sibbandi bembala BMTC staff support the promotion of the film "Kothalavadi
“ಕೊತ್ತಲವಾಡಿ” ಚಿತ್ರದ ಪ್ರಚಾರಕ್ಕೆ ಬಿಎಂಟಿಸಿ ಸಿಬ್ಬಂದಿ ಬೆಂಬಲ
ಪೃಥ್ವಿ ಆಂಬರ್ ಮತ್ತು ಕಾವ್ಯ ಶೈವ ಅಭಿನಯದ ” ಕೊತ್ತಲವಾಡಿ” ಚಿತ್ರಕ್ಕೆ ನಾಯಕ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಬಂಡವಾಳ ಹಾಕಿರುವುದು ಗೊತ್ತೇ ಇದೆ

ಪುಷ್ಪ ಅವರ ಪತಿ ಅರುಣ್ ಕುಮಾರ್, ಈ ಮುಂಚೆ ಬಿಎಂಟಿಸಿ ಮತ್ತು ಕೆಎಸ್ ಆರದ ಟಿಸಿಯಲ್ಲಿ ಚಾಲಕರಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನದಿಂದ ಬಿಎಂಟಿಸಿ ಸಿಬ್ಬಂದಿ ಕೊತ್ತಲವಾಡಿ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.
.
ನಾಯಕ ಯಶ್ ಅವರ ತಂದೆ ಅರುಣ್ ಕುಮಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡ ಸಿಬ್ಬಂದಿ ” ಕೊತ್ತಲವಾಡಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಯಶ್ ಅವರ ಪೋಷಕರು ನಿರ್ಮಾಣ ಮಾಡಿದ ಸಿನಿಮಾ ಕೊತ್ತಲವಾಡಿ ಇದೇ ಆಗಸ್ಟ್ 1 ಕ್ಕೆ ಬಿಡುಗಡೆ ಆಗಲಿದೆ. ಚಾಮರಾಜನಗರ ಭಾಗದ ಗ್ರಾಮೀಣ ಸೊಗಡಿನಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

