೆ ನಿರ್ದೇಶಕ ಸಿಂಧು ಶ್ರೀನಿವಾಸಮೂರ್ತಿ ಅವರ ಕೆಲಸದ ಬದ್ದತೆ ಮತ್ತು ಅವರಿಗಿರುವ ಕಾಳಜಿ ನೋಡಿ ಚಿತ್ರದ ಕುರಿತು ವಿಶೇಷ ಸಿನಿಮಾ ಆಗಬಹುದು ಎನ್ನುವ ವಿಶ್ವಾಸ ಆಗಲೇ ಮೂಡಿತ್ತು. ಚಿತ್ರದಲ್ಲಿ ಹಿರಿಯ ನಟಿ ಸುಧಾ ಬೆಳವಾಡಿ ಅವರು ಹೆಂಡತಿಯ ಪಾತ್ರ ಮಾಡಿದ್ದಾರೆ ಎನ್ನುವ ಮಾಹಿತಿ ನೀಡಿದರು.