"Just Married" to hit screens on August 22
“ಜಸ್ಟ್ ಮ್ಯಾರೀಡ್” ಚಿತ್ರ ಆಗಸ್ಟ್ 22ಕ್ಕೆ ತೆರೆಗೆ
ಸಿ.ಆರ್ ಬಾಬಿ ನಿರ್ದೇಶನದ ಹಾಗೂ ಶೈನ್ ಶೆಟ್ಟಿ – ಅಂಕಿತ ಅಮರ್ ಅಭಿನಯದ ಈ ಚಿತ್ರ ಆಗಸ್ಟ್ 22ರಂದು ತೆರೆಗೆ ಬರಲು ಸಜ್ಜಾಇದೆ.
“ಕಾಂತಾರ”ದಂತಹ ವಿಶ್ವಪ್ರಸಿದ್ದ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ “ಜಸ್ಟ್ ಮಾರೀಡ್” ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಶೈನ್ ಶೆಟ್ಟಿ ಹಾಗೂ ಅಂಜಕಿ ಅಮರ್ ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರ ಆಗಸ್ಟ್ 22 ರಂದು ತೆರೆಗೆ ಬರುತ್ತಿದೆ. ಅನೇಕ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿರುವ ಹೆಸರಾಂತ ಸಿನಿಮಾ ವಿತರಣಾ ಸಂಸ್ಥೆ ವಿ.ಕೆ ಫಿಲಂಸ್ ವಿಶಾಲ ಕರ್ನಾಟಕಕ್ಕೆ “ಜಸ್ಟ್ ಮ್ಯಾರೀಡ್” ಚಿತ್ರವನ್ನು ವಿತರಣೆ ಮಾಡಲಿದೆ.
ಭಾರತದ ಹೆಸರಾಂತ ಹಾಗೂ ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಮೂಡಿಬಂದಿರುವ “ಜಸ್ಟ್ ಮ್ಯಾರೀಡ್” ಚಿತ್ರವನ್ನು ತೆರೆಯ ಮೇಲೆ ನೋಡಲು ಕನ್ನಡ ಕಲಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

